Sri Sigandoor

 ಶ್ರೀ ಸಿಗಂಧೂರು:

                      ಸಿಗಂಧೂರು ಸಾಗರದಿಂದ 50 ಕಿ. ಮೀ. ದೂರದಲ್ಲಿ ತುಮರಿ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಸಾಗರದಿಂದ ಹೊಳೆಬಾಗಿಲು ಮಾರ್ಗದಲ್ಲಿ ಹೋಗುವ ಬಸ್ಸಿನಲ್ಲಿ ಸಾಗಿದರೆ ಸಿಗಂಧೂರು ಸಿಗುತ್ತದೆ. ಧಾಮಿಂಕ ಪಾವಿತ್ರತ್ಯೆಯ ಜೊತೆಗೆ ಪ್ರವಾಸಿಗರ ಕಣ್ಮನ ಸೆಳೆಯುವ ಕ್ಷೇತ್ರವಾಗಿ ಈಚೆಗೆ ಬೆಳೆಯುತ್ತದೆ.

                      ಇದಕ್ಕೆ ಸುಮಾರು ಎರಡೂವರೆ ಶತಮಾನಗಳ ಇತಿಹಾಸ ಇದೆ ಎಂದು ಸ್ಥಳಿಕರ ಅಭಿಪ್ರಾಯ. ಪ್ರತಿ ವರ್ಷ ಮಕರ ಸಂಕ್ರಾತಿಯಂದು ಎರಡು ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಮಂಗಳವಾರ, ಶಿಕ್ರವಾರಗಳಲ್ಲಿ ವಿಶೇಷ ಪೂಜೆ ಇದೆ. ಶರಾವತಿ ಹಿನ್ನೀರಿನಲ್ಲಿ ಲಾಂಚ್ ಯಾನ ಒಂದು ರೋಮಾಂಚಕ ಅನುಭವ ನೀಡುತ್ತದೆ.