Banavasi

ಬನವಾಸಿ ಇತಿಹಾಸ:

               ಚಂದ್ರವಳ್ಳಿಯಲ್ಲಿ  ದೊರೆತ ಮಯೂರಶರ್ಮ ಕದಂಬನ ಶಾಸನದಲ್ಲಿ ಅವನು ತ್ರೈಕೂಟಾಭೀರ, ಪಲ್ಲವ, ಪಾರಿಯಾತ್ರಿಕ, ಶಕಸ್ಥಾನ, ಸೇಂದ್ರಕ, ಪುನ್ನಾಟ ಮತ್ತು ಮೌಖರಿ ದೊರೆಗಳನ್ನು ಸೋಲಿಸಿದನೆಂದು ಹೇಳಿದೆ. ತ್ರೈಕೂಟಾಭೀರರ ಶಕವರ್ಷವು ಕ್ರಿ.ಶ.242ರಲ್ಲಿ 250ರಲ್ಲಿ ಇದ್ದನಿಂದೂ ತಿಳಿದು ಬರುತ್ತದೆ. ಶಾಂತಿವರ್ಮ ಕದಂಬನ ತಾಳಗುಂದ ಶಾಸನದಲ್ಲಿ ಮಾನವ್ಯಗೋತ್ರದ ಹಾರೀತಿಪುತ್ರನಾದ ವೈದಿಕ ಬ್ರಾಹ್ಮಣ ಮಯೂರಶರ್ಮನು ಗುರು ವೀರಶರ್ಮನೊಂದಿಗೆ ಪಲ್ಲವೇಂದ್ರ ಪುರವಾದ ಕಾಂಚಿಯ ಘಟಿಕೆಯಲ್ಲಿ ನಿಖಿಲ ಪ್ರವಚನವನ್ನು ಕಲಿಯಲು ಹೋದನೆಂದೂ ಆಗ ಅಲ್ಲಿ ನಡೆಯುತ್ತಿದ್ದ ಅಶ್ವಮೇಧಯಾಗದಲ್ಲಿ ಬ್ರಾಹ್ಮಣರಿಗೆ ತಕ್ಕ ಗೌರವವನ್ನು ಕ್ಷತ್ರಿಯರು ಕೊಡದುದರಿಂದ  ಕ್ರದನಾದ ಮಯೂರಶರ್ಮನು ಜಗತ್ತನೇ ಜಯಿಸಿಬಿಡುವೆನೆಂದು ಶಸ್ತ್ರಪಾಣಿಯಾಗಿ ಪಲ್ಲವರ ಅಂತಪಾಲರನ್ನು ಸೋಲಿಸಿ, ಶ್ರೀ ಪರ್ವತದಲ್ಲಿ ನಿಂತು, ಪಲ್ಲವರಿಗೆ ನಾಣಾವಿಧವಾಗಿ ತೊಂದರೆ ಕೊಡಲಾರಂಭಿಸಿದನೆಂದೂ ಬೃಹತ್ ಬಾಣ ಮುಂತಾದ ದೊರೆಗಳಿಂದ ಕಪ್ಪಕಾಣಿಕೆಯನ್ನು ವಸೂಲು ಮಾಡಲಾರಂಭಿಸಿದನೆಂದೂ ಹೇಳಿದೆ. ಅವನನ್ನು ಬಗ್ಗಿಸಲಾರದೆ. ಪಲ್ಲವರು ತಮ್ಮ ರಾಜ್ಯದಲ್ಲಿ ಅಮರಾರ್ಣವದಿಂದ (ಪಶ್ಚಿಮ ಸಮುದ್ರದಿಂದ) ಪ್ರೇಮಾರದ (ಮಾಳವರ, ತುಂಗಭದ್ರೆಯ ಅಥವಾ ಮಲಪ್ರಭೆ, ಮಲ ಪ್ರವಾಹ ಇಲ್ಲವೆ ಮಲಾಪಹಾರಿನದಿಯ) ವರೆಗಿನ ಭಾಗವನ್ನು ಕೊಟ್ಟು ಪಟ್ಟಗಟ್ಟಿದರು ಎಂಬುದನ್ನೂ ಅದರಲ್ಲೇ ಹೇಳಲಾಗಿದೆ. ಅಶ್ವಮೇಧಯಾಗ ಮಾಡಿದ ಪಲ್ಲವದೊರೆಯೆಂದರೆ ಧರ್ಮಮಹಾರಾಜ ಶಿವಸ್ಕಂದವರ್ಮ. ಶಾತವಾಹನರ ಚಕ್ರಾಧಿಪತ್ಯವು. ಕ್ರಿ.ಶ. 225 ರಲ್ಲಿ ಒಡೆದುಹೋಯಿತೆಂದೂ ಆಗ ಸಿಂಹವರ್ಮ ಬಪ್ಪದೇವಪಲ್ಲವನು ಸ್ವತಂತ್ರ ದೊರೆತನವನ್ನಾರಂಭಿಸಿದನೆಂದೂ ಆಮೇಲೆ ಅವನ ಮಗ ಶಿವಸ್ಕಂದವರ್ಮನು ಅಶ್ವಮೇಧ, ಅಗ್ನಿಷ್ಟೋಮ, ವಾಜಪೇಯ ಮುಂತಾದ ಮಹಾಯಾಗಗಳನ್ನು ಮಾಡಿದ ಪ್ರಸಿದ ಪಲ್ಲವದೊರೆ. ಆತನ ಮೊಮ್ಮಗ ವಿಷ್ಣುಗೋಪನ ಆಳಿಕೆ ಕ್ರಿ.ಶ.325 ಆರಂಭವಾಗುವುದರಿಂದ ಶಿವಸ್ಕಂದವರ್ಮನು ಸುಮಾರು 40 ವರ್ಷಗಳಿಗೆ ಕಡಿಮೆಯಾಗದಷ್ಟು ಕಾಳ ರಾಜ್ಯಭಾರಮಾಡಿ ಅನಂತರ ತನ್ನ ಮಗ ಬುಧ್ಯಂಕುರನಿಗೆ ಕ್ರಿ.ಶ.290 ರಲ್ಲಿ ಪಟ್ಟಗಟ್ಟಿ ವಾನ ಪ್ರಸ್ಥವನ್ನು ಹಿಡಿದನು ಎಂದು ಊಹಿಸಲಾಗಿದೆ.

               ಶಕಸ್ಥಾನ ರಾಜ್ಯಕ್ಕೆ ಕ್ರಿ.ಶ. 250 ರ ಹೊತ್ತಿಗೆ ಉಜ್ಜಯನಿಯು ರಾಜಧಾನಿಯಾಗಿತ್ತು. ವಿಶ್ವಸೇನನೆಂಬ ಶಕರಾಜನು ಕ್ರ..ಶ. 296-300 ರಲ್ಲಿ ಆಳುತ್ತಿದ್ದನು. ಸ್ಕಂದ ಶಿಷ್ಯ ಪಲ್ಲವನು ಸತ್ಯಸೇನ (ಸತ್ಯಸಿಂಹ)ನೆಂಬ ಶಕರಾಜನಿಂದ ಕಾಂಚಿಯ ಘಟಿಕೆಯನ್ನು ವಶಪಡಿಕೊಂಡನು ಎಂದು ಗೊತ್ತಾಗಿದೆ. ಕದಂಬ-ಚಾಲುಕ್ಯರ ಅಬಿಲೇಖಗಳಲ್ಲಿ ‘ಸೇಂದ್ರಕ ವಿಷಯ’ದ ಉಲ್ಲೇಖವಿದೆ; ಗಯೆಯ ಮುದ್ರೆಯಲ್ಲಿ ಗಯಾಪ್ರದೇಶದ ಮೌಖರಿಗಳ ಪ್ರಸ್ತಾಪವಿದೆ.

               ಕ್ರಿ..ಶ. 3ನೆಯ ಶತಮಾನದ ಮಧ್ಯಭಾಗದಲ್ಲಿ ಆಂದ್ರ ಚಕ್ರಾಧಿಪತ್ಯವು ದಕ್ಷಿಣಾಪಥದಲ್ಲಿ ಒಡೆದುಹೋದ ಮೇಲೆ, ಅದರ ವಿವಿಧ ಭಾಗಗಳಿಗೆ ಶಾತವಾಹನರ ಸಾಮಂತರಾಗಿದ್ದ ಇಕ್ಷ್ವಾಕುಗಳು, ಚುಟುಗಳು ಮತ್ತು ಪಲ್ಲವು ಹಾಗೂ ಕದಂಬರು ಉತ್ತರಾಧಿಕಾರಿಗಳೆಂಬ ಪ್ರಸಿದ ಈ ಹಿನ್ನಲೆಯನ್ನವಲೋಕಿಸಿದರೆ ಪಲ್ಲವರ 2ನೆಯ ದೊರೆಯಾದ ಶೀವಸ್ಕಂದವರ್ಮ(=ಸ್ಕಂದಶಿಷ್ಯ)ನೆಂಬವನ ಆಳಿಕೆಯ ಕೊನೆಯ ಕಾಲದಲ್ಲಿ ಅಂದರೆ ಸುಮಾರು ಕ್ರಿ.ಶ.280ರ ಹೊತ್ತಿಗೆ - ಬನವಾಸಿ ರಾಜಧಾನಿಯಲ್ಲಿ ಆಗಲೇ ದಂಡನಾಯಕನೆಂಬ ಗೌರವಕ್ಕೆ ಪಾತ್ರನಾಗಿದ್ದ ಮಯೂರಶರ್ಮ ಕದಂಬನು ಪಟ್ಟಾಭಿಷಿಕ್ತನಾದನು ಮತ್ತು ಅರಬ್ಬಿ ಸಮುದ್ರ ವೆಂಗುರ್ಲೆ, ಶಿವಮೊಗ್ಗ, ಬಾದಮಿ, ಶ್ರೀಪರ್ವತಗಳ ಪರಿಧಿಯಲ್ಲಿ ಬರುವ ಕುಂತಳ ರಾಜ್ಯವನ್ನು ನೇರವಾಗಿಯೂ ಇವುಗಳಾಚೆಯ ವಿವಿಧ ರಾಜ್ಯಗಳನ್ನು ಚಕ್ರವರ್ತಿತ್ವದ ಅಧಿಕಾರದಿಂದಲೂ ಆಳತೊಡಗಿದನೆಂದೂ ಹೇಳಬಹುದು. ಪಲ್ಲವರ ಅಧಿಕಾರ ಶ್ರೀ ಪರ್ವತದಿಂದ ಕಾಂಚಿಯವರೆಗಿನ ಪ್ರದೇಶಕ್ಕೆ ಪರಿಸೀಮಿತವಾಯಿತು. ತ್ರೈಕೂಟದಲ್ಲಿ (=ಅಪರಾಂತ, ಕೊಂಕಣ) ಆಳುತ್ತಿದ್ದ ಆಭೀರರೂ ಅದರ ಉತ್ತರದಲ್ಲಿ ಆಳುತ್ತಿದ್ದ ಪಾರಿಯಾತ್ರಿಕರೂ ಶಕರೂ, ಇತ್ತ ಸೇಂದ್ರಕ-ಪುನ್ನಾಟ(=ಮೈಸೂರು) - ಬೃಹದ್ಬಾಣರೂ ಕದಂಬರ ಚಕ್ರವರ್ತಿತ್ವವನ್ನು ಒಪ್ಪಿ ಗೌರವಿಸಿದರೆಂದು ತಿಳಿಯಬಹುದಾಗಿದೆ. ಆದರಿಂದಲೇ ಉತ್ತರ ಭಾರತದ ಗಯೆಯವರೆಗೂ ಮಯೂರಶರ್ಮನ ಪ್ರಭಾವ ಹರಡಿತ್ತೆಂದು ಪ್ರತೀತಿ.

                ಅಶ್ವಮೃಧಯಾಗ ಮಾಡಿ ಕುಂತಳದಲ್ಲಿ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ ಮಯೂರಶರ್ಮ ಚಕ್ರವರ್ತಿಯು ಕ್ರಿ.ಶ.280ರಿಂದ 330 ರವರೆಗೆ ಆಳಿರಬಹುದು. ಅನಂತರ ಅವನ ಮಗ ಕಂಗವರ್ಮನು ಕ್ರಿ.ಶ.330 ರಿಂದ 370 ರವರೆಗೆ ರಾಜ್ಯಭಾರ ನಡೆಸಿರಬೇಕು. ಕಂಗವರ್ಮನು ಸುತ್ತಮುತ್ತಲಿನ ರಾಜರೊಡನೆ ಬಹಳಸಲ ಯುದ್ದ ಮಾಡುವ ಪ್ರಸಂಗಗಳುಂಟಾದವು. ಅವೆಲ್ಲವುಗಳಲ್ಲೂ ಅವನು ಕೊನೆಯದಾಗಿ ಗೆದ್ದು ಕುಂತಳ ಚಕ್ರೇಶ್ವರತ್ವವನ್ನು ಉಳಿಸಿಕೊಂಡನು. ಅವನಾದ ಮೇಲೆ ಅವನ ಮಗ ಭಗೀರಥವರ್ಮನು ಪಟ್ಟಕ್ಕೆ ಬಂದು ಸುಮಾರು ಕ್ರಿ.ಶ.370 ರಿಂದ 400 ರವರೆಗೆ ಕುಂತಳವನ್ನು ಆಳಿರಬೇಕು ತಂದೆಯ ಕಾಲದಲ್ಲಿ ಕಳೆದುಹೋಗಿದ್ದ ಕೆಲ ರಾಜ್ಯಭಾಗಗಳನ್ನು ಇವನು ಪುನಃ ಸಂಪಾದಿಸಿದನು. ಆದರಿಂದ ಈತನು ಸಾಹಸದಲ್ಲಿ ಸಗರ ಚಕ್ರವರ್ತಿಯ ವಂಶದ ಭಗೀರಥನಿಗೆ ಸಮಾನನೆಂದೆನಿಸಿಕೊಂಡನು ಈತನ ಮಗನಾದ ರಘುವರ್ಮನು ಕುಂತಳೇಶನಾಗಿ ಕ್ರ.ಶ. 400 ರಿಂದ 425 ರವರೆಗೆ ಸಮರ್ಥವಾಗಿ ಸಾಮ್ರಾಜ್ಯವನ್ನು ಪರಿಪಾಲಿಸಿದನು. ಉತ್ತರ ಭಾರತದಲ್ಲಿ 2ನೆಯ ಚಂದ್ರಗುಪ್ತ ಸಾಹಸಾಂಕ ವಿಕ್ರಮಾದಿತ್ಯನು ಆಗ (ಕ್ರಿ.ಶ. 375-414) ಆಳುತ್ತಿದ್ದನು). ಈ ಸಮಕಾಲೀನತೆಯ ದೆಸೆಯಿಂದ ಭೋಜನು ತನ್ನ ಶೃಂಗಾರ ಪ್ರಕಾಶದಲ್ಲಿ ಹೇಳಿದಂತೆ ಕಾಳಿದಾಸನೆಂಬ ರಾಯಭಾರಿಯನ್ನು 2ನೆಯ ಚಂದ್ರಗುಪ್ತ ಚಕ್ರವರ್ತಿ ಕಳಿಸಿಕೊಟ್ಟಿದ್ದು ರಘುವರ್ಮನ ಆಸ್ಥಾನಕ್ಕೇ ಆಗಿರಬೇಕಲ್ಲದೇ. ಬಿ.ಎಂ.ಮೊರೀಸ್ ಬರೆದಿರುವಂತೆ ಈತನ ತಂದೆಯಾದ ಭಗೀರಥವರ್ಮನ ಆಸ್ಥಾನಕ್ಕಲ್ಲ. 

          ಕಾಳೀದಾಸ ಮಹಾಕವುಯ ಕಾಳ ಕ್ರಿ.ಸ್ತಪೂರ್ವವೆಂದು ಭಾರತೀಯ ಸಂಶೋಧಕರೀಗೆ ದೃಢಪಡಿಸುತ್ತಿರುವುದನ್ನು ಇತ್ತೀಚೆಗೆ ಕೆಲ ಗಣ್ಯ ಭಾರತೀಯ ವಿದ್ವಾಂಸರು ನಾಟಕಕಾರ ಕಾಳಿದಾಸ ಹಾಗೂ ಕಾವ್ಯಕಾಎ ಕಾಳಿದಾಸನು ಕ್ಯಾನಕಾರನದ 2ನೆಯ ಕಾಲಿದಾಸನೆಂದು ಭಾವಿಸಬಹುದು. ನಾಟಕ- ಕಾವ್ಯಗಳ ಕಾಳಿದಾಸರಿಬ್ಬರಲ್ಲ ಒಬ್ಬನೇ ಎಂದಾದರೆ, ಈ ರಾಯಭಾರಿ ಕಾಳೀದಾಸನನ್ನು 2ನೆಯ ಸಾಮಾನ್ಯ ಕಾಳಿದಾಸನೆಂದು ಗುರುತಿಸಬೇಕಾಗುತ್ತದೆ. ಆಗ ಹೇಮಚಂದ್ರನದೆಂದು ಬಿ. ಎಂ. ಮೊರೀಸ್ ಹೇಳಿದ (ಆದರೆ ಕ್ಷೇಮೇಂದ್ರನು ಬರೆದುದೆಂದು ಪ್ರಸಿದ್ದವಾಗಿರುವ)ಔಚಿತ್ಯ ವಿಚಾರ ಚರ್ಚೆಯಲ್ಲಿ ಬಂದ “ಇಹನಿವಸತಿ ಮೇರುಃ. . . ಸ್ಥಾನಮಸ್ಮದ್ವಿಧಾನಾಂ” ಎಂಬ ವೃತ್ತವನ್ನು ಬರೆದವನು ಕಾವ್ಯಕಾಎ ಕಾಳಿದಾಸನೇ ಎನ್ನಬೇಕಾಗುತ್ತದೆ. ಕದಂಬ ರಾಜನ ಆಸ್ಥಾನದಲ್ಲಿ ರಾಯಭಾರಿ ಕಾಳಿದಾಸನಿಗೆ ತಕ್ಕ ಸ್ಥಾನಮಾನಗಳು ದೊರಕಲಿಲ್ಲವಂತೆ. ಕದಂಬರ ಶಕ್ತಿ-ವೈಭವಗಳು ಗುಪ್ತರ ಸ್ಥಾನಮಾನಗಳನ್ನು ಮನ್ನಿಸದೆ ಇರುವಷ್ಟು ಹೆಚ್ಚು ಅಥವಾ ಸಮಾನ ಆಗಿತ್ತೆಂದು ಮೇಲಿನ ಬೃತ್ತದ ಅನುಮಾನಿಕ ಅರ್ಥವೆಂದು ಭಾವಿಸಲಾಗಿದೆ. ಇದು ರಘುವಿನ ಕಾಲದ ಕದಂಬ ಕುಲದ ಖ್ಯಾತಿಯನ್ನು ಹೊರಗೆಡಹುತ್ತದೆ,