ikkeri

ಇಕ್ಕೇರಿ:

                     ಕೆಳದಿ ಸಂಸ್ಥಾನದ ಎರಡನೇ ರಾಜಧಾನಿ ಇಕ್ಕೇರಿ. ಸಾಗರದಿಂದ ಸುಮಾರು 3 ಕಿ. ಮೀ. ದೂರದಲ್ಲಿದೆ ಅಂದಿನ ವೈಭವವನ್ನು ಪ್ರತಿನಿಧಿಸುವ ಅಘೋರೇಶ್ವರ ದೇವಾಲಯ, ಟಂಕಸಾಲೆ ಗಣಪತಿ, ಕೆರೆ, ಕೋಟೆ ಅಚಿಜನೇಯ ದೇವಾಲಯ, ಕೋಟೆ ಕೊತ್ತಲುಗಳು ಇಲ್ಲಿವೆ.

                      ಅಘೋರೇಶ್ವರ ದೇವಾಲಯವು 16 ನೇ ಶತಮಾನದಲ್ಲಿ ನಿಮಿಂತಗೊಂಡಿದ್ದು ಹೊಯ್ಸಳ, ಚಾಲುಕ್ಯ ಶೈಲಿಯಲ್ಲಿದೆ. ಪ್ರಕಾರದಲ್ಲಿನ ಬಸವನ ಮಂಟಪದಲ್ಲಿನ ಬಸವ ಆಕರ್ಷಣೀಯವಾಗಿದೆ. ಈ ದೇವಾಲಯದ ಕೆಲಸವು ಹುಂಚದ ಆಚಾರಿ ವೆಂಕಟಯ್ಯನಿಂದ ನಿರ್ಮಿತವಾಗಿರುವುದಾಗಿ ದೇವಾಲಯ ಎದುರಿನಲ್ಲಿನ ಬರಹ ಹೇಳುತ್ತದೆ.