Sringeri Taluk

ಶ್ರೀ ಶೃಂಗೇರಿ ಕ್ಷೇತ್ರ: 

           ಸುಮಾರು 1200 ವರ್ಷಗಳ ಹಿಂದೆ ತ್ಮಮ ಶಿಷ್ಯರೊಂದಿಗೆ ವಿಂಧ್ಯ ಪರ್ವತವನ್ನು ದಾಟಿ ದಕ್ಷಿಣ ಭಾಗಕ್ಕೆ ಬಂದ ಶ್ರೀ ಶಂಕರಾಚಾರ್ಯರು ತುಂಗಾ ತೀರದಲ್ಲಿ ಮಧ್ಯಾಹ್ನದ ಉರಿ ಬಿಸಿಲಲ್ಲಿ ಸರ್ಪವೊಂದು, ಪ್ರಸವ ವೇದನೆಯಿಂದ ಬಳಲುತ್ತಿದ್ದ ಕಪ್ಪೆಯೊಂದಕ್ಕೆ ತನ್ನ ಹೆಡೆಯನ್ನು ಬಿಚ್ಚಿ ನೆರಳನ್ನು ನೀಡುತ್ತಿರುವುದನ್ನು ಕಂಡು ಇಬ್ಬರು ವೈರಿಗಳು ಪರಸ್ಪರ ಸಹಕಾರಿಯಾಗಿರುವುದು ಈ ಸ್ಥಳಕ್ಕೆ ಸೂಕ್ತ ಎಂದು ನಿರ್ಧರಿಸಿ ಶೃಂಗೇರಿಯಲ್ಲಿ ಧರ್ಮಪೀಠ ಸ್ಥಾಪನೆ ಮಾಡಿದರು. 

             ದಕ್ಷಿಣಾಮ್ನಾಯಾ ಶ್ರೀ ಶೃಂಗೇರಿ ಪೀಠ ಸಂಸ್ಥಾನದ ಅಧಿದೇವತೆ ಶ್ರೀ ಶಾರದೆ. ಎಲ್ಲ ಶಕ್ತಿಗಳನ್ನು ಏಕತೆಯ ಭಾಧತೆಯಲ್ಲಿ ಬಂಧಿಸಿ ತನ್ನ ಒಡಲಿನಲ್ಲಿ ತುಂಬಿಸಿಕೊಂಡಿರುವ ಶ್ರೀ ಶಾರದಾಂಬೆ ಚೈತನ್ಯ ಸ್ವರೂಪಿಣಿ. ಪುರಾಣೀತಿಹಾಸಗಳ ಪ್ರಕಾರ ಕಾಶ್ಮೀರದ ಈ ದೇವಿಯನ್ನು ಸ್ವಯಂ ಆದಿಶಂಕರರು ದಕ್ಷಿಣ ಭಾರತಕ್ಕೆ ಕರೆತಂದಿದ್ದು, ತಾವೇ ರಚಿಸಿದ ಶ್ರೀ ಚಕ್ರದ ಮೇಲೆ ಶ್ರೀಗಂಧದ ಶಾರದಾಂಬೆಯ ಮೂರ್ತಿಗಳನ್ನು ಆಚಾರ್ಯರು ಪ್ರತಿಷ್ಠಾಪಿಸಿದರು. ಶ್ರೀ ಶಾರದಾಂಬೆ ಓಂಕಾರ ಶಕ್ತಿ ಸ್ವರೂಪಿಣಿ. ನವರಾತ್ರಿ ಸಮಯ ಒಂಭತ್ತು ಅಲಂಕಾರಗಳಲ್ಲಿ ವಿರಾಜಿಸಿ ಮನಮುದಗೊಳಿಸುವಳು ಶ್ರೀ ಶಾರದೆ. ಹಂಸವಾಹಿನಿ ಬ್ರಾಹ್ಮಿಯಾಗಿ, ಗರುಡಗಮನೆ ವೈಷ್ಣವಿಯಾಗಿ, ಸಿಂಹವಾಹಿನಿ ಚಾಮುಂಡಿಯಾಗಿ, ಅಶ್ವವಾಹಿನಿಯಾಗಿ ವೀಣಾವಿನೋದಿನಿಯಾಗಿ, ಮಯೂರವಾಹಿನಿ ಕೌಮಾರಿಯಾಗಿ, ವೃಷಭನ ಮೇಲೆ ವಿರಾಜಿಸುವ ಮಾಹೇಶ್ವರಿಯಾಗಿ ಜಗನ್ಮೋಹಿನಿಯಾಗಿ, ಶ್ರೀ ಭುವನಸುಂದರಿ ರಾಜರಾಜೇಶ್ವರಿಯಾಗಿ, ವಿಜಯದಶಮಿಯಂದು ಗಜಲಕ್ಷ್ಮಿಯಾಗಿ ನಾನಾಲಂಕಾರ ಭೂಷಿತೆಯಾಗಿ ಅಮಿತ ಸೌಭಾಗ್ಯ ಸುಂದರಿಯಾಗುತ್ತಾಳೆ.

               ಹರಿದು ಹಂಚಿಹೋಗಿದ್ದ ಜನರ ಸಾಂಸ್ಕøತಿಕ, ಆಧ್ಯಾತ್ಮಿಕ ಸತ್ವಗಳನ್ನು ಶ್ರೀ ಆಚಾರ್ಯರು ಒಗ್ಗೂಡಿಸಿ ಅವುಗಳ ಬಲ ಹತ್ತು ಪಟ್ಟು ಹೆಚ್ಚುವಂತೆ ಮಾಡಿದವರು. ತಾವು ಆರಂಭಿಸಿದ ಕೆಲಸ ಅವಿಚ್ಛಿನ್ನವಾಗಿ ಮುಂದುವರಿಯಲು ಅನುಕೂಲವಾಗುವಂತೆ ಬುದ್ಧಿಶಕ್ತಿ, ಶೀಲ ಸಂಪನ್ನತೆ, ದೂರದೃಷ್ಟಿಗಳಿಗೆ ಹೆಸರಾದ ಯತಿಗಳನ್ನು ನೇಮಿಸಿದರು. ಆಸ್ತಿಕ ಭಕ್ತರ ಶ್ರದ್ಧಾಭಕ್ತಿಉ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಶೃಂಗೇರಿ ಶಾರದಾ ಪೀಠದಲ್ಲಿ ಇದುವರೆಗೆ ಮೂವತ್ತೈದು ಜಗದ್ಗುರುಗಳು ಪೀಠಾರೋಹಣ ಮಾಡಿ ಧಾಮಿಘಕ ಕೈಂಕರ್ಯವನ್ನು ಕೈಗೊಂಡು ಧರ್ಮ ಜಾಗೃತಿಯನ್ನು ಮೂಡಿಸಿದ್ದಾರೆ. ಪರಧರ್ಮ ಸಹಿಷ್ಣುತೆ, ತತ್ತ್ವಜ್ಞಾನ, ಪರಸ್ಪರ ಪ್ರೇಮ, ಆಧ್ಯಾತಿಕ ಹಾಗೂ ಜೌದಾರ್ಯಗಳ ತವರಾದ ಈ ದೇಶದಲ್ಲಿ ಹತ್ತು ಹಲವು ಬಾರಿ ನಿಷ್ಠೆಯುಳ್ಳವರಾಗಿದ್ದರೆಂಬುದಕ್ಕೆ ಆಧಾರಗಳು ದೊರೆಯುತ್ತವೆ. ಋಷ್ಯ ಶೃಂಗೇಶ್ವರ ದೇವಾಲಯದ ಉತ್ಸವಮೂರ್ತಿಯ ಪೀಠದ ಮೇಲಿನ ಬರಹದಿಂದ ಕೆಳದಿರಾಣಿ ಚೆನ್ನಮಾಜಿಯ (ಕ್ರಿ.ಶ. 1671-1691) ಕೈಕೆಳಗೆ ಅಧಿಕಾರಿಯಾಗಿದ್ದ ಗುರುಬಸಪ್ಪ ಈ ವಿಗ್ರಹವನ್ನು ಮಾಡಿಸಿ ದೇವಾಲಯಕ್ಕೆ  ಅರ್ಪಿಸಿದ ಸಂಗತಿ ತಿಳಿದುಬರುತ್ತದೆ. 18ನೆಯ ಶತಮಾನಕ್ಕೆ ಸೇರಿದ ಲಿಂಗಣ್ಣಕವಿ ತನ್ನ ‘ಕೆಳದಿನೃಪ ವಿಜಯಂ’ನಲ್ಲಿ ಭದ್ರಪ್ಪನಾಯಕ ಕಿಗ್ಗಾಕ್ಕೆ ಹೋಗಿ ಶೃಂಗೇಶ್ವರ ದೇವರ ದರ್ಶನ ಪಡೆದ ಸಂಗತಿಯನ್ನು ಉಲ್ಲೇಖಿಸಿದ್ದಾನೆ.Showing 1 to 10 of 10 (1 Pages)