SriRangaPatna Taluk

ಶ್ರೀರಂಗಪಟ್ಟಣದ ದೇವಾಲಯಗಳು:-

                           ಇದೊಂದು ಕಾವೇರಿ ತೀರದ ದ್ವೀಪವಾಗಿದ್ದು, ಪೌರಾಣಿಕ ಹಿನ್ನೆಲೆಯಂತೆ ಕಾವೇರಿಯ ತಪಸ್ಸಿಗೆ ರಂಗನಾಥನು ಇಲ್ಲಿ ಪ್ರತ್ಯಕ್ಷಗೊಂಡು ಕಾವೇರಿಗೆ ಗಂಗೆಗಿಂತಲೂ ಹೆಚ್ಚಿನ ಪಾವಿತ್ರ್ಯತೆಯನ್ನು ಕರುಣಿಸಿದನಂತೆ. ನಂತರದಲ್ಲಿ ಗೌತಮ ಮತ್ತು ಅಹಲ್ಯಾ ಋಷಿದಂಪತಿಗಳು ಆಶ್ರಮವಾಸಿಗಳಾಗಿ ಇಲ್ಲಿ ನೆಲೆಸಿದ್ದರಿಂದ ‘ಗೌತಮಕ್ಷೇತ್ರ’ ಎಂದು ಹೆಸರಾಯಿತು. ಕಾವೇರಿ ನದಿ ದಂಡೆಯ ಮೇಲೆ ತುಳಸೀವನದಲ್ಲಿ ಮಹರ್ಷಿಗಳೇ ಶ್ರೀರಂಗನಾಥನನ್ನು ಪ್ರತಿಷ್ಠಾಪಿಸಿ ಅರ್ಚಿಸುತ್ತಿದ್ದರಂತೆ. ಇಲ್ಲಿಂದಲೇ ಶ್ರೀರಂಗನಾಥನ ಹೆಸರು ಈ ಸ್ಥಳಕ್ಕೆ ಬೇರೂರಿತು. ಶಿಲೆಯ ಬಳಕೆಗಿಂತ ಮುಂಚೆ ಮಣ್ಣು ಅಥವಾ ಕಾಷ್ಠಗಳಿಂದ ವಿಗ್ರಹ ಮತ್ತು ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು. ಚಾರಿತ್ರಿಕವಾಗಿ ಕ್ರಿ.ಶ. 894ರಲ್ಲಿ ಗಂಗರಸರ ದಂಡನಾಯಕ ತಿರುಮಲಯ್ಯ ಎಂಬಾತನು ಶ್ರೀರಂಗನಾಥನ ವಿಗ್ರಹ ಮತ್ತು ಗುಡಿಯನ್ನು ನಿರ್ಮಿಸಿದನೆಂಬ ಅಂಶ ತಿಳಿದು ಬರುತ್ತದೆ. ಇದಕ್ಕೂ ಮುನ್ನ ಹಂಬಿ ಎಂಬ ದೇವದಾಸಿ ಕ್ರಿ.ಶ. 817ರಲ್ಲಿ ರಂಗನಾಥನ ಗುಡಿಯೊಂದನ್ನು ಕಟ್ಟಿಸಿದಳೆಂದು ಹೇಳಲಾಗುತ್ತದೆ. ನಂತರದಲ್ಲಿ ದ್ವೀಪದ ಮತ್ತು ದೇವಾಲಯಗಳ ಅಭಿವೃದ್ಧಿ ಆಯಾ ರಾಜಮನೆತನಗಳ ಮೇಲೆ ಅವಲಂಬಿತವಾಯಿತು. ಒಟ್ಟಿನಲ್ಲಿ ಇಲ್ಲಿಯ ಸ್ಥಳನಾಮ ಆದಿಯಿಂದಲೂ ದೈವಸೂಚಿಯಾಗಿಯೇ ಬಂದಿದೆ.

                                 ಪ್ರಾಚೀನ ಶಾಸನಗಳಲ್ಲಿ ಶ್ರೀರಂಗಧಾಮ, ಶ್ರೀರಂಗಪುರ, ಶ್ರೀಪಶ್ಚಿಮರಂಗಪಟ್ಟಣ ಎಂದೆಲ್ಲ ಉಲ್ಲೇಖಿತಗೊಂಡಿದೆ. ಭೌಗೋಳಿಕ ಹಿನ್ನೆಲೆಯ ಮೇರೆಗೆ ‘ಉಭಯ ಕಾವೇರಿ ಮಧ್ಯವರ್ತಿ’ ಎಂದೂ ಸಹ ಕರೆಯಲಾಗಿದೆ.




Showing 1 to 13 of 13 (1 Pages)