Balamuri Village

ಬಲಮುರಿ ಶ್ರೀ ಅಗಸ್ತ್ಯೇಶ್ವರ ದೇವಾಲಯ:-

                    ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನ ಬ್ರಹ್ಮಗಿರಿಯ ತಪ್ಪಲಿನಲ್ಲಿ ನದಿಯಾಗಿ ಉಗಮಿಸುವ ಕಾವೇರಿ ಮುಂದೆ ತಾನು ಸಾಗುವ ಹಾದಿಯಲ್ಲಿ ಹಲವಾರು ರಮ್ಯತಾಣಗಳನ್ನು ಪುಣ್ಯಕ್ಷೇತ್ರಗಳನ್ನು ನಿರ್ಮಿಸಿದ್ದಾಳೆ. ಬಲಮುರಿ ಕಾವೇರಿ ತೀರದ ಪುಣ್ಯಕ್ಷೇತ್ರಗಳಲ್ಲೊಂದಾಗಿ ಪ್ರಸಿದ್ದಿ ಹೊಂದಿದೆ.

                   ಮಡಿಕೇರಿಯಿಂದ 18 ಕಿ.ಮೀ. ದೂರದಲ್ಲಿರುವ ಮೂರ್ನಾಡಿನ ಸಮೀಪದ ಬಲಮುರಿಯು ಕಾವೇರಿ ತೀರದಲ್ಲಿರುವ ಪವಿತ್ರ ಯಾತ್ರಾಸ್ದಳ. ಕೊಡವರಿಗೆ ಇದೊಂದು ಪುಣ್ಯಕ್ಷೇತ್ರ. ತುಲಾ ಸಂಕ್ರಮಣದ ಸಂದರ್ಭದಲ್ಲಿ ತಲಾಕಾವೇರಿಗೆ ತೆರಳಲು ಸಾಧ್ಯವಾಗದ ಶ್ರೀ ಕಾವೇರಿ ಮಾತೆಯ ಭಕ್ತಾದಿಗಳು ಬಹುಸಂಖ್ಯೆಯಲ್ಲಿ ಬಲಮುರಿಗೆ ತೀರ್ಥೋದ್ವವದ ಸಂದರ್ಭದಲ್ಲಿ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿ ತೆರಳುತ್ತಾರೆ. ಬರೀ ಕಾವೇರಿ ಸಂಕ್ರಮಣವೆಂದಲ್ಲ, ಸಂಕ್ರಮಣ, ಅಮಾವಾಸ್ಯೆ, ಹುಣ್ಣಿಮರ ಮುಂತಾದ ಪರ್ವಕಾಲಗಳಲ್ಲಿ ಅಧಿಕ ಸಂಖ್ಯೆಯ ಭಕ್ತಾದಿಗಳು ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದುಂಟು. ಹಿಂದೆ ಕೊಡಗಿನ ಆಳರಸರಾಗಿದ್ದ ದೇವಕಾಂತ ಮಹಾರಾಜ ಹಾಗೂ ಜಿಲ್ಲೆಯ ಜನತೆಗೆ ಅನುಗ್ರಹ ನೀಡಿದ ಸ್ದಳ ಇದಾದುದರಿಂದ ಇದನ್ನು ಅನುಗ್ರಹಕ್ಷೇತ್ರ ಎಂದು ಕರೆಯುವರು.

                    ಬಲಮುರಿ ತಾಣಕ್ಕೆ ಸಾಗುವುದು ಸುಲಭ. ಮೂರ್ನಾಡುವಿನಲ್ಲಿ ದಾರಿ ಕವಲೊಡೆಯುತ್ತದೆ. ಇಲ್ಲಿಂದ ಪಾರಾಣೆ ಮೂಲಕ ವೀರಾಜಪೇಟೆಗೆ ತೆರಳುವ ಮಾರ್ಗದಲ್ಲಿ ಸೂಮಾರು ನಾಲ್ಕು ಕಿ.ಮೀ. ಗಳ ಅಂತರವನ್ನು ಕ್ರಮಿಸಿದರೆ ಬಲಮುರಿ ತಲುಪಬಹುದು.

                   ಹಿನ್ನಲೆ:  ಕಾವೇರಿ ನದಿ ತೀರದಲ್ಲಿ ಬಲಮುರಿ ಪ್ರಸಿದ್ದ ಯಾತ್ರಸ್ದಳ. ಮಾತ್ರವಲ್ಲ ರಮಣೀಯ ನಿಸರ್ಗ ಚೆಲುವಿನ ಬೀಡೂ ಹೌದು. ಈ ತಾಣ ಬಲಮುರಿ ಎಂದೇಕೆನಿಸಿಕಂಡಿತು ಎಂಬುದರ ಬಗ್ಗೆ ಹಲವು ಐತಿಹ್ಯಗಳಿವೆ. ತಲಕಾವೇರಿಯಲ್ಲಿ ಉಗಮಿಸಿದ ಕಾವೇರಿಯು ವಿವಿಧ ಸ್ದಳಗಳಲ್ಲಿ ಹರಿದು ಇಲ್ಲಿಗೆ ಬರುವಾಗ ಬಲಭಾಗಕ್ಕೆ ಅರ್ಧಚಂದ್ರಾಕಾರವಾಗಿ ದಿಕ್ಕು ಬದಲಿಸಿದಳಂತೆ. ಅಂತೆಯೇ ಪ್ರಾಚೀನ ಕಾಲದಲ್ಲಿ ‘ವಲಂಪುರಿ’ ಎಂದು ಕರೆಯಲ್ಪಟ್ಟ ಈ ತಾಣ ಮುಂದಿನ ದಿನಗಳಲ್ಲಿ ಬಲಮುರಿ ಎನಿಸಿಕೊಂಡಿತು. ಸೀರೆಯ ನೆರಿಗೆಗಳು ತಿರುಗಿದವು.

                    ಪ್ರಾಚೀನ ಕಾಲದಿಂದಲೂ ಶೈವಕ್ಷೇತ್ರವೆನಿಸಿದ್ದ ಬಲಮುರಿ ತಾಣಕ್ಕೆ ಸಂಬಂಧಿಸಿದಂತೆ ಪೌರಾಣಿಕ ಕಥೆಯೊಂದನ್ನು ಎದುರ್ಕಳ ಶಂಕರನಾರಾಯಣ ಭಟ್ಟರು ತಮ್ಮ ಕೃತಿ ಶ್ರೀ ಕಾವೇರಿ ವೈಭವದಲ್ಲಿ ವಿವರಿಸಿದ್ದಾರೆ. ಅದರ ಪ್ರಕಾರ ಹಿಂದೆ ವಲಂಪುರಿ ಎಂದೆನಿಸಿದ್ದ ಈ ತಾಣಕ್ಕೆ ಲವಣೇಶ್ವರ ಆರಾಧ್ಯ ದೈವವಾಗಿದ್ದನು. ಕಾವೇರಿ ಮಾತೆಯು ತಾನು ನದಿರೂಪ ತಳೆದು ಹರಿದು ಈ ತಾಣಕ್ಕೆ ಬರಲಿರುವುದಾಗಿ ಪರಮಭಕ್ತ ದೇವಕಾಂತ ಮಹರಾಜನಿಗೆ ಸೂಚನೆ ನೀಡಿದ್ದಳಂತೆ. ಅಂತೆಯೇ ವಲಂಪುರಿಯಲ್ಲಿ ಅರಸ ಕಾವೇರಿಯನ್ನು ಎದುರುಗೊಳ್ಳಬೇಕಿತ್ತು. ತನ್ನ ಮಾತಿನಂತೆ ದೇವಿಯು ಕಾವೇರಿ ನದಿಯಾಗಿ ಹರಿದು ವಲಂಪುರಿಗೆ ಬಂದಳು. ಆ ಸಂದರ್ಭಕ್ಕೆ ದೇವಕಾಂತ ಮಹರಾಜ ಆತನ ಪರಿವಾರ ಹಾಗೂ ಅಸಂಖ್ಯಾತ ಭಕ್ತರು ನದಿರೂಪಿ ದೇವಿಯ ಬರುವಿಕೆಗಾಗಿ ಭಕ್ತಿ ಭಾವ ಪರವಶರಾಗಿ ಕಾದಿದ್ದು, ಕಾವೇರಿಯು ನದಿಯಾಗಿ ಹರಿದು ಬರುತ್ತಿರುವುದನ್ನು ಕಂಡೊಡನೆ ಆನಂದಪುಳಕಿತರಾದರು. ಕಾವೇರಿ ನದಿಯಾಗಿ ಹರಿದಿ ಬರುವಾಗ ರಭಸದ ಪ್ರವಾಹ ವೇರ್ಪಟ್ಟಿತ್ತು. ಪರಿಣಾಮವಾಗಿ ನೆರೆದಿದ್ದ ಸ್ತ್ರೀಯರ ಸೀರೆ ನೆರಿಗೆಗಳು ಹಿಂದಕ್ಕೆ ಸರಿದವು. ಹಿಂದಕ್ಕೆ ಹೋದ ಸೀರೆಯ ಸೆರಗನ್ನು ಬಲಭಾಗಕ್ಕೆ ತಂದು ಗಂಟುಹಾಕಿ ಮಹಿಳೆಯರು ಉಟ್ಟು ಕೊಂಡಿರುವುದರಿಂದ ಇಲ್ಲಿಗೆ ಬಲಮುರಿ ಎಂಬ ಹೆಸರು ಬಂದಿದೆ. ಎಂಬುದು ಪೌರಾಣಿಕವಾಗಿ ಲಭ್ಯವಿರುವ ಮಾಹಿತಿ.

    ಜಲರೂಪ ತಳೆದು ಹರಿದ ಕಾವೇರಿ ಇಲ್ಲಿನ ಲವಣೇಶ್ವರ ಲಿಂಗಕ್ಕೆ ಬಳಸಿ ಮುಂದೆ ಹರಿದಳು. ಕಾವೇರಿಯನ್ನು ಹಿಂಬಾಲಿಸಿ ಬಂದಿದ್ದ ಅಗಸ್ತ್ಯ ಮಹರ್ಷಿಗಳು ನದಿತೀರದಲ್ಲಿ ಶಿವಲಿಂಗವೊಂದನ್ನು ಪ್ರತಿಷ್ಠೆ ಮಾಡಿ ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸಿದರು.

ವೀಕ್ಷಣ ತಾಣಗಳು.

                          ಬಲಮುರಿ ಕಾವೇರಿಯ ದಡದಲ್ಲಿರುವ ಪ್ರಶಾಂತ ಸ್ದಳ. ಸುತ್ತಲೂ ಕಂಗೊಳಿಸುವ ನಿಸರ್ಗ ಸೌಂದರ್ಯ. ಮಧ್ಯೆ ಮಂಗಳವಾಹಿನಿಯಾಗಿ ಹರಿಯುವ ಕಾವೇರಿ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯ . ಇತ್ತ ಎಡಭಾಗದಲ್ಲಿ ಕಣ್ವ ಮಹಿರ್ಷಿಯು ಸ್ಥಾಪಿಸಿದ್ದೆಂದು ಹೇಳಲಾದ ಆಕರ್ಷಕ ಈಶ್ವರ ದೇವಾಲಯ ಮುಂತಾದವು ಇಲ್ಲಿನ ಆಕರ್ಷಣೆಳು. ಹಾಗೆ ನೋಡಿದರೆ ಬಲಮುರಿ ಕೊಡಗಿನ ಒಂದು ಪುಟ್ಟಗ್ರಾಮ. ಮಳೆಗಾಲದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವಾಗ ಸಂಪರ್ಕ ಕಡಿದಿಕೊಳ್ಳುವ ಈ ಊರು ಆಗ ಸುದ್ದಿ ಮಾಡುವುದು ಬಿಟ್ಟರೆ ಉಳಿದಂತೆ ಇಲ್ಲಿನ ಆಕರ್ಷಕ ತಾಣಗಳಿಂದಾಗಿಯೇ ಪ್ರಸಿದ್ದಿಗೆ ಬಂದಿದೆ.

                           ಬಲಮುರಿಯ ಶ್ರೀ ಅಗಸ್ತ್ಯೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಕಾವೇರಿನದಿಯ ಬಲಭಾಗದಲ್ಲಿ ಎತ್ತರವಾದ ಸ್ದಳದಲ್ಲಿ ಇದನ್ನು ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿನ ಶಿವಲಿಂಗವನ್ನು ಅಗಸ್ತ್ಯ ಮಹಿರ್ಷಿಗಳು ಪ್ರತಿಷ್ಠೆ ಮಾಡಿದರಂತೆ. ಹಾಗಾಗಿ ಇದು ಅಗಸ್ತ್ಯೇಶ್ವರ ದೇವಾಲಯ ಎಂದೆನಿಸಿಕೊಂಡಿತು. ಈ ದೇವಾಲಯವು ವಿಶಾಲವಾದ ಪ್ರಾಂಗಣ, ಸುಂದರವಾದ ಮುಖಮಂಟಪವಿದ್ದು ಸುತ್ತಲೂ ವಿಶಾಲವಾದ ಪ್ರಾಕಾರವನ್ನು ಹೊಂದಿದೆ.

                          ನದಿಯ ಇನ್ನೊಂದು ದಡದಲ್ಲಿ ಶ್ರೀ ಮುನೀಶ್ವರ ದೇವಾಲಯವಿದೆ. ಪ್ರಾಚೀನ ಕಾಲದಲ್ಲಿ ಮಹರ್ಷಿ ಕಣ್ವರು ಇಲ್ಲಿ ಸ್ವಲ್ಪ ಕಾಲ ನೆಲೆಸಿ ತಪಸ್ಸನ್ನಾಚರಿಸಿ ಈಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದರಂತೆ. ಹಾಗಾಗಿ ಮುಂದೆ ಅದು ಕಣ್ವೇಶ್ವರ ದೇವಾಲಯವೆಂದು ಪ್ರಸಿದ್ದಿಯನ್ನು ಪಡೆಯಿತು. 

                          ತುಲಾ ಸಂಕ್ರಮಣದ ಸಂದರ್ಭದಲ್ಲಿ ಇಲ್ಲಿಗೆ ಬರುವ ಭಕ್ತರು ಅಧಿಕ. ಆ ಸಂದರ್ಭದಲ್ಲಿ ಪೂಜೆ-ಪುನಸ್ಕಾರಗಳು ಇಲ್ಲಿ ಜರುಗುತ್ತವೆ ತುಲಾಸಂಕ್ರಮಣದ ಕಾಲದಲ್ಲಿ ತಲಕಾವೇರಿಗೆ ಹೋಗಲು ಸಾಧ್ಯವಾಗದವರು ಬಲಮುರಿಗೆ ಬಂದು ಮುಂತಾದ ತೀರ್ಥಸ್ನಾನ ಕೈಗೊಳ್ಳುತ್ತಾರೆ. ಅದೇ ರೀತಿ ಸಂಕ್ರಮಣ, ಅಮಾವಾಸ್ಯೆ, ಹುಣ್ಣಿಮೆ ಮುಂತಾದ ಪರ್ವಕಾಲಗಳಲ್ಲಿ ಭಕ್ತಾದಿಗಳು ಬಲಮುರಿಗೆ ಬಂದು ಕಾವೇರಿ ಸ್ನಾನ ಮಾಡುವುದು ಪವಿತ್ರ ಕಾರ್ಯವೆಂದು ಪರಿಗಣಿಸಿರುವರು. ವರ್ಷಕೊಮ್ಮೆ ಕುಂಭಮಾಸದಲ್ಲಿ ಇಲ್ಲಿ ಶ್ರೀ ಅಗಸ್ತ್ಯೇಶ್ವರ ಸ್ವಾಮಿಯ ಹಬ್ಬವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಸಹಸ್ರಾರು ಮಂದಿ ಭಕ್ತರು ಇಲ್ಲಿಗಾಗಮಿಸಿ ಭಗವಂತನ ದಿವ್ಯದರ್ಶನ ಪಡೆದು ತೆರಳುತ್ತಾರೆ.


There are no information to list in this category.