Kundhadhri

ಕುಂದಾದ್ರಿ:

                      ಇದು ಒಂದು ಜೈನ ತೀರ್ಥಯಾತ್ರಾ ಸ್ಥಳ. ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಗುಡ್ಡೇಕೇರಿಯಿಂದ ಎಡಕ್ಕೆ ತಿರುಗಿದರೆ ಕುಂದಾದ್ರಿ ಪರ್ವತದ ದರ್ಶನವಾಗುತ್ತದೆ. ಕೊಂದ ಕುಂದಾಚಾರ್ಯರೆಂಬ ಮುನಿಗಳು ನೆಲೆಸಿದ ಅದ್ರಿ, ಕುಂದಾದ್ರಿ, ತಲೆ ಎತ್ತಿ ನೋಡಿದರೂ ತುದಿ ಕಾಣದ ಕುಂದಾದ್ರಿ ಚಾರಣಕ್ಕೆ ಹೇಳಿ ಮಾಡಿಸಿದ ಜಾಗ. ಸುತ್ತೆಲ್ಲಾ ಅಡಿಕೆ ಲೋಟಗಳು ಹಸಿರು ಚಾಪೆಯಂತೆ ಹರಡಿದೆ. ಕುಂದಾದ್ರಿಯ ತುದಿಯವರೆಗೂ ಇತ್ತೀಚೆಗೆ ವಾಹನ ಮಾರ್ಗವಿದ್ದರೂ ಬೆಟ್ಟವನ್ನು ಕಾಲುದಾರಿಯಲ್ಲಿ ಹತ್ತುವುದೇ ಒಂದು ಮಜ.

                         ಜೊತೆಗೆ ಹೊಟ್ಟೆ ತುಂಬಾ ಏನಾದರೂ ತಿನ್ನಲು ತರದಿದ್ದರೆ ಈ ಪ್ರವಾಸ ಪ್ರಯಾಸವಾಗಿ ಮಜ - ಸಜವಾದೀತು ಜೋಕೆ. ಮೆಟ್ಟಿಲುಗಳನ್ನು ಏರಿ ಕುಂದಾದ್ರಿ ತುದಿಯನ್ನು ತಲುಪಿದಾಗ ಪಾಶ್ರ್ವನಾಥ ಚೈತ್ಯಾಲಯದ ಎಡಭಾಗದಲ್ಲಿ ಸಿಹಿನೀರಿನ ಕೊಳವೆ ಇದೆ. ಎಂತಹ ಬೇಸಿಗೆಯಲ್ಲೂ ಬತ್ತದ ನೀರು ಇಲ್ಲಿಗೊಂದು ವರ. ಕಡಲ ತಡಿಯ ಕನ್ಯಾಕುಮಾರಿಯಂತೆ ಸೋರ್ಯೋದಯ ಸೂರ್ಯಸ್ತಗಳ ವೀಕ್ಷಣೆಗೆ ಹೇಳಿ ಮಾಡಿಸಿದ ಜಾಗ.