Hombuja

ಹೊಂಬುಜ:

            ಐತಿಹಾಸಿಕ ಹಿನ್ನಲೆಯಂತೆ ಉತ್ತರದ ಮದುರೆಯಿಂದ ಪ್ರಾಣ ಭಯದಿಂದ ಪದ್ಮಾವತಿ ದೇವಿಯ ವಿಗ್ರಹದೊಂದಿಗೆ ಬಂದ ಜಿನದತ್ತರಾಯನಿಗೆ ಪದ್ಮಾವತಿ ದೇವಿಯು ನಾನು ಇಲ್ಲಿಯೇ ನೆಲೆಸುವುದಾಗಿ ನೀನು ಇಲ್ಲಿಯೇ ರಾಜ್ಯವನ್ನು ಸ್ಥಾಪಿಸು ಎಂಬುದಾಗಿ ಪ್ರೇರಣೆ ನೀಡಿದಳು. ರಾಜ್ಯ

              ಸ್ಥಾಪಿಸಲು ಬೇಕಾದ ಸಂಪತ್ತನ್ನು ದೊರಕಿಸಲು ರಸಬಾವಿಯೊಂದನ್ನು ಸೃಷ್ಟಿಸಿ ಅದರಲ್ಲಿ ಕಬ್ಬಿಣ ಮುಳುಗಿಸಿದರೆ ಬಂಗಾರ ದೊರೆಯುವಂತೆ ಅನುಗ್ರಹಿಸಿದಳೆಂದು ನಂಬಲಾಗಿದೆ. ಆದ್ದರಿಂದ ಈ ಸ್ಥಳಕ್ಕೆ ಹೊಂಬುಜ ಎಂದು ಹೆಸರಾಯಿತು. ಇಲ್ಲಿರುವ ಶ್ರೀ ಪದ್ಮಾವತಿ ಮತ್ತು ಪಾಶ್ರ್ವನಾಥ ಮಂದಿರಕ್ಕೆ ಸಾವಿರಾರು ಪ್ರವಾಸಿಗರು, ಭಕ್ತಾದಿಗಳು ಬರುತ್ತರೆ. ಮುಂದೆ ಗಂಗರ ಸಾಮಂತರಾದ ಸಾಂತರರು ಈ ಹೊಂಬುಜವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸುಮಾರು 800 ವರ್ಷ ಆಳ್ವಿಕೆ ನಡೆಸಿದರು.

               ಹೊಂಬುಜದಲ್ಲಿ ಹಲವು ಶಾಸನಗಳು, ಕೋಟೆಗಳು, ಪುರಾತನ ದೇವಾಲಯಗಳು ಕಂಡುಬರುತ್ತವೆ. ಇದು ಜೈನರ ಪ್ರವಿತ್ರ ಯಾತ್ರಾ ಸ್ಥಳವಾಗಿದೆ.