Welcome

All from Welcome

Welcome

" Janani Janma Bhoomishcha Swarghadapi Gariyasi..."

"Mother and Mother Land are greater than haven`s nothing can be holier to us than this land. Every particle of dust , everything, living and non living, every stock and stone, tree and rivulet of this land is HOLY TO US..."

Curious Karnataka is all about our Mother Land, We have accumulated a lot of facts, pictures, unknown stories, unknown places and useful information in our website.

We are providing the complete information of Karnataka state, Its Places, People Heritage, Culture, Folk Arts and many more details.

Keep your journey continue, We are here to help you 24 x 7 to make your journey comfortable . 

Keep Asking What, Where, Who, When, Why, How...?, Whenever & Wherever...!

ಚಿಕ್ಕಮಗಳೂರು ಜಿಲ್ಲೆ

ಚಿಕ್ಕಮಗಳೂರು ಜಿಲ್ಲೆ ಕರ್ನಾಟಕ ರಾಜ್ಯದ ಪಶ್ಚಿಮ ದಿಕ್ಕಿನ ಪಶ್ಚಿಮ ಘಟ್ಟಗಳ ಮಾಲಿಕೆಯಲ್ಲಿದೆ. ಸಹ್ಯಾದ್ರಿಯ ಪರಿಸರದಲ್ಲಿ ಪ್ರಕೃತಿಯ ಆಡುಂಬೊಲ ರಮಣೀಯವಾದ ಮಲೆನಾಡು ಪ್ರದೇಶವಿದು. ದಟ್ಟವಾದ ನಿಬಿಡವಾದ ಗಿರಿಕಾನನಗಳಿಂದಲ್ಲೂ ಚಹಪುಡಿ, ಪಾಫಿಪುಡಿ, ರಬ್ಬರ್, ತೋಟಗಳಿಂದಲೂ, ಸಮೃದ್ಧವಾದ ಸಂಪನ್ಮೂಲಗಳಿಂದಲೂ, ಭೂಗರ್ಭದೊಳಗಿರುವ ಆಪಾರ ಬೆಲೆಯುಳ್ಳ ಖನಿಜ ಸಂಪತ್ತಿನಿಂದಲೂ ತುಳುಕಿದೆ. ಇಲ್ಲಿ ಪ್ರವಹಿಸುವ ಪವಿತ್ರ ನದಿಗಳು, ಅಲ್ಲಲ್ಲಿಗೆ ನೆಲೆಗೊಂಡಿರುವ ಧರ್ಮಕ್ಷೇತ್ರಗಳು, ಗುರುಪೀಠಗಳು ಇಲ್ಲಿವೆ. ಉನ್ನತ ಗಿರಿಶಿಖರಗಳು ಗಿರಿಧಾಮಗಳು ಪ್ರಕೃತಿಯ ಸುಂದರ ಪರಿಸರ ಈ ಜಿಲ್ಲೆಯನ್ನು ಸಂಪತ್ಸಮೃದ್ಧಗೊಳಿಸಿವೆ.


ಜಿಲ್ಲೆಯ ಐತಿಹಾಸಿಕ ಪರಿಸರ

    ಚಿಕ್ಕಮಗಳೂರು ಜಿಲ್ಲೆ ಉತ್ತರಕ್ಕೆ ಶಿವಮೊಗ್ಗ ಜಿಲ್ಲೆ, ಪೂರ್ವಕ್ಕೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳು, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ತನ್ನ ಸೀಮೆಯನ್ನಾಗಿಸಿಕೊಂಡಿದೆ. ಇಲ್ಲಿಯ ಮುಳ್ಳಯ್ಯನ ಗಿರಿ ನಮ್ಮ ನಾಡಿನಲ್ಲಿಯೇ ಎತ್ತರವಾದ ಶಿಖರ, ಸಮುದ್ರಮಟ್ಟದಿಂದ 920 ಮೀಟರ್ ಎತ್ತರದಲ್ಲಿದೆ. ಇದರೊಂದಿಗೆ ಬಾಬಾಬುಡಗಿರಿ, ಕಲ್ಪತ್ತಿಗಿರಿ, ಕುದುರೆಮುಖ, ಸೀತಾಳಯ್ಯನಗಿರಿ, ಬಲ್ಲಾಳರಾಯನದುರ್ಗಗಳು ಹೆಸರಿಸಬಹುದಾದ ಶಿಖರಗಳೆನಿಸಿವೆ. ಬಾಬಾಬುಡನ ಸಂತರ ಸಮಾಧಿ ಇದೆ. ಈ ಪವಿತ್ರ ಕ್ಷೇತ್ರವು ಶ್ರೀ ದತ್ತಾತ್ರೇಯ ಸ್ವಾಮಿ ಬಾಬಾಬುಡನ್‍ಸ್ವಾಮಿ ಜಗದ್ಗುರು ಪೀಠವೆಂದು ಪ್ರಸಿದ್ಧವಾಗಿದೆ.

ಕೆಳದಿ

ಕೆಳದಿ ಸಂಕ್ಷಿಪ್ತ ಇತಿಹಾಸ

ಕ್ರಿ.ಶ.1499ರಲ್ಲಿ ಜನ್ಮ ತಾಳಿದ ಕೆಳದಿ ಸಂಸ್ಥಾನಕ್ಕೆ ದಕ್ಷಿಣ ಭಾರತದ ಇತಿಹಾದಲ್ಲಿ ವಿಶಿಷ್ಟ ಸ್ಥಾನವಿದೆ. ಮಧ್ಯಕಾಲೀನ ಇತಿಹಾಸ ಕೊನೆಯ ಹಾಗೂ ಆಧುನಿಕ ಯುಗದ ಮೊದಲ ಕಾಲದ ಅರಸು ಮನೆತನಗಳಲ್ಲಿ ಈ ಮನೆತನವು ಪ್ರಮುಖವಾದುದು. ಕ್ರಿ.ಶ.1565ರಲ್ಲಿ ವಿಜಯನಗರದ ಪತನದ ನಂತರ ಇವರು ಸ್ವತಂತ್ರರಾದರೂ ವಿಜಯನಗರದವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದವರಿವರು. ತಮ್ಮ 263 ವರ್ಷ ಆಡಳಿತದ ಅವಧಿಯಲ್ಲಿ ರಾಜಕೀಯ, ಆಡಳಿತ,  ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ನೈಪುಣ್ಯತೆಯನ್ನು ತೋರುತ್ತಾ ವಿಜಯನಗರದ ಸಂಸ್ಕೃತಿಗೆ ಕುಂದು ಬಾರದಂತೆ ನಡೆದು ಬಂದರು.

ಕೆಳದಿ ಇತಿಹಾಸ ಆಕರಗಳು:

         ದೇಶದ ಯಾವುದೇ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಾಧ್ಯವಾದ ಮಟ್ಟಿಗೆ ತಿಳಿಯಲು ಮುಖ್ಯ ಆಕರಗಳೆಂದರೆ ಆಯಾ ಪ್ರದೇಶದಲ್ಲಿ ದೊರೆಯುವ ಸಾಹಿತ್ಯಕ ಆಧಾರಗಳು, ಪ್ರವಾಸಿಗರ ವರದಿಗಳು, ಐತಿಹ್ಯಗಳು, ಯಾವುದೇ ಪ್ರಕಾರದ ವಸ್ತುಗಳ ಅವಶೇಷಗಳು, ಪುರಾತತ್ವ ಅವಶೇಷಗಳು. ಅಂದರೆ ಜನ ವಾಸ್ತವ್ಯದ ಹಳ್ಳಿ, ಪಟ್ಟಣ ಮೊದಲಾದ ನೆಲೆಗಳು ಮೊದಲಾದವುಗಳು. ಇದು ಮಧ್ಯ ಯುಗದ ಕೆಳದಿ ಕಾಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯಲು ಅನ್ವಯಿಸುತ್ತದೆ. ಕೆಳದಿ ಇತಿಹಾಸಕ್ಕೆ ಕೆಳದಿ ಆಡಳಿತದ ಕೊನೆಯ ಕಾಲದಲ್ಲಿದ್ದ ಲಿಂಗಣ್ಣ ಕವಿ ರಚಿಸಿದ ಕೆಳದಿ ನೃಪವಿಜಯ ಮತ್ತು ಕೆಳದಿ ರಾಜನಾದ ಬಸಪ್ಪನಾಯಕನು ರಚಿಸಿದ ಶಿವತತ್ವರತ್ನಾಕರ ಪ್ರಮುಖವಾಗಿದೆ.