Heggodu

ಹೆಗ್ಗೋಡು

         ಸಾಗರ, ಹೊಸನಗರ ಮಾರ್ಗದಲ್ಲಿ ಸಾಗರದಿಂದ ಸುಮಾರು 15 ಕಿ. ಮೀ ದೂರದಲ್ಲಿರುವ ಹೆಗ್ಗೋಡು ಮೊದಲು ಕುಗ್ರಾಮ. ದಿ ಕೆ. ವಿ. ಸುಬ್ಬಣ್ಣನವರ ಅವಿರತ ಶ್ರಮದ ಫಲವಾಗಿ ಹುಟ್ಟಿದ ನೀನಾಸಂ ತನ್ನದೇ ಆದ ವೈಶಿಷ್ಟ್ಯವನ್ನು ಪಡೆಯುವುದರ ಮೂಲಕ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ತನ್ನದೇ ರಂಗಮಂದಿರ, ರಂಗಶಾಲೆ ಮೊದಲಾದವನ್ನು ಹೊಂದಿದೆ. ರಾಷ್ಟ್ರ ಹೊರ ರಾಷ್ಟ್ರಗಳಿಂದ ವಿದ್ವಾಂಸರನ್ನಯ ಕರೆಸಿ ಶ್ರೀಷ್ಠ ಮಟ್ಟದ ಉಪನ್ಯಾಸಗಳ ಮೂಲಕ ರಂಗ ಶಿಕ್ಷಣ ನೀಡುತ್ತದೆ. 

          ‘ನೀನಾಸಂ’ ಎಂಬ ಸಂಸ್ಥೆಯು 1980 ರಿಂದ ರಂಗ ತರಬೇತಿಗಳನ್ನು ನೀಡುತ್ತಿದೆ. ‘ತಿರಿಗಾಟ’ ಎಂಬ ಸಾಂಸ್ಕøತಿಕ ತಂಡವು ನಾಟಕಗಳನ್ನು ಕರ್ನಾಟಕದಾದ್ಯಂತ ಜನರ ವೀಕ್ಷಣೆಗಾಗಿ ಪ್ರದರ್ಶನ ಮಾಡುತ್ತಿದೆ. ದಿ ಕೆ. ವಿ. ಸುಬ್ಬಣ್ಣನವರಿಗೆ ಇದಕ್ಕಾಗಿ ಪ್ರತಿಷ್ಠಿತ ‘ ಮ್ಯಾಗಸೆಸ್ಸೆ’ ಪ್ರಶಸ್ತಿಯನ್ನು ನೀಡಲಾಗಿದೆ.