Bhadhravathi Taluk

ಭದ್ರಾವತಿ ತಾಲ್ಲೂಕು:

                  ಧಾರ್ಮಿಕ, ಕಾರ್ಮಿಕ ನಗರವಾಗಿರುವ ಭದ್ರಾವತಿ ಶಿವಮೊಗ್ಗದಿಂದ 25 ಕಿ. ಮೀ ದೂರದಲ್ಲಿದೆ. ಭದ್ರಾವತಿ ವಿಶ್ವೇಶ್ವರಯ್ಯನವರ ಕನಸಿನ ಕೂಸು. ಹಿಂದೆ ಬೆಂಕಿಪುರ ಎಂಬುದಾಗಿ ಕರೆಯಲ್ಪಡುತ್ತಿತ್ತು. ಮಂಕಿಋಷಿಗಳ ತಪೋಭೂಮಿ. ಹಳೆ ಟೌನ್‍ನಲ್ಲಿ ನಕ್ಷತ್ರಾಕಾರದ ವೇದಿಕೆಯ ಮೇಲಿರುವ ಹೊಯ್ಸಳ ಕಾಲದ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ ಅಪೂರ್ಣಗೊಂಡಿದ್ದರೂ ಶಿಲ್ಪ ಕಲಾ ದೃಷ್ಟಿಯಿಂದ ಆಕರ್ಷಣೀಯ. ಇಲ್ಲಿನ ನರಸಿಂಹ, ಬೃಹತ್ ಗಣೇಶ ಸುಂದರ ಕೆತ್ತನೆಯಿಂದ ಕೂಡಿದೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ರಥೋತ್ಸವ ನಡೆಯುತ್ತದೆ. ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕಾಗದದ ಕಾರ್ಖಾನೆ ನೋಡುವಂತಹದು..




Showing 1 to 1 of 1 (1 Pages)