Sagara Taluk




Keladi

ಕೆಳದಿ ಸಂಕ್ಷಿಪ್ತ ಇತಿಹಾಸ

ಕ್ರಿ.ಶ.1499ರಲ್ಲಿ ಜನ್ಮ ತಾಳಿದ ಕೆಳದಿ ಸಂಸ್ಥಾನಕ್ಕೆ ದಕ್ಷಿಣ ಭಾರತದ ಇತಿಹಾದಲ್ಲಿ ವಿಶಿಷ್ಟ ಸ್ಥಾನವಿದೆ. ಮಧ್ಯಕಾಲೀನ ಇತಿಹಾಸ ಕೊನೆಯ ಹಾಗೂ ಆಧುನಿಕ ಯುಗದ ಮೊದಲ ಕಾಲದ ಅರಸು ಮನೆತನಗಳಲ್ಲಿ ಈ ಮನೆತನವು ಪ್ರಮುಖವಾದುದು. ಕ್ರಿ.ಶ.1565ರಲ್ಲಿ ವಿಜಯನಗರದ ಪತನದ ನಂತರ ಇವರು ಸ್ವತಂತ್ರರಾದರೂ ವಿಜಯನಗರದವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದವರಿವರು. ತಮ್ಮ 263 ವರ್ಷ ಆಡಳಿತದ ಅವಧಿಯಲ್ಲಿ ರಾಜಕೀಯ, ಆಡಳಿತ,  ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ನೈಪುಣ್ಯತೆಯನ್ನು ತೋರುತ್ತಾ ವಿಜಯನಗರದ ಸಂಸ್ಕೃತಿಗೆ ಕುಂದು ಬಾರದಂತೆ ನಡೆದು ಬಂದರು.

ಕೆಳದಿ ಇತಿಹಾಸ ಆಕರಗಳು:

         ದೇಶದ ಯಾವುದೇ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಾಧ್ಯವಾದ ಮಟ್ಟಿಗೆ ತಿಳಿಯಲು ಮುಖ್ಯ ಆಕರಗಳೆಂದರೆ ಆಯಾ ಪ್ರದೇಶದಲ್ಲಿ ದೊರೆಯುವ ಸಾಹಿತ್ಯಕ ಆಧಾರಗಳು, ಪ್ರವಾಸಿಗರ ವರದಿಗಳು, ಐತಿಹ್ಯಗಳು, ಯಾವುದೇ ಪ್ರಕಾರದ ವಸ್ತುಗಳ ಅವಶೇಷಗಳು, ಪುರಾತತ್ವ ಅವಶೇಷಗಳು. ಅಂದರೆ ಜನ ವಾಸ್ತವ್ಯದ ಹಳ್ಳಿ, ಪಟ್ಟಣ ಮೊದಲಾದ ನೆಲೆಗಳು ಮೊದಲಾದವುಗಳು. ಇದು ಮಧ್ಯ ಯುಗದ ಕೆಳದಿ ಕಾಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯಲು ಅನ್ವಯಿಸುತ್ತದೆ. ಕೆಳದಿ ಇತಿಹಾಸಕ್ಕೆ ಕೆಳದಿ ಆಡಳಿತದ ಕೊನೆಯ ಕಾಲದಲ್ಲಿದ್ದ ಲಿಂಗಣ್ಣ ಕವಿ ರಚಿಸಿದ ಕೆಳದಿ ನೃಪವಿಜಯ ಮತ್ತು ಕೆಳದಿ ರಾಜನಾದ ಬಸಪ್ಪನಾಯಕನು ರಚಿಸಿದ ಶಿವತತ್ವರತ್ನಾಕರ ಪ್ರಮುಖವಾಗಿದೆ. 


Showing 1 to 10 of 10 (1 Pages)