Aghanashini

ಅಘನಾಶಿನಿ :

                    ತತ್ರೂಪ (ಶಿವ) ಆತ್ಮಲಿಂಗ ದರ್ಶನ ಮಾಡಿದಾಗ ಪಾಪ-ಪುಣ್ಯಗಳೆರಡೂ ನಾಶವಾಗುವವು. ಅದೇ ಅಘನಾಶೀನಿ ತತ್ವ. ಆಗಲೇ ಕಾಮೇಶ್ವರನ ಅಂದರೆ ಸರ್ವ ಕಾಮನಾ ಪೂರ್ಣ ಮಾಡಿ ನಂತರ ಆ ನಮ್ಮ ಕಾಮ ಸಂಕಲ್ಪಗಳೆಲ್ಲವನ್ನು ನುಂಗಿ ನೀರು ಕುಡಿದು, ನಿಸ್ಸಂಕಲ್ಪ ನಿಸ್ತರಂಗ ನಿರಾಮಯನನ್ನಾಗಿ ಮಾಡುವ ಕಾಮೇಶ್ವರನೂ ಇಲ್ಲಿ ಇಲ್ಲಾನೆ. ಈ ಕ್ಷೇತ್ರಕ್ಕೆ ಹಿಂದಿನ ಕಾಲದಲ್ಲಿ ಸಮುದ್ರ ಮಾರ್ಗವಾಗಿ ಅಘನಾಶಿನಿ ಮುಖವಾಗಿ ಪ್ರವೇಶಿಸುತ್ತಿದ್ದರು. ಈ ಕಾರಣದಿಂದ ಅಘನಾಶಿನಿಗೆ ಅಗಸೆ ಎಂತಲೂ ಹೆಸರು ಬಂದಿದೆ ಎನ್ನುತ್ತಾರೆ.