Madikeri Taluk

ಪ್ರವಾಸಿಗರೇ ಕೈ ಮುಗಿದು ಮಡಿಕೇರಿಗೆ ಬನ್ನಿ.....!

         ಪ್ರಕೃತಿಯ ಸಿರಿಯಲ್ಲಿ ಮೈದುಂಬಿ ನಿಂತಿರುವ ಚೆಲಯವ ಮಡಿಕೇರಿಗೆ ಬರುತ್ತಿರುವ ಓ ಯಾತ್ರಿಕನೆ ನಿಮಗಿದೊ ಸುಸ್ವಾಗತ. ನೀನು ಬಂದ ದಾರಿಯಲ್ಲಿಯೇ ಆ ಬೆಟ್ಟಗಳ ಸಾಲುಗಳು ನಿನಗೆ ಸ್ವಾಗತ ನೀಡಿರಬಹುದು. ಕುಳಿರ್ಗಾಳಿ ಸ್ವಾಗತ ಗೀತೆ ಹಾಡಿಬಹುದು. ಸುಬಗಿನ ರಂಗು ಪಡೆದ ಆ ವೃಕ್ಷ ಸುಮಾರಾಜಿಗಳು ನಿನಗೆ ತಲೆಬಾಗಿ ವಂದಿಸಿರಬಹುದು. ಅದೆಲ್ಲವೂ ನಿನಗೆಯೇ! ಯಾತ್ರಿಕನೆ ಬಾವುಕರ ಭಾವನೆಗಳನ್ನುಕ್ಕಿಸಲು ಅವು ಸಮರ್ಥವಾದವುಗಳೇ.

       ಸೃಷ್ಟಿಯ ಸ್ನಿಗ್ಧ ಸೌಂದರ್ಯವೆನ್ನೀಕ್ಷಿಸುತ್ತಾ ಮನಸಿಗುಣಿಸು ನೀಡುತ್ತಾ ಬಂದ ನೀನು ಅದೇಕೆ ಬೆರಗುವಡೆದು ಅಲ್ಲೆನಿಂತೆ. ಓಹೋ.... ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಗುಡ್ಡೆಮನೆ ಅಪ್ಪಯ್ಯ ಗೌಡ, ಜನರಲ್ ತಿಮ್ಮಯ್ಯ ಮತ್ತು ಮಂಗೇರಿರ ಮುತ್ತಣ್ಣನವರಿಗೆ ಗೌರವ ವಂದನೆ ನೀಡುತ್ತಿರುವೆಯಾ? ಆಳೆತ್ತರದಲ್ಲಿ ನಿಂತಿರುವ ಈ ಭವ್ಯಾಕೃತಿ ನಿನ್ನಲ್ಲಿ ವೀರ ರಸವನ್ನೇ ಉಕ್ಕಿಸಬಹುದಲ್ಲವೇ? ನಿನಗೆ ಮಾತ್ರವಲ್ಲ, ಹಿಂದೆಯೂ, ಇಂದೂ, ಮುಂದೆಯೂ ಅವರು ಜನರು ಮನಸ್ಸಿನಲ್ಲಿ ತಮ್ಮ ವೀರ ಗೀತೆಯ ವಾದ್ಯ ನುಡಿಸುತ್ತಿರುವರು ಎಂಬುದಕ್ಕೆ ಈ ಪ್ರತಿಮೆಗಳು ಸಾಕ್ಷಿ.

     ಭಾರತದ ಸ್ವಿಟ್ಜರ್ಲೇಂಡ್, ಕನ್ನಡ ತಾಯಿಯ ಮುಕುಟಮಣಿಯಂತೆ ರಾರಾಜಿಸುವ, ಗಂಡು ಮಟ್ಟಿನ ಹಾಗೂ ಕೋಟ್ಯಾಂತರ ಜನರ ಜೀವನದಿ, ಕಾವೇರಿ ಮಾತೆ ಹರಿಸಿದನಾಡು ಕೊಡಗು ಜಿಲ್ಲೆ. ಮಡಿ ಕೇರ ಕೊಡಗುನ ಮುಖ್ಯಪಟ್ಟಣ, ಅರ್ಥಾತ್ ರಾಜಧಾನಿ. ಸುಮಾರು 334 ವರ್ಷಗಳ ಹಿಂದೆ ರೂಪುಗೊಂಡ ಈ ರಾಜಧಾನಿ ಪ್ರಕೃತಿಶ್ರೀಯ ಮಡಿಲಲ್ಲಿ ಮೈವೆತ್ತಿ ನಿಂತ ವೈಶಿಷ್ಟ್ಯ ಪೂಣ್ವಾದ ಸುದೀರ್ಘ ಐತಿಹಾಸಿಕ ಹಿನ್ನೆಲೆಯಿರುವ ಸುಂದರ ಪಟ್ಟಣ. ಅಂದು ಕೊಡಗನ್ನು ಆಳಿದ ಹಾಲೇರಿ ವಂಶ ಅರಸ ಮುದ್ದು ರಾಜ ಕಾಲದಲ್ಲಿ 1681 ರಲ್ಲಿ ಮೊದಲ ಬಾರಿಗೆ ಸ್ಥಾಪನೆಗೊಂಡ ‘ರಾಜಧಾನಿ’ ಪಟ್ಟಣವು ಇಂದಿನವರೆಗೂ ಕುಡಗಿನ ಮುಖ್ಯಪಟ್ಟದಣವಾಗಿಯೇ ಉಳಿದುಕೊಂಡಿದೆ. ಸಮುದ್ರ ಮಟ್ಟದಿಂದ 3,900 ಅಡಿ ಎತ್ತರದಲ್ಲಿದೆ.

   ಮಡಿಕೇರಿಯ ಮೂಲ ಇತಿಹಾಸದ ಪುಟಗಳಲ್ಲಿರುವಂತೆ “ಮುದ್ದು ರಾಜಕೇರಿ” ಈ ಪಟ್ಟಣವನ್ನು ನಿರ್ಮಿಸಿದ ಮುದ್ದ ರಾಜನಿಂದಾಗಿ ಬಂದ ಈ ಹೆಸರು ಕ್ರಮೇಣ “ಮುದ್ದುಕೇರಿ” ಎಂದು ಬಳಕೆಯಲ್ಲಿ ಬಂದು ಕೊನೆಗೆ ಅದು “ಮಡಿಕೇರಿ” ಎಂದೇ ಪ್ರಸಿದ್ದವಾಯಿತು. ಆಂಗ್ಲರ ಆಡಳಿತದ ಸಂದರ್ಭದಲ್ಲಿ ಮಡಿಕೇರಿ “ಮರ್ಕೆರಾ” ಎಂಬುದಾಗಿ ಪರಿವರ್ತನೆಗೊಡಿತು.

     ಕರ್ನಾಟಕದ ಕಾಶ್ಮೀರದಂತಿರುವ ಮಡಿಕೇರಿ ಗಿರಶಿಖರಗಳಿಂದ ಕೂಡಿದೆ. ದಿವಗಂಗತ  ಡಿ. ವಿ. ಜಿ. ಈ ನಗರವನ್ನು ನೋಡಿ “ನಡೆದು ನೋಡ ಕೊಡಗಿನ ಬೆಡಗಂ” ಎಂಬ ಉದ್ಗಾರದಿಂದ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಪ್ರಕೃತಿ ಈ ನಗರದ ಸುತ್ತ ಅಪರಿಮಿತ ಚೆಲುವನ್ನು  ಪಸರಿಸಿದೆ. ಬೇಸಿಗೆಯಲ್ಲಿ ಬೀಸುವ ತಂಪಾದ ಗಾಳಿ ಹಿತವಾಗಿ ಬಯಲು ಸೀಮೆಯಿಂದ ಅಥವಾ ಕರಾವಳಿಯಿಂದ ಬಂದವರನ್ನು ತಣಿಸುತ್ತದೆ. ಚಳಿಗಾಲದಲ್ಲಿ ಬಂದವರು ತಮ್ಮ ಉಣ್ಣೆಯ ಬಟ್ಟೆ, ಸ್ವೆಟರ್, ಜರ್ಕೀನ್ ಇತ್ಯಾದಿ ಸರಕನ್ನೆಲ್ಲ ಹೊರಕ್ಕೆ ತೆಗೆದು ಧರಿಸುವಂತೆ ಚಳಗಾಲ ಬೀಸುತ್ತದೆ.

      ಮಡಿಕೇರಿಯ ಸ್ವಚ್ಚತೆ ಬಯಲು ಸೀಮೆಯವರನ್ನು ಬೆರಗುಗೊಳಿಸುತ್ತದೆ. ಮಡಿಕೇರಿ ಎಂದರೆ ಮಡಿಯಾಗಿರುವ, ಸ್ವಚ್ಚವಾಗಿರುವ ಊರು ಎಂಬುದಾಗಿ ಎಲ್ಲರೂ ಹೇಳುವರು. 1811 ರಲ್ಲಿ ಮಡಿಕೇರಿಗೆ ಭೇಟಿ ನೀಡಿದ್ದ ಜನರಲ್ ವೆಲ್ಫ್ “ದಿಟೌನ್ ಈಸ್ ರಿಮಾರ್ಕೇಬಲೀ ಕ್ಲೀನ್ ಅಂಡ್ ವೆಲ್ ಬೆಲ್ಟ್” ಎಂದು ಮಡಿಕೇರಿಯ ಬಗೆಗೆ ಉದ್ಗಾರ ತೆಗಿದಿದ್ದಾರೆ. 

      ಕೊಡಗಿನ ದುರೆಗಳು ಮಡಿಕೇರಿ ನಗರ ಸ್ಥಾಪನೆಯಾಗುವ ಮುನ್ನ ಮಡಿಕೇರಿಯಿಂದ 10 ಕಿ. ಮೀ. ದೂರದ ಹಾಲೇರಿಯಲ್ಲಿ ಇದ್ದರು. ದೊರೆ ಮುದ್ದು ರಾಜನು ಬಹುಶಃ ಆ ಸ್ಥಳವು ಎತ್ತರದ ಸ್ಥಾನದಲ್ಲಿದ್ದು, ಶ್ರೇಷ್ಠವೆನ್ನಿಸಿದ್ದರಿಂದ ಈಗಿನ ಕೋಟೆ ಇರುವ ಭಾಗವನ್ನು ಆಯ್ದು ಅಲ್ಲಿ ಒಂದು ಮಣ್ಣಿನ ಕೋಟೆಯನ್ನು ಒಳಗೆ ತನ್ನ ನಿಲಯವನ್ನೂ ಕಟ್ಟಿಸಿದು. ಹೀಗೆ 1681 ರಲ್ಲಿ ರೂಪುಗೊಂಡ ಸ್ಥಳಕ್ಕೆ “ಮುದ್ದು ರಾಜಕೇರಿ” ಎಂಬ ನಾಮಕರಣ ಮಾಡಿದನು. ಶುಕ್ರವಾರಸಂತೆ, ಜಫರಾ ಬಾದ್ ಎಂಬ ಬೇರೆ ಎರಡು ಹೆಸರುಗಳೂ ಈ ಊರಿಗೆ ಇವೆ. ಆದರೆ ಕೊನೆಗೆ ಮುದ್ದು ರಾಜಕೇರಿಯೇ ರೂಪಾಂತರಗೊಂಡ ಹೆಸರಿನಿಂದ ಉಳಿದುಕೊಂಡಿತು. ಸುಮಾರು 1815 ರವರೆಗೂ ರೂಪಾಂತರ ಹೊಂದಿರದೇ ಹೆಸರೇ ಉಳಿದಿತ್ತೆಂಬುದಕ್ಕೆ ಪುರಾವೆಗಳಿವೆ. 1815 ರಲ್ಲಿ ಕೊಡಗಿನ ಸರ್ವೆ ಮಾಡಲು ಈಸ್ಟ್ ಇಂಡಿಯಾ ಕಂಪನಿಯಿಂದ ನೇಮಕವಾಗಿ ಬಂದಿದ್ದ ಲೆಪ್ಟಿನೆಂಟ್ ಕೊನ್ನರನು ಈ ಊರನ್ನು  “ಒuಜಜuಞಚಿಥಿಡಿಚಿಥಿ” ಎಂದೆ ಕರೆದಿದ್ದಾರೆ. ಈ ಮುದ್ದು ರಾಜಕೇರಿ ಎಂಬ ಹೆಸರು ಕ್ರಮೇಣ ನಾನಾ ರೂಪಗಳನ್ನು ತಾಳೂತ್ತಾ ಮುಂದೆ ಮುದ್ದು  ಕೆರಿ, ಮಡಿಕೇರಿ ಎಂದು ಸ್ಥಾನಿಕ ಜನರ ಬಾಯಲ್ಲಿ ನಲಿದಾಡಿರಬೇಕು.

       ಆಂಗ್ಲರ ಉಚ್ಚಾರದಲ್ಲಿ ಭಾರತ ವಿವಿಧ ಪ್ರದೇಶಗಳ “ಡ” ಪ್ರಕಾರ ಕಳೆದುಕೊಂದು “ರ” ಕಾರಕ್ಕೆ ಪರಿವರ್ತನೆಗೊಂಡಿದೆ. ಒಡಿಸ್ಸಾ ಒರಿಸ್ಸಾದಂತೆ, ಹೌಡಾ ನದಿ ಹೌರಾ ಆದಂತೆ, ಕನ್ನಡ ಕೆನರ ಆದಂತೆ ಮಡಿಕೇರಿಯು ಒuಡಿಛಿಚಿಡಿಚಿ, ಒeಡಿಛಿಚಿಡಿಚಿ                                         ಎಂಬ ರೂಪಾಂತರಗಳನ್ನು ಹೊಂದಿ ಕೊನೆಗೆ ಮಡಿಕೇರಿ- ಒeಡಿಛಿಚಿಡಿಚಿ  ಎಂಬ ಹೆಸರುಗಳು ಸ್ಥಿರವಾಗಿ ಉಳಿದುಕೊಂಡಿದೆ.

       ಹಾಲೇರಿ ದೊರೆ ಕೋಟೆಯಲ್ಲಿ ನೆಲೆಸಿದ್ದರಿಂದ ಅವನ ಸೈನಿಕರು, ಸೇವೆಕರು, ಅಧಿಕಾರಿಗಳು ಕೋಟೆಗೆ ಹೊರಗೆ ಸುತ್ತಮುತ್ತ ನೆಲೆಸಬೇಕಾಯಿತು. ಇದರಿಂದ ಮುಂದೆ ಒಂದು ಪುಟ್ಟದಾದ ಮಡಿಕೇರಿ ರೂಪಗೊಂಡಿತು. 1796 ರಲ್ಲಿ ದೊರೆ ವೀರರಾಜೇಂದ್ರನು ‘ಮಹದೇವಮ್ಮಾಜಿ’ ಎಂಬಾಕೆಯನ್ನು ವಿವಾಹವಾದಾಗ ಅವಲ ಹೆಸರಿನಲ್ಲಿ ‘ಮಹದೇವಪೇಟೆ’ ಎಂಬ ಬಡಾವಣೆಯನ್ನು ರೂಪಿಸಿದರು ಅದರಂತೆ ಗೌಳಿಗರ ಬೀದಿ,  ಬ್ರಾಹ್ಮಣರ ಓಣಿ, ರಾಣಿಪೇಟೆ. ಪೆನ್ ಷನ್ ಲೇನ್, ಇತ್ಯಾದಿ ವಿಸ್ತರಣೆಗಳಿಗೂ  ಐತಿಹಾಸಿಕ ಹಿನ್ನೆಲೆಗಳಿವೆ.

        ಮಡಿಕೇರಿಯಲ್ಲಿ ಕೊಡಗಿನ ಮುಖ್ಯ ಕಮೀಷನರ್ ರವರ ನಿವಾಸಕ್ಕಾಗಿ ಕಟ್ಟಿಸಲಾದ ಸುದರ್ಶನ ಅತಿಥಿ ಗೃಹ ಆಕಾಲಕ್ಕೆ ಅನೇಕ ಪ್ರವಾಸಿಗಳನ್ನೂ ಆಕರ್ಷಿಸಿತ್ತು ಮುಂದೆ ಮಡಿಕೇರಿ ಪಟ್ಟಣವಾಗಿ ಪರಿವರ್ತನೆಗೊಂಡಿತು. 1834 ರಲ್ಲಿ ಅಂದರೆ 140 ವರ್ಷಗಳಷ್ಟು ಹಿಂದೆಯೇ ಇಲ್ಲೋಂದು ಂಟಿgಟo ಗಿemಚಿಛಿuಟಚಿಡಿ  ಶಾಲೆ ಆರಂಭವಾಯಿತು. ಡಾ. ಮೊಗ್ಲಿಂಗ್ ನಂತಹ ಪ್ರಸಿದ್ಧ ಶಿಕ್ಷಣ ತಜ್ಞ 1855 ರಲ್ಲಿಯೇ ಮಡಿಕೇರಿಯ ಚಳುವಳಿಯನ್ನು ನಡೆಸಿದ ಕೀರ್ತಿ ಡಾ. ಮೊಗ್ಲಿಂಗ್ ಗೆ ಸಲ್ಲುತ್ತದೆ.

      ಪ್ರೇಕ್ಷಣೀಯ ಸ್ಥಳಗಳು : ಮಡಿಕೇರಿ ನಗರದುಳಗೆ ಕೆಲ ಪ್ರೇಕ್ಷಣೀಯ ಸ್ಥಳಗಳಿದ್ದ, ಅವುಗಳಲ್ಲಿ ಪ್ರಮುಖವಾಗಿ ಕೋಟಿ, ಅರಮನೆ, ಅದರೊಳಗಿನ ವಿಶಾಲವಾದ ರಾಜಾಂಗಣ ಭವ್ಯವಾಗಿದೆ. ಓಂಕಾರೇಶ್ವರ ದೇವಾಲಯವನ್ನೂ ಶಾಸ್ತ್ರೋಕ್ತ ವಿಧಿಪ್ರಕಾರವಾಗಿ ಶ್ರದ್ಧಾ ಭಕ್ತಿಗಳಂದ 1820 ರಲ್ಲಿ ಕೊಡಗಿನ ಅಳರಸ ಲಿಂಗರಾಜನು ನಿರ್ಮಿಸಿದ. ಈ ಶಿವಾಲಯವು ಮಹಮ್ಮದೀಯ ಶೈಲಿಯ ಶಿಲ್ಪಕಲಾ ಸೌಂದರ್ಯದಿಂದ ಶೋಭಿಸುತ್ತಿದೆ. ಇದು ಮೇಲ್ನೋಟಕ್ಕೆ ಜಗತ್ಪ್ರಸಿದ್ದ ತಾಜ್ ಮಹಲ್ ನಂತೆ ಹೋಲುತ್ತದೆ.

     ರಾಜರ ಗದ್ದುಗೆಗಳು : ಓಂಕೇಶ್ವರ ದೇವಾಲಯದಂತೆ ಕಾಣುವ ಐತಿಹಾಸಿಕ ಸೌಧಗಳು ಹಿಂದಿನ ರಾಜರ ಗೋರಿಗಳಾಗಿದೆ. ಗತ ವೈಭವವನ್ನೂ ಇಂದಿಗೂ ಸಾರಿ ಹೇಳವಂತಿದೆ.

     ರಾಜಸೀಟು : ಮಡಿಕೇರಿ ನಗರದ ದಕ್ಷಿಣ ತುದಿಯಲ್ಲಿ ನೆಲೆಸಿಗೊಂಡರುವ ರಾಜಾಸೀಟು ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ರಾಜರು ಸಂಜೆ ವೇಳೆ ಶದ್ದ ವಾಯು ಸೇವನೆ, ಮಾಸಿಕ ವಿಶ್ರಾಂತಿಗಾಗಿ ಅಲ್ಲಿ ಕುಳಿತು ಸೌಂದರ್ಯವನ್ನು ವೀಕ್ಷಿಸುತ್ತಿದ್ದರು. ಇಲ್ಲಿ ನಿಂತು ನೋಡಿದಾಗ ಮೈಲುಗಟ್ಟಲೆ ದೂರಕ್ಕೆ ವಿಶಾಲವಾಗಿ ಹರಡಿರುವ ಗದ್ದೆ ಬುಲುಗಳು, ಗಿರಿಕಂದರಗಳು, ಕಾನನಗಳು ಇವೆಲ್ಲವೂ ನಿತ್ಯ ಸ್ಮರಣೀಯ.

        ಮಡಿಕೇರಿಯ ನಾಲ್ದೆಸೆಗಳಿಗೆ ನಾಲ್ಕು ಸೇತುವೆಗಳು ಎನ್ನುವಂತೆ ಶಕ್ತಿ ದೇವತೆಗಳು ಮಡಿಕೇರಿಯಲ್ಲಿ ನೆಲೆಸಿದ್ದು, ಕುಂದುರುಮೊಟ್ಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ದೇವಾಲಯಗಳು ಇವೆ. ನವರಾತ್ರಿ ಸಂದರ್ಭ ಉತ್ಸವ ನಡೆಯುತ್ತಿರುತ್ತವೆ.

ಮಡಿಕೇರಿ – ಒಂದು ಸಮೀಕ್ಷೆ

   ಕೊಡಗು ಶ್ರೀ ಕಾವೇರಿ ಮಾತೆ ಹರಿಸಿದ ಮಾತೆ ಹರಸಿದ ನಾಡು. ಮಡಿಕೇರಿ ಕೊಡಗಿನ ಮುಖ್ಯಪಟ್ಟಣ. ಪ್ರಕೃತಿ ಮಾತೆಯ ಮಡಿಲಲ್ಲಿ ಮೈವೆತ್ತು ನಿಂತಿರುವ ಈ ಸುಂದರವಾದ ಪುರಕ್ಕೆ ತನ್ನದೇ ಆದ ವೈಶಿಷ್ಟ್ಯಪೂರ್ಣವಾದ ಸುದೀರ್ಘ ಇತಿಹಾಸದ ಹಿನ್ನಲೆ ಇದೆ. ವೈಭವಪೂರ್ಣವಾದ ಯೋಗ್ಯತೆಯ ಸಿರಿವಂತಿಕೆ ಇದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸ ಮುದ್ದುರಾಜನ ಕಾಲದಲ್ಲಿ 1681 ರಲ್ಲಿ ಮೊದಲ ಬಾರಿಗೆ ರೂಪುಗೊಂಡು ಈ ‘ರಾಜಧಾನಿ’ ಪಟ್ಟಣವು ಅಂದಿನಿಂ ಇಂದಿನ ತನಕವೂ ಕೊಡಗಿನ ಮುಖ್ಯ ಪಟ್ಟಣವಾಗಿಯೇ ಉಳದಿದೆ. ಸಮುದ್ರ ಮಟ್ಟದಿಂದ 3,900 ಅಡಿ ಎತ್ತರವಿರುವ ಮಡಿಕೇರಿಯಲ್ಲಿ ಇಂದು ಮೂರು ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು ಇಪ್ಪತ್ತು ಸಾವಿರ ಮಂದಿ ವಾಸವಾಗಿದ್ದಾರೆ.

      ಮಡಿಕೇರಿಯ ಮೂಲ ಇತಿಹಾಸದ ಪುಟಗಳಲ್ಲಿ.... ‘ಮುದ್ದು ರಾಜಕೇರಿ’ ಈ ಪಟ್ಟಣವನ್ನು ಕಟ್ಟಿಸಿದ ಮುದ್ದು ರಾಜನಿಂದಾಗಿ ಬಂದ ಈ ಹೆಸರು ಕ್ರಮೇಣ ‘ಮುದ್ದು ಕೇರಿ’ ಎಂದು ಬಳಕೆಯಲ್ಲು ಬಂದು ಕೊನೆಗೆ ಅದು ‘ಮಡಿಕೇರಿ’ ಎಂದು ಪ್ರಸಿದ್ದವಾಯಿತು. ಆಂಗ್ಲರಾಡಳಿತದ ಸಂದರ್ಭದಲ್ಲಿ ಮಡಿಕೇರಿ ‘ಮರಕೆರಾ’ ಎಂದು ಪರಿವರ್ತನೆಗೊಂಡಿತು. 1834 ರಲ್ಲಿ ಕೊಡಗು ಬ್ರಿಟಿಷರ ಆಳ್ವಿಕೆಗೆ ಒಳಗಾದ ನಂತರ ರಾಜಕೀಯ ಸ್ಥಾನಮಾನದಲ್ಲಿ ಒಂದು ಸಂಸ್ಥಾನವಾಗಿ ಉಳಿಯಿತು. ಚೀಫ್ ಕಮಿಶನರ ಆಡಳಿತಕ್ಕೆ ಒಳಗಾಯಿತು. ಸ್ವಾತಂತ್ಯ್ರೋತ್ರರದಲ್ಲಿ ಪ್ರಜಾಪ್ರಭುತ್ವ ಸರಕಾರವು ದೇಶದಲ;ಲಿ ಸ್ಥಾಪನೆಗೊಂಡಾಗ ಕೊಡಗು ‘ಎ’ ವರ್ಗದ ಸಂಸ್ಥನ ಎಂದಾಗಿ ಮಂತ್ರಿ ಸರಕಾರವಿಲ್ಲಿ ಅಸ್ತಿತ್ವಕ್ಕೆ ಬಂದಿತು. 1956 ರಲ್ಲಿ ಪುನರ್ವಿಂಗಡಣೆ ಆದಂತೆ ಕನ್ನಡನಾಡಿನಲ್ಲಿ ಕೊಡಗು ವಿಲೀನಗೊಂಡಿತು. ಅಂದಿನಿಂದ ಕೊಡಗು ಕರ್ನಾಟಕ ರಾಜ್ಯದ ಒಂದು ಜಿಲ್ಲೆ ಎಂದಾಯಿತು. ಆದರೆ ಮಡಿಕೇರಿಯ ಸ್ಥಾನಮಾನಕ್ಕೆ ಚ್ಯುತಿ ಬರದೇ ಅದು ಪ್ರಗತಿಪರ ಪುರವಾಗಿ ಬೆಳಗುತ್ತಲೇ ಬಂದಿರುತ್ತದೆ. 1870 ರಷ್ಟು ಪೂರ್ವದಲ್ಲೇ ಮಡಿಕೇರಿಯು ಪುರಸಭಾಡಳಿತಕ್ಕೆ ಒಳಗಾಗಿ ಇದೀಗ 108 ಸಂವತ್ಸರಗಳು ಸಂದಿರುವ ಈ ಕಾಲಮಾನದಲ್ಲಿ ಮಡಿಕೇರಿಯ ಪುರಸಭೆಯು ಸಾಧಿಸಿದ ಮಹತ್ಕಾರ್ಯಗಳು – ಜನತೆಗೆ ನೀಡಿರುವ ಸೌಲಭ್ಯಗಳು ಬಹಳಷ್ಷಟಾಗಿವೆ. 

ಪ್ರೇಕ್ಷಣೀಯ ಸ್ಥಳಗಳು : ಮಡಿಕೇರಿಯಲ್ಲಿನ ಮೊದಲ ಪ್ರೇಕ್ಷಣೀಯ ಸ್ಥಳವೇ ಚರಿತ್ರಾರ್ಹವಾದ ಕೋಟೆ ಹಾಗೂ ರಾಜರ ಅರಮನೆ ಆಗಿದೆ. ವಿಶಾಲವಾದ ರಾಜಾಂಗಣ, ಭವ್ಯವಾದ ಪ್ರಾಸಾದ ಹಾಸುಕಲ್ಲಿನಿಂದ ಕೂಡಿದ ವಿಸ್ತಾರವಾದ ಒಳಾಂಗಣ ಹಾಗೂ ಜಲಕ್ರೀಡಾಂಗಣಗಳಿಂದ ಕುಡಿರುವ ಅರಮನೆಯು ನಿಜಕ್ಕೂ ಭವ್ಯವಾಗಿದೆ. ಅರಮನೆಯ ಹೊರಾಂಗಣದ ಅಂಚಿನಲ್ಲಿ ಕಾಣಬರುವ ಶಿಲಾಗಾರೆಯ ಎರಡು ಕೃತಕ ಆನೆಗಳು ಜೀವಂತಜಗಳೋ ಎಂಬಷ್ಟು ಸಹಜ ಸೌಂದರ್ಯದಿಂದ ಕಾಣುತ್ತಿವೆ.

     ಅರಮನೆಯನ್ನು ಬಿಟ್ಟರೆ ಮತ್ತಿನ್ನಯ ಮುಖ್ಯವಾದ ಪ್ರೇಕ್ಷಣೀಯ ಸ್ಥಳವೇ ಓಂಕಾರೇಶ್ವರ ದೇವಾಲಯ. ಶಾಸ್ತ್ರೋಕ್ತ ವಿಧಿಪ್ರಕಾರವಾಗಿ ಶ್ರದ್ದಾ ಭಕ್ತಿಗಳಿಂದ 1820 ರಲ್ಲಿ ಕೊಡಗಿನ ಆಳರಸ ಲಿಂಗರಾಜನು ಕಟ್ಟಿಸಿದ ಈ ಶಿವದೇಗುಲವು ಮಹಮ್ಮದೀಯ ಶೈಲಿಯ ಶಿಲ್ಪಕಲಾ ಸೌಂದರ್ಯದಿಂದ ಶೋಭಿಸುತ್ತದೆ. ಮೇಲ್ನೋಟಕ್ಕೆ ಜಗತ್ಪ್ರಸಿದ್ದ ತಾಜ್‍ಮಹಲ್‍ನಂತೆ ಹೋಲಿಕೆಯಲ್ಲಿ ಕಾಣುತ್ತಿರುವ ಓಂಕಾರೇಶ್ವರ ದೇವಾಲಯವು ಅಂದಿನಿಂದ ಇಂದಿನ ತನಕವೂ ಪಾವನವಾದ ಪ್ರಸಿದ್ದ ಶಿವಕ್ಷೇತ್ರವಾಗಿ ಬೆಳಗುತ್ತಲೇ ಬಂದಿದೆ. ಎತ್ತರದ ನೆಲೆಯಲ್ಲಿ ಪ್ರಶಾಂತ ವಾತಾವರಣದಲ್ಲಿ ಮೈವೆತ್ತು ನಿಂತಿರುವ ‘ಓಂಕಾರೇಶ್ವರ ದೇವಾಲಯದ ಮುಂದುಗಡೆ ವುಶಾಲವಾದ ತೀರ್ಥಸ್ನಾನ ಕೊಳವಿದೆ. ಅದರ ಮಧ್ಯೆ ಅಂದವಾದ ಒಂದು ದರ್ಶನ ಮಂಟಪವಿದೆ. ಅದಕ್ಕೆ ತೆರಳಲು ಅನುಕೂಲದ ಸೇತುವೆಯ ಹಾದಿ ಇದೆ. ಓಂಕಾರೇಶ್ವರ ಕೊಳದಲ್ಲಿ ದೇವರ ತೆಪ್ಪೋತ್ಸವವು ವರ್ಷಪ್ರತಿ ವೈಭವದಿಂದ ನಡೆಯುತ್ತದೆ.

  ರಾಕ್ಷಸನ ಪೀಡಾನಿವಾರಣೆಗಾಗಿ ಓಂಕಾರೇಶ್ವರ : ಲಿಂಗರಾಜನು ಈ ದೇಗುಲದ ನಿರ್ಮಾಣ ಮಾಡಲು ಅವನಿಗೆ ಪ್ರೇರಕವಾದ ಘಟನೆಯೊಂದು ನಿಜಕ್ಕೂ ಉಲ್ಲೇಖನೀಯವಾಗಿರುತ್ತದೆ. ಲಿಂಗರಾಗನು ನಿಷ್ಠಾವಂತನೂ ತೀರಿಕೊಂಡ ನಂತೆ. ದೇಹಾವಸಾನದ ನಂತರ ಅವನು ಬ್ರಹ್ಮರಾಕ್ಷಸನಾಗಿ ರಾಜನಿಗೆ ರಾತ್ರಿ ವೇಳೆ ವಿಶೇಷ ತೊಂದರೆ ನೀಡುತ್ತೆದ್ದನಂತೆ ಅದರಿಂದ ಊಠ ಮಾಡಲಾಗಿದೆ. ನಿದ್ದೆ ಮಾಡಲಗದೆ, ವಿಪರಿತ ಕಷ್ಟಕ್ಕೆ ಒಳಗಾದ ಅರಸನು ಅತ್ಯಂತ ಭಯಗ್ರಸ್ತನಾದನು. ತಾನು ನಿರುಫರಾಧಿ ಬ್ರಾಹ್ಮಣನನ್ನು ಶಿಕ್ಷಿಸಿ ಅದರಿಂದಾಗಿ ಅವನು ಅಸು ನೀಗುವಂತೆ ಮಾಡಿದುದು ತಪ್ಪಾಯಿತೆಂದೂ ಅರಿತುಕೋಡನು. ಆ ಪಾಪವಿಮೋಚನೆಗೂ, ನಯಮಿಕ್ತಿಗೂ, ಗ್ರಹ್ಮರಾಕ್ಷ£ಸನ ಕೋಪ ನಿವಾರಣೆಗೂ ಉಪಾಯವೇನೆಂದು ಪ್ರಸಿದ್ದ ಜ್ಯೋತಿಷ್ಯರೂ ಮಹಾ ಮಂತ್ರವಾದಿಗಳೂ, ಭಗವದ್ಬಕ್ತರೂ ಆಗಿದ್ದ ಶ್ರೀ ನೀಲೇಶ್ವರ ತಂತ್ರಿಗಳವರೊಡನೆ ಮಂತ್ರಾಲೋಚನೆ ನಡೆಸಿದನು. ಪರಮಾತ್ಮ ಶವನ ದೇವಾಲಯವೊಂದನ್ನು ಕಟ್ಟಿಸಿ ನಿತ್ತಯ ಸೇವಾದಿಗಳಿಗೆ ಅನುಕೂಲ ಕಲ್ಪಿಸುವುದೇ ವಿಮೋಚನಾ ಮಾರ್ಗ ಂದು ಮಾನ್ಯ ತಂತ್ರಿಗಳು ಲಿಂಗರಾಜನಿಗೆ ತಿಳಿಸಿದರು. ಅದರಂತೆ ಪಾವನ ಗಂಗಾತೀರದ ಮಹಾ ಪುಣ್ಯಕ್ಷೇತ್ರ ಖಾಶಿಗೆ ತನ್ನ ರಾಜಧಾನಿಯಲ್ಲಿದ್ದ ಪಂಡಿತ ರಾಮಯ್ಯ, ತಿರುಮಲೇಶ್ವರ ಭಟ್ಟ, ನಾರಾಯಣ ಭಟ್ಟ ಎಂಬ ಮೂರು ಮಂದಿ ಶ್ರೋತ್ರೀಯರಾದ ವಿಪ್ರರನ್ನಯ ಅಗತ್ಯದ ನೌಕರ ಸೇವಕ ವರ್ಗದವರೊಡನೆ ಮಹಾದೇವನ ಪುಣ್ಯಲಿಣಗವನ್ನು ವಿಧಿವತ್ತಾಗಿ ಮಡಿಕೇರಿಗೆ ಸಾಗಿಸಿ ತರಲು ಕಳುಹಿಸಿದನು. ಅವರು ಶಾಸ್ತ್ರೋಕ್ತವಾಗಿ ಸ್ನಾನ, ಉಪವಾಸ, ಪೂಜೆ, ಪಾರಾಯಣಗಳನ್ನು ಸರದಿ ಪ್ರಕಾರ ಮಾಡುತ್ತಾ ಪವಿತ್ರ ಶಿವಲಿಂಗವನ್ನು ಹಾದಿಯಲ್ಲಿ ಎಲ್ಲೂ ನೆಲದಲ್ಲಿ ಇಡದೆ ಕಾಶಿಯಿಂದ ಮಡಿಕೇರಿಗೆ ಸಾಗಿಸಿ ತಂದರು. 1820 ನೇ ಇಸವಿ ಮಾರ್ಚ್ 26 ನೇ ತೇದಿಯ ಭಾನುವಾರದಂದು ಅಂದರೆ ಚೈತ್ರ ಶದ್ದ ದ್ವಾದಶ ದಿವಸ ಶ್ರೀ ನೀಲೇಶ್ವರದ ತಂತ್ರಿಗಳ ನೇತೃತ್ವದಲ್ಲಿ ಲಿಂಗರಾಜನು ಶಾಸ್ತ್ರೋಕಸತವಾಗಿ ಈ ಶಿವಲಿಂಗವನ್ನು ದೇಗುಲದಲ್ಲಿ ಪ್ರತಿಷ್ಠೆ ಮಾಡಿಸಿದನು. 

ಉಪಸಂಹಾರ : ಹೀಗೆ ಮಡಿಕೇರಿಯು ಕೊಡಗಿನ ಪ್ರಮುಖ ನುರವಾಗಿ ಸುಮಾರು 334 ವರ್ಷಗಳಿಂದಲೂ ಸಾರ್ಥಕವಾದ ರೀತಿಯಲ್ಲಿ ವೈಭವದಿಂದ ಮೆರೆದಿದೆ. ಇದೀಗ ಶತಮಾನೋತ್ಸವವನ್ನು ಆಚರಿಸುತ್ತಿರುವ ಪುರಸಭೆಯ ಒಳ್ಳೆಯ ಆಡಳಿತವನ್ನು ಪಡೆದ ಈ ಪಟ್ಟಣವು ಕನ್ನಡ ಮಾತ್ರವಲ್ಲ ಭಾರತ ದೇಶದಲ್ಲೊಂದು ಗಣ್ಯವಾದ ಮಾದರಿ ನಗರ ಎಂದಾಗಿ ಭೌತಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಗಳಿಂದ ಸಂಪದ್ಭರಿತವಾಗಿ ಬೆಳಗಿ ಪೀಳಿಗಿಯಿಂದ ಪೀಳಿಗೆಗೆ ಬೆಳೆದು ಬಾಳುವಂತಾಗಲಿ !

 


Refine Search


Showing 1 to 15 of 32 (3 Pages)