Shivamoga Dist

ಶಿವಮೊಗ್ಗ:

             ಶಿವಮೊಗ್ಗವನ್ನು “ರೈಸ್ ಬಾಲ್ ಆಫ್ ಕರ್ನಾಟಕ” ಎನ್ನುತ್ತಾರೆ. ಇಲ್ಲಿನ ಫಲವತ್ತಾದ ಭೂಮಿಯಲ್ಲಿ ಅಧಿಕವಾಗಿ ಭತ್ತವನ್ನು ಬೆಳೆಯುತ್ತಾರೆ. ತುಂಗಭದ್ರಾ, ಶರಾವತಿ, ವರದಾ, ಕುಮುದಾವತಿ ಎಂಬ ನದಿಗಳು ಇಲ್ಲಿನ ವ್ಯವಸಾಯಕ್ಕೆ ಬೇಕಾದ ನೀರಿನ ಅಗತ್ಯಗಳನ್ನು ಪೂರೈಸುತ್ತವೆ.ಹಿಂದಿನ ಕಾಲದಲ್ಲಿ ಈ ಪ್ರಾಂತ್ಯವನ್ನು ಕದಂಬ, ಗಂಗಾ, ಚಾಳುಕ್ಯ, ರಾಷ್ಟ್ರಕೂಟ, ಕೆಳದಿ ವಿಜಯನಗರ ರಾಜರು ಪಾಲಿಸಿದರು. ಪೌರಾಣಿಕ ಆಧಾರಗಳ ಪ್ರಕಾರ ಶಿವಮೊಗ್ಗವನ್ನು ಶಿವನ ಮುಖವೆಂದು ಅಭಿವರ್ಣಿಸುತ್ತಾರೆ. ಶಿವಮೊಗ್ಗವನ್ನು ಶಿವಪ್ಪನಾಯಕನು ಆಳುತ್ತಿದ್ದನು.

               ಇಲ್ಲಿ ದೂರ್ವಾಸ ಮಹಾಮುನಿಯ ಆಶ್ರಮವಿತ್ತು. ಆ ಮಹರ್ಷಿಗೆ ಕೋಪ ಮೂಗಿನ ತುದಿಯಲ್ಲೇ ಇರುತ್ತಿತ್ತು. ಆದರೆ ಆತ ಮಹಾ ಶಿವಭಕ್ತನಾಗಿದ್ದ. ಅರಣ್ಯದಲ್ಲಿರುವ ಸಿಹಿಯಾದ ಗಿಡಗಳು, ಪುಷ್ಪಗಳನ್ನು ನೀರಿನ ಪಾತ್ರೆಯಲ್ಲಿರಿಸಿ ಶಿವಾರ್ಪಣೆ ಮಾಡುತ್ತಿದ್ದನಂತೆ.ಒಂದು ದಿನ ಆ ಮೂಲಿಕೆಗಳಿರುವ ಜಲವನ್ನು ಗೋಪಾಲಕರು ಸೇವಿಸಿದರಂತೆ. ಆಗ ಮಹರ್ಷಿ ತಪಸ್ಸಮಾಧಿಯಲ್ಲಿದ್ದರು. ಆ ಜಲವನ್ನು ಗೋಪಾಲರು ‘ಸಿಹಿಯೋಗಿ’ ಎಂದು ಕರೆದರು. ಆದರೆ ಸಿಹಿಯಾದ ನೀರಿರುವ ಆಸ್ರಮ ಎಂದರ್ಥ. ಆದ್ದರಿಂದ ಈ ಪ್ರಾಂತ್ಯವನ್ನು ಶಿವಮೊಗ್ಗ ಎಂದೂ ಹೆಸರು ಬಂತೆಂದು ಹೇಳುತ್ತಾರೆ.

               ಇಲ್ಲಿ ಕಬ್ಬಿಣದ ಲೋಹವನ್ನು ಉಪಯೋಗಿಸಿಕೊಂಡು ವ್ಯವಸಾಯದ ಪರಿಕರಗಳನ್ನು ತಯಾರಿಸುತ್ತಿದ್ದರಂತೆ. ನೀಲ್ ಸಾಕೆಲ್, ಆರೆಹಳ್ಳಿ ಎಂಬ ಪ್ರಾಂತ್ಯದಲ್ಲಿ ಇವನ್ನು ತಯಾರಿಸುತ್ತಿದ್ದರಂತೆ. ಇಲ್ಲಿನ ಇತರ ದರ್ಶನೀಯ ಸ್ಥಳಗಳೆಂದರೆ ಗುಡ್ಡೆ ಮರಡಿ, ಕುಂದಾ ಪರ್ವತ, ಎಡ್ಡೆಗೂಡೆ, ನಾಗ ಸಮುದ್ರಗಳನ್ನು ನೋಡಬಹುದು. ಸ್ಥಾನಿಕ ಸಹ್ಯಾದ್ರಿ ಪರ್ವತ ಶ್ರೇಣಿಗಳು, ಪಶ್ಚಿಮ ಕಣಿವೆಯಿಂದ ಜಾರುವ ಜಲಧಾರೆಗಳೊಂದಿಗೆ ಈ ಪ್ರಾಂತ್ಯಕ್ಕೆ ಬೇಕಾದ ವಿದ್ಯುತ್ತನ್ನು ಉತ್ಪತ್ತಿ ಮಾಡುತ್ತಾರೆ. ಶಿವಮೊಗ್ಗದಲ್ಲಿನ ಮಂದಿರಗಳು, ಚಾರಿತ್ರಿಕ ಸ್ಥಳಗಳು ಪ್ರವಾಸಿಗರನ್ನು ಸದಾ ಆಕರ್ಷಿಸುತ್ತಲೇ ಇರುತ್ತವೆ. 



Refine Search


Showing 1 to 15 of 15 (1 Pages)