Varadalli

ವರದಹಳ್ಳಿ:

                 ಸಾಗರದಿಂದ ಸುಮಾರು 10 ಕಿ. ಮೀ. ದೂರದಲ್ಲಿ ಸಾಗರ ಯಡಜಿಗಳೆಮನೆ ಮಾರ್ಗದಲ್ಲಿದೆ. ಇದೊಂದು ಚಿಕ್ಕ ಗ್ರಾಮ ನಿಸರ್ಗ ರಮಣೀಯ. ದೇವಿಯು ಮೂಕಾಸುರನನ್ನು ಒದ್ದಿದ್ದರಿಂದ ವದ್ದಳ್ಳಿ ಎಂದೂ ಭಕ್ತರಿಗೆ ಆಕೆ ವರ ನೀಡಿದ್ದರಿಂದ ವರದಪುರ ಎಂದು ಹೆಸರು ಬಂದಿರುವುದಾಗಿ ಐತಿಹ್ಯವಿದೆ. ಮಹಿಷಾಸುರ ಮರ್ದಿನಿಯನ್ನು ಆರಾಧ್ಯ ದೈವವಾಗಿಟ್ಟುಕೊಂಡಿರುವ ವರದಹಳ್ಳಿ ನಿಸರ್ಗದ ಮಡಲಲ್ಲಿ ಅಡಗಿರುವ ಈ ಸ್ಥಳ. 1951 ರಲ್ಲಿ ಶ್ರೀ ಭಗವಾನ್ ಶ್ರೀಧರರು ತಮ್ಮ ದಿವ್ಯ ದೃಷ್ಟಿಯಿಂದ ಪರಿಸರವನ್ನು ವೀಕ್ಷಿಸಿ ತಪಸ್ಸಿಗೆ ಪ್ರಶಾಂತ ಸ್ಥಳವೆಂದು ನಿರ್ಧರಿಸಿ ಆಶ್ರಮವನ್ನು ನಿರ್ಮಾಣ ಮಾಡಿದರು. ಅವರಿಂದ ಸ್ಥಾಪಿತವಾದ ಆಶ್ರಮ ಪ್ರಸಿದ್ದವಾಗಿದೆ. ಇದು ಶ್ರೀಧರರು ಮುಕ್ತರಾಗುವವರೆಗೆ ಅಂದರೆ

                  1973 ರವರೆಗೆ ಅವರು ತಪೋವನವಾಗಿ ಪ್ರಖ್ಯಾತವಾಗಿತ್ತು. ಶ್ರೀಧರ ತೀರ್ಥಗಳು, ಅವರು ತಪಸ್ಸು ಮಾಡಿದ ಗುಹೆ, ಧರ್ಮ, ಧ್ವಜ, ಬೃಂದಾವನಗಳಿವೆ. ಮೊದಲು ಈಗಿನ ಶ್ರೀ ಜಗದಾಂಬಾ ದೇವಾಲಯದ ಹಿಂಭಾಗದಲ್ಲಿ, ನಂತರ ಮಧ್ಯಕುಟಿಯಲ್ಲಿ ಆನಂತರ ಶಿಖರ ಕುಟಿಯಲ್ಲಿ ಶ್ರೀ ಶ್ರೀಧರರು ತಪಸ್ಸನ್ನು ಆಚರಿಸಿದರು. ಆಶ್ರಮ ನಿರ್ಮಾಣವಾಯಿತು. ಏಳು ವರ್ಷ ಮೌನಾವೃತದ ಮೂಲಕ ವಿಶ್ವಧರ್ಮ ಪ್ರತೀಕವಾದ ಪಂಚಲೋಹ ನಿರ್ಮಿತ ಧ್ವಜಸ್ಥಂಭವು ಎತ್ತರವಾದ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿತು.