Murudeshwara Purana

ಮುರ್ಡೇಶ್ವರ ಪೌರಾಣಿಕ ಹಿನ್ನೆಲೆ:

                ಕೈಲಾಸದಿಂದ ಶಿವನ ಆತ್ಮಲಿಂಗವನ್ನು ಹೊತ್ತು ಲಂಕೆಗೆ ಬರುತ್ತಿದ್ದ ರಾವಣನು ಗೋಕರ್ಣದಲ್ಲಿ ಲಿಂಗವು ಭೂಸ್ಪರ್ಶಗೊಂಡು ನಿಶ್ಚಲವಾದಾಗ ಸಿಟ್ಟಿನಿಂದ ಆತ್ಮಲಿಂಗವನ್ನು ಆವರಿಸಿದ ಬಟ್ಟೆಯನ್ನು ಕಿತ್ತು ಎಸೆದಾಗ ಅದು ಕಂದುಕ ಪರ್ವತದ ಮೇಲೆ ಬಿದ್ದು ಲಿಂಗ ಉದ್ಭವವಾಯಿತೆಂಬ ನಂಬಿಕೆ ಇದೆ. ಈ ಲಿಂಗವೇ ವೃಡೇಶ್ವರನೆಂದು ಪ್ರಚಲಿತವಾಯಿತು. ಚಂಡಿನಾಕಾರದ ತರದಿ ಭಾಸವಾಗುತ್ತಿರುವ ಈ ಗುಡ್ಡಕ್ಕೆ ಕಂದುಕಗಿರಿ ಎಂಬ ಹೆಸರು ಪುರಾಣದಲ್ಲಿ ಉಲ್ಲೇಖಿತವಾಗಿದೆ.

                ಚರಿತ್ರೆಯಿಂದ ದೇವಾಲಯದ ಕುರಿತಾದ 2 ಶಾಸನಗಳು ದೇವಾಲಯದ ಇತಿಹಾಸವನ್ನು ಸಾರುತ್ತಿದೆ. ಗೇರುಸೊಪ್ಪದ ಅರಸ ತನ್ನ ವೈಭವದ ಕಾಲದಲ್ಲಿ ನಿರ್ಮಿಸಿದ ಅನೇಕ ದೇವಾಲಯಗಳಲ್ಲಿ ಮುರ್ಡೇಶ್ವರವೂ ಒಂದಾಗಿರುವುದು ಆಧಾರದಿಂದ ತಿಳಿದು ಬರುತ್ತದೆ. ಗೇರುಸೊಪ್ಪ ಸೀಮೆಯನ್ನು ವೈಭವದಿಂದ ಆಳಿದ ಕೃಷ್ಣದೇವರಾಯನ ಕಾಲದಲ್ಲಿ ಅಂದರೆ ಕ್ರಿ.ಶ 1542ರಲ್ಲಿ ನಿರ್ಮಾಣವಾದ ಮುರ್ಡೇಶ್ವರದ ನಂದಿಮಂಟಪವನ್ನು ಶಿವನ ಮುಂದೆ ನಿರ್ಮಿಸಿರುವ ವಿಚಾರಗಳನ್ನು ಈ ಆಧಾರದಿಂದ ತಿಳಿಯಬಹುದಾಗಿದೆ.

               ಇನ್ನೊಂದು ಶಾಸನವು ಕರ್ನಾಟಕವನ್ನಾಳಿದ ಪ್ರಸಿದ್ದ ರಾಜಮನೆತನವಾದ ವಿಜಯನಗರ ಅರಸರ ಕಾಲಕ್ಕೆ ಸಂಬಂಧಪಟ್ಟ ಶಾಸನವಾಗಿದ್ದು. ಕಂಬದ ಮೇಲೆ ಕೆತ್ತಿರುವುದು ವಿಶೇಷವಾಗಿದೆ. ವಿಜಯನಗರ ಅರಸರಲ್ಲಿ ಪ್ರಸಿದ್ಧತೆಯನ್ನು ಪಡೆದ 2ನೇ ದೇವರಾಯನಕಾಲವು ದೇವಾಲಯಗಳ ಜೀರ್ಣೋದ್ಧಾರ ಹಾಗೂ ನಿರ್ಮಾಣಕ್ಕೆ ವಿಶೇಷ ಕಾಳಜಿ ಹೊಂದಿರುವುದನ್ನು ತಿಳಿಸುತ್ತದೆ. ಈ ಅರಸನು ತನ್ನ ಆಡಳಿತಾವಧಿಯಲ್ಲಿ ಮುರ್ಡೆಶ್ವರ ದೇವಾಲಯವನ್ನು ಕಟ್ಟಿಸಿದನೆಂದು ಉಲ್ಲೇಖಗಳು ಸಾರುತ್ತವೆ.

                ಜಟ್ಟಪ್ಪ ನಾಯಕನು 14ನೇ ಶತಮಾನದಲ್ಲಿ ತನ್ನ ಆಳ್ವಿಕೆಯ ಪರ್ವಕಾಲದಲ್ಲಿ ಮುರ್ಡೇಶ್ವರದ ಗುಡಿಯನ್ನು ಜೀರ್ಣೋದ್ಧಾರಮಾಡಿದ ಕುರಿತು ಉಲ್ಲೇಖಗಳಿವೆ. ದೊರೆ ಜಟ್ಟಪ್ಪ ನಾಯಕನು ಭಟ್ಕಳದ ಇತಿಹಾಸದ ಅವಲೋಕನದಿಂದ ಈ ಅಂಶವು ತಿಳಿದುಬರುತ್ತದೆ. ಗುಡ್ಡದ ಸುತ್ತಲೂ ಅಲ್ಲಲ್ಲಿ  ಕೋಟೆಯಾಕಾರದ ಕುರುಹುಗಳು ಹಾಗೂ 4 ದಿಕ್ಕಿನಲ್ಲಿ ಕಾವಲು ನೆಲೆ ಕಟ್ಟಿದ ಸಾಕ್ಷಿಗಳಿಂದ ಈ ಗುಡ್ಡವನ್ನು ಕೋಟೆಗುಡ್ಡ ಎಂದು ಕರೆಯುತ್ತಿದ್ದರು. ಶತ್ರುಗಳನ್ನು ವೀಕ್ಷಿಸಲು ಗುಡ್ಡದ 4 ದಿಕ್ಕಿನಲ್ಲಿ ನಿರ್ಮಿಸಿದ ಕೋಟೆಗಳು ಸಹಕರಿಸುತ್ತಿದ್ದವು. ಶತ್ರುಗಳ  ಆಕ್ರಮಣವನ್ನು ತಡೆಯಲು ಕೋಟೆಗುಡವು ಅನುಕೂಲವಾಗಿತ್ತು. ಮಾವಳ್ಳಿ (ಮುರ್ಡೇಶ್ವರ) ಯಲ್ಲಿ ಇರುವ ಬಂದರನ್ನು ಸ್ಥಳೀಯ ವ್ಯವಹಾರಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಟಿಪ್ಪು ಸುಲ್ತಾನನು ತನ್ನ ಆಳ್ವಿಕೆಯ ಕಾಲದಲ್ಲಿ ನವೀಕರಣ ಮಾಡಿದನು. 1962-63ರ ವರೆಗೆ ಬಂದರಿನ ಮೂಲಕ ನಡೆಯುವ ವಹಿವಾಡು ಉತ್ತಮವಾಗಿತ್ತು. ಆದರೆ 1963-64ರಲ್ಲಿ ಬಂದರಿನ ಮೂಲಕ ನಡೆಯುವ ವ್ಯವಹಾರವು ಕುಸಿತಗೊಂಡಿದ್ದರಿಂದ ಮುಂದೆ ಅದರ ಅಭಿವೃದ್ಧಿಯಾಗಲಿಲ್ಲಾ ಎಂದು ಆಧಾರಗಳಿಂದ ತಿಳಿದುಬರುತ್ತದೆ.

ಭಕ್ತರ ರಕ್ಷಕ ಮುರ್ಡೇಶ್ವರ :

                   ಪಂಚಕ್ಷೇತ್ರಗಳಲ್ಲಿ ಒಂದಾದ ಮುರ್ಡೇಶ್ವರವು ಭಟ್ಕಳದಿಂದ ಉತ್ತರಕ್ಕೆ 16ಕಿ.ಮೇ. ದೂರದಲ್ಲಿದೆ. ಈ ಹಿಂದೆ ಕಡಲ ದಂಡೆಯಿಂದ ಅನತಿ ದೂರದಲ್ಲಿ ಸಮುದ್ರದಲ್ಲಿ ಪ್ರತ್ಯೇಕವಾಗಿದ್ದ ಗುಡ್ಡದ ಮೇಲಿರುವ ಶಿವ ದೇವಾಲಯವು ಈಗ ಸಂಪರ್ಕ ರಸ್ತೆಯನ್ನು ಹೊಂದಿದೆ.

                  ಶಿವನು ಸ್ಮಶಾನವಾಸಿಯೆನ್ನುವುದು ಪುರಾಣಗಳು ಸಾರುತ್ತವೆ. ನಮ್ಮ ಮನಸ್ಸೆಂಬ ಸ್ಮಶಾನದಲ್ಲಿಯ ಅರಿಷಡ್ ವರ್ಗಗಳೆಂಬ ಕಲ್ಮಶಗಳನ್ನು ದಹಿಸುವ ನಮ್ಮ ಆತ್ಮವೇ ಒಂದು ಸ್ಮಶಾನ. ಈ ಸ್ಮಶಾನದಲ್ಲಿರುವ ಶಕ್ತಿಯೇ ಈಶ್ವರ. ಮುರ್ಡೇಶ್ವರನಲ್ಲಿ ಭಕ್ತಿಯ ಆರಾಧನೆಗಾಗಿ ಬರುವ ಭಕ್ತರಲ್ಲಿಯ ಕಶ್ಮಲಗಳನ್ನು ದೂರಮಾಡಿ, ಪರಿಶುದ್ಧ ವ್ಯಕ್ತಿತ್ವದ ಮನುಷ್ಯನನ್ನಾಗಿ ಪರಶಿವನು ನಿರೂಪಿಸುತ್ತಾನೆ. ಕಾರಣ ವಿಶ್ವದ ವಿವಿಧ ರಾಷ್ಟ್ರಗಳ ಜನತೆಯು ವರ್ಷದಿಂದ ವರ್ಷಕ್ಕೆ ಮುರ್ಡೇಶ್ವರನ ಸನ್ನಿಧಿಗೆ ನಂದು ಸಾರ್ಥಕತೆಯನ್ನು ಪಡೆಯುತ್ತಿದ್ದಾರೆ. ಚಿಂತಾಮಣಿಯ ಸ್ಪರ್ಶದಿಂದ ಕಬ್ಬಿಣ ಹೇಗೆ ಬಂಗಾರವಾಗುತ್ತದೆಯೇ ಹಾಗೆ ಶಿವನ ಅನುಗ್ರಹದಿಂದ ಇಲ್ಲಿ ಬರುವ ಎಲ್ಲಾ ಭಕ್ತರು ಜೀವನದಲ್ಲಿ ಪುನೀತರಾಗುತ್ತಾರೆ. ಗಂಗಾನದಿಯಲ್ಲಿ ಮಿಂದು ಈಶ್ವರನ ಆರಾಧನೆಯನ್ನು ಮಾಡಿದರೆ ಅಮರತ್ವ ಪಡೆಯುತ್ತೇವೆ. ‘ ಸಾಗರೇ ಸರ್ವತೀರ್ಥಾನಿ’  ಎನ್ನುವಂತೆ ಸಾಗರದಲ್ಲಿ ಎಲ್ಲಾ ತೀರ್ಥಗಳು ಸಮ್ಮೀಲನವಾಗುತ್ತವೆ. ಮುರ್ಡೇಶ್ವರನ ಸನ್ನಿಧಿಗೆ ಬರುವ ಭಕ್ತರು ರತ್ನಾಕರನಲ್ಲಿ ಮಿಂದು, ಶಿವದರ್ಶನ ಪಡೆದು,  ಕೃತಾರ್ಥರಾಗುತ್ತಾರೆ.

                     ಶಿವನ ಆಭರಣ ಸರ್ಪ, ಗಣಪತಿಯ ವಾಹನ ಇಲಿ, ಪಾರ್ವತಿಯ ವಾಹನ ಸಿಂಹ, ಈಶ್ವರನ ವಾಹನ ನಂದಿ, ಸುಬ್ರಹ್ಮಣ್ಯನ ವಾಹನ ನವಿಲು, ಇವು ಪರಸ್ಪರ ಶತ್ರುಗಳಾಗಿದ್ದರೂ ಈಶ್ವರನ ಪರಿವಾರದಲ್ಲಿ ಸ್ನೇಹದಿಂದ, ಪ್ರೀತಿಯಿಂದ ಅನ್ಯೋನ್ಯವಾಗಿದ್ದಾರೆ. ಮುರ್ಡೇಶ್ವರನ ಸನ್ನಿಧಿಗೆ ಬರುವ ಭಕ್ತರು ಹರನ ಪ್ರೀತಿಯ, ಕಾರುಣ್ಯದ ಕೃಪಾಸಾಗರದಲ್ಲಿ ಮುಳುಗಿ ಪಾವನರಾಗುತ್ತಾರೆ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ನಂದೀಶ್ವರನು ಅಹಂಕಾರದಿಂದ ಮೆರೆದು ಶಿವನನ್ನು ಯುದ್ಧಕ್ಕೆ ಕರೆದಾಗ ಶೀವನಿಂದ ಸೋಲಲ್ಪಟ್ಟು,, ಶಿವನಿಗೆ ಶರಣಾಗಿ ಪರಶಿವನ ವಾಹನವಾಗುತ್ತಾನೆ. ಅವನಿಗೆ ಪ್ರಥಮ ಗಣಗಳಲ್ಲಿ ಸ್ಥಾನ ಲಭಿಸುತ್ತದೆ. ಮುರ್ಡೇಶ್ವರನಲ್ಲಿ ಬಂದು ಅಹಂಕಾರ ಮರೆತು, ಶಿವನಿಗೆ ಶಿರಬಾಗಿ ಪೂಜೆಸಲ್ಲಿಸುವ ಭಕ್ತರು ಶಿವನ ಕೃಪೆಗೆ ಪಾತ್ರರಾಗುತ್ತಾರೆ.

                      ಶಿವ ಶೀವನ ಗಣಗಳು ನಂದಿ, ಮಹಾಂಕಾಳ, ಶೂಲಪಾಣಿ, ಪರಶುಪಾಣಿ, ಭೂಸೂಂಡಿ, ವಜ್ರಪಾಣಿ, ಕಾಲಕೇತು, ದುರ್ಮಾಕ್ಷ ಇತ್ಯಾದಿ ಗಣಗಳು. ತಮ್ಮ ದುಷ್ಟತನ ಬಿಟ್ಟು ಶಿವ ಸಾನಿಧ್ಯದಿಂದ ಸಾತ್ವಿಕತೆಯನ್ನು ರೂಢಿಸಿಕೊಂಡಿವೆ. ವಿಶ್ವದ ಮೂಲೆ ಮೂಲೆಗಳಿಂದ ಶಿವನಲ್ಲಿಗೆ ಬಂದು ಸಾತ್ವಿಕತೆ ಪಡೆಯುವ ಪರಮಭಕ್ತರ ಸಂಖ್ಯೆ ಮುರ್ಡೇಶ್ವರದಲ್ಲಿ ದಿನೇ ದಿನೇ ವೃದ್ಧಿಗೊಳ್ಳುತ್ತಲೇ ಇದೆ.

                     ಯಾವ ಮಹತ್ತರ ಶಕ್ತಿಯು, ಭೂಮಂಡಲವನ್ನೇ ಪೀಠವಾಗಿ  ಇರಿಸಿಕೊಂಡಿದೆಯೋ, ಯಾವ ಶಕ್ತಿಯ ಶಿರಸ್ಸು ಆಕಾಶಕ್ಕಿಂತಲೂ ಎತ್ತರವಾಗಿದೆಯೋ, ಯಾವ ಶಕ್ತಿಗೆ ನಕ್ಷತ್ರಗಳು ಪುಷ್ಪಮಾಲೆಯ ರೀತಿಯಲ್ಲಿ ಶೋಭಿಸುತ್ತದೆಯೋ, ಯಾವ ಶಕ್ತಿಗೆ ನವಗ್ರಹಘಳು ಹೂವಿನಂತೆ ಪರಿಭ್ರಮಿಸುತ್ತದೆಯೋ, ಯಾವ ಶಕ್ತಿಯ ಕಣ್ಣುಗಳು ಸೂರ್ಯ, ಚಂದ್ರ, ಅಗ್ನಿಯ ಉಪಾದಿಯಲ್ಲಿ ಪ್ರಜ್ವಲಿಸುತ್ತದೆಯೇ; ಯಾವ ಶಕ್ತಿಯ ಉದರದಲ್ಲಿ ಸಪ್ತಪಾತಾಳಗಳು ವಿಜ್ರಂಭಿಸುತ್ತದೆಯೋ; ಯಾವ ಶಕ್ತಿಯ 2 ಭುಜಗಳು ಮಹಾನ್ ಪರ್ವತಳಿಂದ ಉನ್ನತವಾಗಿದೆಯೋ, ಯಾವ ಶಕ್ತಿಯ ಪಾದಗಳು ಸಪ್ತಪಾತಾಳವನ್ನೇ ವ್ಯಾಪಿಸಿದೆಯೋ, ಯಾವ ಶಕ್ತಿಗೆ ಮೇಘಗಳು ಶಿರೋಭೂಷಣವಾಗಿದೆಯೋ, ಯಾವ ಶಕ್ತಿಗೆ ವೇದಗಳು ಷಡಂಗಗಳು ಮುಖವಾಗಿದೆಯೋ, ಯಾವ ಶಕ್ತಿಗೆ ದಶದಿಕ್ಕುಗಳೇ ವಸನವಾಗಿದೆಯೋ ಅಂತಹ ಬ್ರಹ್ಮಾಂಡ ಸ್ವರೂಪದ ವಿಶ್ವ ಚೇತನ ಈಶ್ವರನನ್ನು ನಮಿಸಲು ವಿಶ್ವದ ಜನತೆಯು ಮೂಲೆ ಮೂಲೆಯಿಂದ ಮುರ್ಡೇಶ್ವರಕ್ಕೆ ಆಗಮಿಸಿ ವಿಶ್ವವಂದಿಪ ವಿಶ್ವೇಶ್ವರನ ದರ್ಶನವನ್ನು ನಿತ್ಯವೂ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಶಿವನು ಭಕ್ತ ರಕ್ಷಕನು.

                    ದೇವರ ಸಭೆ, ಸಮಾಲೋಚನೆಗಾಗಿ ಇರುವ ಓಲಗ ಮಂಟಪವು ಕುಂಭ ತೀರ್ಥದ ಹತ್ತಿರ ವಿದೆ. ಕುಂಭ ತೀರ್ಥದ ಸುತ್ತಲೂ ಕಟ್ಟಿರುವ ಕಟ್ಟೆಯನ್ನು ಕೆರೆಕಟೆ ಎನ್ನುತ್ತೇವೆ. ಈ ಮಂಟಪವನ್ನು ತೀರ್ಥ ಮಂಟಪವೆಂತಲೂ ಕರೆಯಲಾಗುತ್ತದೆ. ಸೂರ್ಯನಾರಾಯಣ ಮೂರ್ತಿ, ಭಗವದ್ಗೀತೆಯನ್ನು ಸಾರುವ ದೃಶ್ಯ, ಶನೈಶ್ವರ ಮಂದಿರ, ಶ್ರೀ ಸುಂದರ ರಾಮೇಶ್ವರ ಮಂದಿರ ವಿವಿಂಗ್‍ಫೂಲ್ ಪ್ರವಾಸಿಗರಿಗೆ ಸಾಕ್ಷಾತ ಸ್ವರ್ಗದ ಅನುಭವ ನೀಡುತ್ತದೆ. 

ಡಾ. ಆರ್.ಎನ್.ಎಸ್. ರವರು:                  

                     ಕಂದುಕ ಪರ್ವತದ ಮೇಲಿರುವ ಮುರ್ಡೇಶ್ವರನ ಮಂಡಿರವು ಪ್ರಸ್ತುತ ಜಗತ್ತಿನ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ದೇಶದ ಮೂಲೆ ಮೂಲೆಯಿಂದ ಭಕ್ತಾದಿಗಳು ಪರಶಿವನ ದರ್ಶನಕ್ಕಾಗಿ ಅರಬ್ಬೀಸಮುದ್ರದಿಂದ ಅವೃತ್ತವಾದ ಶೀವ ಮಂದಿರದ ಮುಂದೆ ಸಾಗರೋಪಾದಿಯಲ್ಲಿ ನಿಲ್ಲುವುದನ್ನು ಕಾಣುತ್ತೇವೆ. ಆಧುನಿಕ ಮುರ್ಡೇಶ್ವರದ ನಿರ್ಮಾತೃ ಡಾ. ಆರ್.ಡನ್. ಶೆಟ್ಟಿಯವರ ಕಾಳಜಿಯಿಂದ ತಮಿಳು ಶಿಲ್ಪಿಗಳಿಂದ ಈ ಮಂದಿರವು ನವೀಕರಣಗೊಂಡಿದೆ. ಗ್ರಾನೈಟ್ ಹಾಗೂ ಆರ್.ಸಿಸಿಯಿಂದ ನಿರ್ಮಿಸಲ್ಪಟ್ಟ ದೇವಾಲಯವು ದ್ರಾವೀಡ ಶೈಲಿಯಲ್ಲೆದೆ. 1935ರಲ್ಲಿ ಮುರ್ಡೇಶ್ವರದ ದೇವಾಲಯದ ಗರ್ಭಗುಡಿಯು ಜೀರ್ಣಾವಸ್ಥೆಯನ್ನು ತಲುಪಿತ್ತು. ಮುರ್ಡೇಶ್ವರಕ್ಕೆ ಆಗಮಿಸಿದ ಶ್ರೀ ಶ್ರೀ ಶ್ರೀಧರಸ್ವಾಮಿಗಳು ಈ ದೇವಾಲಯವನ್ನು ವಿಶ್ವಕ್ಕೆ ಪರಿಚಯಿಸುವ ಮಹಾತ್ಮನೊಬ್ಬನು ಹುಟ್ಟಿದ್ದಾನೆ. ಆತನಿಂದಲೇ ದೇವಾಲಯದ ಜೀರ್ಣೋದ್ಧಾರವಾಗುತ್ತದೆ. ಎಂಬ ದಿವ್ಯ ಸಂದೇಶವನ್ನು ಅಂದಿನ ಟ್ರಸ್ಟಿಗಳಿಗೆ ನೀಡಿದ್ದರು. ಟ್ರಸ್ಟಿಗಳಿಗೆ ಶ್ರೀ ಶ್ರೀಧರ ಸ್ವಾಮಿಗಳು ನೀಡಿದ ಸಂದೇಶದ ಪ್ರಕಾರ ವಿಶ್ವದ ಭೂಪಟದಲ್ಲಿ ಮುರ್ಡೇಶ್ವರವನ್ನು  ಗುರುತಿಸುವಂತೆ ಮಾಡಿ ನಿತ್ಯ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತ ಧಾರ್ಮಿಕ ಜಾಗೃತಿಯೊಂದಿಗೆ ದೇವಾಲಯದ ಜೀರ್ಣೋದ್ಧಾರದ ಕಾರ್ಯಮಾಡಿದ ಹಾಗೂ ಈ ದೇವಾಲಯದ ಸಂಪೂಣ್ ನವೀಕರಣಕ್ಕೆ ಕಾರಣೀಕರ್ತರಾದವರು ಡಾ. ಆರ್.ಎನ್.ಎಸ್. ರವರೇ ಆಗಿರುತ್ತಾರೆ. 1935ರಲ್ಲಿ ದೇವಾಲಯದ ಆಡಳಿತಗಾರರು ಹಾಗೂ ಊರಿನವರ ವರ್ಗಣಿ ಮೂಲಕ ಕೆಂಪುಕಲ್ಲುಗಳಿಂದ ಗರ್ಭಗೃಹವನ್ನು ಕಟ್ಟಿಸಿ ಜೀಣೋದ್ಧಾರದ ಕಾರ್ಯವನ್ನು ಮಾಡಿಸಿದರು.

                     1975ರಿಂದ ಡಾ.ಆರ್.ಎನ್.ಶೆಟ್ಟರು ಭಕ್ತ ಸಮುದಾಯದ ಸಹಕಾರದಿಂದ ಹಾಗೂ ದೇವಾಲಯದ ಇನ್ನೋರ್ವ ಮೊಕ್ತೇಸರರಾದ ಶ್ರೀ ನಾಗೇಶ ಕಾಮತರ ಸಹಕಾದಿಂದ ದೇಗುಲದ ಸರ್ವಾಂಗೀಣ ಅಭೀವೃದ್ಧಿಗೆ ಶ್ರಮಿಸಿದರು. ಮುರ್ಡೇಶ್ವರ ದೇವಾಲಯದ ಸಮುಚ್ಛಯದಲ್ಲಿ ಗಣಪತಿ ಮಂದಿರ ಕಟ್ಟಿಸಿ, ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ದೇವರ ಗರ್ಭಗೃಹ, ರಂಗಮಂಟಪ, ನಂಡಿಮಂಟಪ, ಯಜ್ಞ ಶಾಲೆ, ಭೋಜನ ಶಾಲೆ, ದೇವಮಂದಿರ, ಶ್ರೀ ದತ್ತಮಂದಿರ, ಆಚಿಜನೇಯಗುಡಿ ಇತ್ಯಾದಿ ಗುಡಿಗಳ ಜೀರ್ಣೋದ್ಧಾರ ಹಾಗೂ ಹೊಸದಾಗಿ ಸುಬ್ರಹ್ಮಣ್ಯಗುಡಿ, ನವಗ್ರಹಗುಡಿ ಕಟ್ಟಿಸಿದ್ದರಲ್ಲದೇ ಮುರ್ಡೇಶ್ವರಕ್ಕೆ ಪ್ರವೇಶಿಸುವ ರಾಷ್ಟೀಯ ಹೆದ್ದಾರಿ-17ಕ್ಕೆ ಹೊಂದಿಕೊಂಡಿರುವ ಪ್ರವೇಶದ್ವಾರದ ನಿರ್ಮಾಣ ಮಾಡಿ ಮುರ್ಡೇಶ್ವರದ ಸಮಗ್ರ ಚಿತ್ರಣವನ್ನು ಬದಲಿಸಿದ ಕೀರ್ತಿ ಡಾ. ಆರ್. ಎನ್. ಶೆಟ್ಟರಿಗೆ ಸಲ್ಲುತ್ತದೆ.