Basrooru

ವಸುನಿರ್ಮಿತ :

                  ಬಸರೂರಿನ ಸ್ಥಳಪುರಾಣ ಹೀಗೆ ಹೇಳುತ್ತದೆ:

                ವಸುಪುರವನ್ನು ಆಳಿಕೊಂಡಿದ್ದ ವಸುಚಕ್ರವರ್ತಿಗೆ ಮಕ್ಕಳಿರಲಿಲ್ಲವಂತೆ. ತನಗೆ ಮಕ್ಕಳಾದರೆ ಕೋಟೇಶ್ವರದ ಕೋಟಿಲಿಂಗನಿಗೆ ದೇವಾಲಯ ಕಟ್ಟಿಸುವುದಾಗಿ ಅರಸ ಹರಕೆ ಹೊತ್ತ. ಅವನ ಬಯಕೆ ಈಡೇರಿತು. ವಸುಚಕ್ರವರ್ತಿ ಆಡಿದ ಮಾತಿನಂತೆ ಕೋಟೇಶ್ವರದಲ್ಲಿ ದೇವಾಲಯವನ್ನೂ ಕೆರೆಯನ್ನೂ ಕಟ್ಟಿಸಿದ. ತನ್ನ ರಾಜಧಾನಿಯಾದ ಬಸರೂರಿನಿಂದ (ಅಂದಿನ ವಸುಪುರ?) ಪ್ರತಿನಿತ್ಯ ಕುದುರೆ ಮೇಲೆ ಪೂಜೆಯ ವೇಳೆ ಕೋಟೇಶ್ವರಕ್ಕೆ ಹೋಗಿ ತೀರ್ಥ ಪ್ರಸಾದ ಸ್ವೀಕರಿಸಿ ಮರಳಿ ಬಂದು ಆಹಾರ ಸ್ವೀಕರಿಸುತ್ತಿದ್ದನು.

                  ಅರಸ ಬಸರೂರಿನ ತನ್ನ ಅರಮನೆಯಲ್ಲಿ ದಿನನಿತ್ಯ ಮರಳಿನ ಶಿವಲಿಂಗವನ್ನು ರಚಿಸಿ, ಪೂಜಿಸುತ್ತಿದ್ದನಂತೆ. ಒಂದು ದಿನ ಆ ಮರಳಿನ ಲಿಂಗವನ್ನು ವಿಸರ್ಜಿಸಲು ಮರೆತನಂತೆ. ಆ ದಿನ ರಾತ್ರಿ ಅರಸನಿಗೆ ಅವನ ಊರಿನಲ್ಲೇ ದೇವಾಲಯ ಕಟ್ಟಿಸಬೇಕೆಂದು ದೇವರು ಹೇಳಿದಂತೆ ಕನಸಾಯಿತು. ಅಂತೆಯೇ ಅರಸನು ಕದಿರೆಯಿಂದ ಶಿವಲಿಂಗವನ್ನು ತಂದು ಬಸರೂರಿನಲ್ಲಿ ಮಹಾಲಿಂಗೇಶ್ವರ ದೇವಾಲಯವನ್ನು ನಿರ್ಮಿಸಿದನು. ಪೂಜಾ ವಿನಿಮಯಗಳ ಬಗೆಗೆ ಉಂಬಳಿ ಬಿಟ್ಟನು. ಸ್ಕಾಂದಪುರಾಣಾಂತರ್ಗತವಾದ ಸಹ್ಯಾದ್ರಿ ಖಂಡದಲ್ಲೂ ವಸು ಭೂಪತಿಯು 'ಕೋಟಿಲಿಂಗನ ಸನ್ನಿಧಾನದಿ ಮೀಟೆನಿಪ ವಸುಪುರವ ರಚಿಸಿದ...' ಎಂದಿದೆ.



Showing 1 to 2 of 2 (1 Pages)