Kodachdhri

  ಕೊಡಚಾದ್ರಿ:

                   ಇದು ಹೊಸನಗರ – ಕೊಲ್ಲೂರು ಮಾರ್ಗದಲ್ಲಿದೆ. ಕೊಡಚಾದ್ರಿ ಬೆಟ್ಟ ಚಾರಣ ಪ್ರಿಯರಿಗೆ ಬಹು ಪರಿಚಿತ ಸ್ಥಳ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಬಗ್ಗೆ ಪ್ರತೀತಿ ಇದೆ. ಇಲ್ಲಿರುವ ಸರ್ವಜ್ಞ ಪೀಠ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಪೀಠ ಎನ್ನಲಾಗುತ್ತದೆ. ಈ ಬೆಟ್ಟದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದೇ ಒಂದು ಅದ್ಬುತ. ಚಿತ್ರ ಮೂಲವೆಂಬ ಬೆಟ್ಟ ಕೂಡ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಇದು ಆಯುರ್ವೇದ ಗಿಡಮೂಲಿಕೆಗಳ ಆಗರ. ಇಲ್ಲಿ ಹಲವು ಗುಹೆಗಳವೆ. ರಾಷ್ಟ್ರದ ವಿವಿಧ ಕಡೆಗಳಿಂದ ಬಂದಂತಹ ಯೋಗಿಗಳಿಗೆ ಇಲ್ಲಿ ಇರುವ ಗುಹೆಗಳಲ್ಲಿ ತಪಸ್ಸು ಮಾಡಿ ಸಿದ್ದ ಪಡೆದುಕೊಂಡು ಹೋಗುತ್ತಾರೆ. ರಾಮತೀರ್ಥ ಎಂಬಲ್ಲಿ ಹರಿಯುವ ನೀರಿನ ಮಧ್ಯೆ ಈಶ್ವರಲಿಂಗ ರಚನೆ ಕಾಣಬಹುದು.