Chandragutthi

ಚಂದ್ರಗುತ್ತಿ:

                 ಇತಿಹಾಸ ಹಾಗೂ ಪುರಾಣ ಪ್ರಸಿದ್ದ ಚಂದ್ರ ಗುತ್ತಿ ಪಟ್ಟಣದ ಪಶ್ಚಿಮಕ್ಕೆ ಸುಮಾರು 30 ಕಿ. ಮೀ. ದೂರದಲ್ಲಿದೆ. ಇಲ್ಲಿನ ಗುಡ್ಡ ಎತ್ರದಲ್ಲಿದ್ದು ಚಂದ್ರ ಗುಡ್ಡದ ಮೇಲೆ ಇದ್ದಂತೆ ಭಾಸವಾಗುತ್ತಿರುವ ಹಿನ್ನಲೆಯಲ್ಲಿ ಚಂದ್ರಗುತ್ತಿ ಹೆಸರು ಬಂದಿರುವ ಸಾಧ್ಯತೆಯಿದೆ. 

                   ಇಲ್ಲಿ ಶ್ರೀ ರೇಣುಕಾ ಗುಡಿ ಪ್ರಸಿದ್ದ ಹಾಗೂ ಸುಮಾರು 15 – 16 ನೇ ಪಂಥದ ನೆರಳಿರುವ ಇಲ್ಲಿ ಮಾತಂಗಿ ತಾಂತ್ರಿಕ ಪೂಜಾರ್ಹಳಾಗಿದ್ದಾಳೆ. ಇಲ್ಲಿ ಇನ್ನೂ ಅನೇಕ ಗುಡಿಗಳಿದ್ದು ಸೊರಬದಿಂದ ಚಂದ್ರಗುತ್ತಿ ಆರಂಭಕ್ಕಿರುವ ಬನದಮ್ಮ ಬನಶಂಕರಿ ಎಂದೆಲ್ಲ ಕರೆಯುವ ವನದೇವತೆ ಬಂದಮ್ಮ 16 ನೇ ಶತಮಾನಕ್ಕೆ ಸೇರುವಂತಹದ್ದು. ಗುಡಿ ಮೂಲದಲ್ಲಿ ಜಂಬಿಟ್ಟಿಗೆಯಿಂದ ರಚಿತವಾಗಿದ್ದು, ಕಾಲಾನಂತರ ನವೀಕೃತಗೊಂಡಿದೆ. ಅಲ್ಲಿಂದ ಮುಂದೆ ಪಾಳು ಜೈನ ಬಸದಿಯೊಂದು ಇದ್ದು ಬಾಗಿಲವಾಡದ ಲಲಾಟವನ್ನು ಗಮನಿಸಿದರೆ ಬಹುತೇಕ ಚಂದ್ರಗುತ್ತಿ ಪ್ರಸಿದ್ದ ಜೈನ ಕ್ಷೇತ್ರವೂ ಆಗಿತ್ತೆನ್ನಲೂ ಶಾಸನ ಉಲ್ಲೇಖ ಗಮನಿಸಬಹುದು. ಹಾಗೆಯೇ ಗ್ರಾಮದ ಸನಿಹವಿರುವ ಬಸ್ತಿಕೊಪ್ಪ ಕೂಡ ಜೈನ ಸಂಬಂಧಿ ವಿಚಾರಕ್ಕೆ ಪುಷ್ಠಿಯಾಗಿದೆ. ಮುಂದುಮ್ಮೆ ಇಂತಹ ತಾಂತ್ರಿಕ ಅಥವಾ ನಾಥ ನೆರಳುಳ್ಳ ಇಲ್ಲೆ ಬೆತ್ತಲೆ ಸೇವೆ ಜಗತ್ಪತ್ರಸಿದ್ದವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.