Kuppalli - Kavishaila

ಕುಪ್ಪಳ್ಳಿ – ಕವಿಶೈಲ

                   ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ, ಪುರಸ್ಕøತ, ವಿಶ್ವಮಾನವರೆಂಬ ಹೆಸರಿನಿಂದ ಪ್ರಖ್ಯಾತರಾದ ಕುವೆಂಪು ಅವರ ಕವಿಹೃದಯಕ್ಕೆ ಚೇತನವಿತ್ತ ಮಲೆನಾಡಿನ ಒಂದು ಪುಟ್ಟಹಳ್ಳಿ. ಅದರ ಸನಿಹದ ಒಂದು ಎತ್ತರವಾದ ಬೆಟ್ಟ ಕವಿಶೈಲ ನೋಡಬೇಕಾದ ಸ್ಥಳ. ಕುವೆಂಪು ಅವರು ಆಡಿ ಬೆಳೆದ ಭವ್ಯ ಮನೆ. ನೋಡಲು ಲಭ್ಯ ಪ್ರಸ್ತುತ ಈ ಮನೆಯು ಕುವೆಂಪುರವರ ನೆನಪನ್ನು ಮರುಕಳಿಸಲು ಅವರ ಜೀವನಕ್ಕೆ ಸಂಬಂಧಿಸಿದ ವಸ್ತುಗಳು ಪುಸ್ತಕಗಳು ಮತ್ತು ಪ್ರಶಸ್ತಿಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ.

                     ಇಲ್ಲಿಯ ಪಕ್ಕದಲ್ಲಿ ಕವಿಶೈಲವಿದ್ದು ಕುವೆಂಪುರವರಿಗೆ ಸ್ಪೂರ್ತಿ ನೀಡಿದ ತಾಣ ಎಲ್ಲೆಲ್ಲಿ ನೋಡಿದರೂ ಸಾಲೂ ಸಾಲು ಗಿರಿಪಂಕ್ತಿ. ಈ ತಾಣದ ಪ್ರಕೃತಿಯ ಸೌಂದರ್ಯ ಆಸ್ವಾದಿಸುವ ಕುವೆಂಪು, ಬಿ. ಎಂ ಶ್ರೀ. ಮುಂತಾದ ಕನ್ನಡದ ಹೆಸರಾಂತ ಕವಿಗಳು ಕುಳಿತ ಜಾಗ ಇದಾಗಿದೆ. ಪ್ರಸ್ತುತ ಇಲ್ಲಿ ಕುವೆಂಪುರವರ ಸಮಾಧಿಯನ್ನು ನೋಡಬಹುದಾಗಿದೆ. ಹಂಪಿ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಇಲ್ಲಿ ಕಂಡು ಬರುತ್ತದೆ. 

         ಈ ಸ್ಥಳವು ಬೆಂಗಳೂರು ಕೇಂದ್ರದಿಂದ 349 ಕಿ. ಮೀ. ದೂರದಲ್ಲಿದೆ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ಮಾರ್ಗದಲ್ಲಿ ಈ ಸ್ಥಳ ಸಿಗುತ್ತದೆ.