Tharikere Taluk

ಸೋಮಪುರ:

             ಸೋಮಪುರವು ತರೀಕೆರೆಯಿಂದ 30 ಕಿ.ಮೀ. ದೂರದಲ್ಲಿದೆ. ಇದು ಭದ್ರಾನದಿಯ ತೀರದಲ್ಲಿರುವ ಪಂಚಕ್ಷೇತ್ರಗ¼್ಲಲ್ಲೊಂದು. ಅತ್ರಿ ಮಹರ್ಷಿಗಳು ಪತ್ನೀಸಮೇತರಾಗಿ ತಪಸ್ಸನ್ನಾಚರಿಸಿದ ಸ್ಥಳ. ತ್ರಿಮೂರ್ತಿಗಳು ಮಹರ್ಷಿಯ ಮಡದಿಯ ಮಹಿಮೆಯಿಂದ ಮಕ್ಕಳಂತಾಗಿ ಹೋದರು. ಪತಿವ್ರತೆಯಾದ ಅನಸೂಯೆಯ ಪ್ರಾರ್ಥನೆಯಂತೆ ತ್ರಿಮೂರ್ತಿಗಳ ಅಂಶದಿಂದ ಸೋಮ, ದತ್ತಾತ್ರೇಯ, ದೂರ್ವಾಸರೆಂಬ ಪ್ರಖ್ಯಾತ ಪುತ್ರರನ್ನು ಪಡೆದ ಅತ್ರಿ ದಂಪತಿಗಳು ಧನ್ಯರಾದರು. ತ್ರಿಮೂರ್ತಿ ಸ್ವರೂಪನಾಗಿ ಅತ್ರಿಮಹಷಯಿಂದ ಅರ್ಚಿಸಲ್ಲಪಟ್ಟ ಈಶ್ವರ ಸಾನಿಧ್ಯವೇ ಭದ್ರಾತೀರದ ಕ್ಷೇತ್ರ ಸೋಮಪುರ.

                     ಸೋಮಪುರದಲ್ಲಿ 13ನೇ ಶತಮಾನಕ್ಕೆ ಸೇರಿದ ಹೊಯ್ಸಳರ ಶೈಲಿಯ ದೇವಾಲುಯವಿದೆ. ಇಲ್ಲಿರುವ ಪ್ರಸನ್ನ ಸೋಮೇಶ್ವರ ದೇವಾಳಯವು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡವು. 15-16ನೇ ಶತಮಾನಗಳಲ್ಲಿಯೂ ಇದರ ನಿರ್ಮಾಣ ಕಾಯ್ಗಳಾಗಿವೆ. ದೇವಾಲಯದಲ್ಲಿರುವ ಗರ್ಭಗುಡಿಯಿಂದ ಲಿಂಗವು 1976ರಲ್ಲಿ ಶೃಂಗೇರಿ ಜಗದ್ಗುಗುರುಗಳಿಂದ ಪುನರ್ ಪ್ರತಿಷ್ಠಾಪಿಸಲ್ಪಟ್ಟಿತು.

                    [ಸೋಮವೆಂದರೆ ಸೋಮರಸ; ದೇವ ಹವಿಸ್ಸಿನಲ್ಲಿ ಇಂದ್ರನಿಗೆ ಅತ್ಯಂತ ಪ್ರಿಯವಾದದ್ದು ಅಂತಹ ಸೋಮಯಾಗಗಳು ನಡೆದ ಕ್ಷೇತ್ರವೆಂದು ಅರ್ಥವಾಗುತ್ತದೆ. ಈ ಯಾಗವು ದೇವತೆಗಳಿಗೆ ಅತ್ಯಂತ ಪ್ರಿಯವಾದದ್ದು. ಋಗ್ವೇದದಲ್ಲಿ ಒಂದು ಮಂಡಲ ಪೂರ್ತಿಯಾಗಿ ಈ ಸೋಮವನ್ನೇ ಕುರಿತದ್ದಾಗಿದೆ. ಅದರಲ್ಲಿಯೂ “ಸ್ವಾದಿಷ್ಟಿಯಾ ಮದಿಷ್ಟಿಯಾ ಪವಸ್ವ ಸೋಮಾದಾರಯಾ ಇಂದ್ರಯಾ ಪಾತವೇ ಸುತಃ”......... ಇಲ್ಲಿಂದ ಆರುನೂರ ಹತ್ತು (610 ಋಕ್ಕುಗಳು ‘ಪವಮಾನ’ ಸೂಕ್ತವೆಂದು ಸೋಮರೂಪವನ್ನ ಹೇಳಿ ಅತ್ಯಂತ ಶ್ರೇಷ್ಠತೆಯನ್ನು ಪಡೆದಿದೆ. ಮಾನವನ ಶ್ರೇಯಸ್ಸಿಗಾಗಿ ಯಜ್ಞವೇ ಮೂಲ ಕಾರಣ ಇದರಿಂದ ಧರ್ಮ ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥ ಲಭಿಸುತ್ತವೆ. (ಭಂಗೀ ಸಹಯಜ್ಞಾಃ ಇಷ್ಟಕಾಮದಕಃ) ಇಲ್ಲಿ ಯಜ್ಞವೇ ಶ್ರೇಷ್ಠ. ಈ ಸೋಮ ಪರ್ವತವು ಯಜ್ಞಾದಿಗಳಿಗೆ ಮೂಲ ವೇದಿಕೆಯಾದ್ದರಿಂದ ‘ಸೋಮ ಪರ್ವತ’ವು ಅತ್ಯಂತ ಶ್ರೇಷ್ಠವೆನಿಸಿದೆ.] ಸೋಮ ಯಜ್ಞ ನಡೆದ ಸ್ಥಳವೆನ್ನುವುದಕ್ಕೆ ದೃಷ್ಟಾಂತವಾಗಿ ಅರ್ಕ, ಪಲಾಶ, ಶಮೀ-ಅಶ್ವತ್ಥಾದಿ ಯಜ್ಞೀಯ ವೃಕ್ಷಗಳು, ದರ್ಭೆಗಳು ವನ ಮುಂತಾದವು ಎಂಬಂತೆ ಇಲ್ಲಿ ನದೀ ತೀರದಲ್ಲಿ ಇಂದಿಗೂ ಕಾಣಬಹುದಾಗಿದೆ.



Showing 1 to 1 of 1 (1 Pages)