Saani katta

ಉಪ್ಪುಉತ್ಪಾದನಾಕೇಂದ್ರ, ಸಾಣಿಕಟ್ಟಾ:

                 ಉಪ್ಪು ತಯಾರಿಕೆಯ ಹಲವು ವಿಧಾನಗಳನ್ನು ಪ್ರತ್ಯಕ್ಷ ಅರಿತುಕೊಳ್ಳಲು, ವೀಕ್ಷಿಸಲು, ಸೂಕ್ತ ಸ್ಥಳ ಸಾಣಿಕಟ್ಟಾ. ನಾಗರಬೈಲನ ಸುಮಾರು 500 ಎಕರೆ ಪ್ರದೇಶದಲ್ಲಿ ಉಪ್ಪನ್ನು ಉತ್ಪಾದಿಸಲಾಗುತ್ತದೆ. ಕುಮುಟಾದಿಂದ 23 ಕಿ.ಮೀ ದೂರದಲ್ಲಿ ಈ ಕೇಂದ್ರವಿದೆ.

                 ಕುಮುಟಾ-ಅಂಕೋಲಾ ಮಾರ್ಗದಲ್ಲಿ ಮಾದನಗೇರಿ ಕ್ರಾಸ್‍ನಲ್ಲಿ ಎಡಕ್ಕೆ ಗೋಕರ್ಣ ಮಾರ್ಗದಿಂದ ಸಾಣಿಕಟ್ಟಾವನ್ನು ತಲುಪಬಹುದು.1952ರಲ್ಲಿಯೇ ಉಪ್ಪು ಉತ್ಪಾದನೆಯ  ಸಹಕಾರಿ ಸಂಘ ಇಲ್ಲಿ ಸ್ಥಾಪನೆಗೊಂಡಿದೆ. ಪ್ರತಿನಿತ್ಯ 180-200 ಮೆಟ್ರಿಕ್‍ಟನ್‍ ಉಪ್ಪು ಉತ್ಪಾದನೆಯಾಗುತ್ತದೆ. ವರ್ಷಕ್ಕೆ 10-12 ಸಾವಿರ ಮೆಟ್ರಿಕ್‍ ಟನ್‍ ಉಪ್ಪು ಹೊರ ಮಾರುಕಟ್ಟೆಗೆ ರವಾನೆಯಾಗುತ್ತದೆ .

           ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಉತ್ಪಾದನೆ ಹೆಚ್ಚು. ಸುತ್ತಲಿನ ಜನರಿಗೆ ಉದ್ಯೋಗವನ್ನು ನೀಡಿದೆ ಈ ಕೇಂದ್ರ.