Uluvi Bird Sanctuary

                               ಶೃಂಗೇರಿಯಿಂದ ಕೊಪ್ಪ ಮಾರ್ಗ ಮಧ್ಯದಲ್ಲಿ 3 ಕಿ.ಮೀ ದೂರದಲ್ಲಿ ಸರಕಾರಿ ರಸ್ತೆಯಿಂದ ಕೇವಲ ಒಂದು ಫರ್ಲಾಂಗ್ ದೂರದಲ್ಲಿ ಈ ಸುಂದರ ಪಕ್ಷಿಧಾಮ ಕಾಣಸಿಗುತ್ತದೆ. ದಟ್ಟ ಹಸಿರು ಕಾನನದ ನಡುವೆ ನಿತ್ಯ ನೂತನವಾಗಿ ಕಾಣುವ ಈ ಪಕ್ಷಿಧಾಮವು ವರ್ಷದ ಎಲ್ಲಾ  ದಿನಗಳಲ್ಲೂ ಕಾಣಬಹುದಾಗಿದೆ. ಮಳೆಗಾಲದ ದಿನಗಳಲ್ಲಿ ವಲಸೆ ಪಕ್ಷಿಗಳು ಮರಿಮಾಡುವ ಇಲ್ಲಿ ಉಳಿವ ದಿನಗಳಲ್ಲಿ ಸೂರ್ಯಾಸ್ತ ಸಮಯಕ್ಕೆ ಸರಿಯಾಗಿ ಬಂದು ಗೂಡು ಸೇರುವ ಪಕ್ಷಿಗಳು ವೀಕ್ಷಕರ ಮನಸ್ಸಿಗೆ ಆನಂದ ಉಂಟು ಮಾಡುತ್ತದೆ.