Dhareshwara

ದಾರೇಶ್ವರ ಈಶ್ವರ ದೇವಸ್ಥಾನ :

                    ಕುಮುಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 17ಕ್ಕೆ ಹೊಂದಿಕೊಂಡು, ಕುಮುಟಾದಿಂದ 6ಕಿ.ಮೀ. ದೂರದಲ್ಲಿ ಈ ಕ್ಷೇತ್ರವಿದೆ. ಶಿವನ ಆತ್ಮ ಲಿಂಗಗಳ ಕ್ಷೇತ್ರದಲ್ಲಿ ಇದು ಕೂಡಾ ಒಂದಾಗಿದೆ. ಕ್ರಿ.ಶ 9ನೇ ಶತಮಾನದಲ್ಲಿ ಶಿಲ್ಪಿ ಜಕಣಾಚಾರಿಯಿಂದ ನಿರ್ಮಿಸಲ್ಪಟ್ಟಿದೆ. ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಖ ಶಿಲ್ಪ ರಚನೆಯ ಮಿಶ್ರಣವನ್ನು ಇಲ್ಲಿ ನೋಡಬಹುದು. ಕಆಲಭೈರವ ದೇವಾಲಯದ ಗರ್ಭಗುಡಿಯ ಬಲಬದಿಯ ಪಾಶ್ರ್ವದಲ್ಲಿರುವ ಆದಿ ಧಾರೇಶ್ವರ ಗುಡಿ., ಕಲ್ಯಾಣ ಚಾಲುಕ್ಯರ ಕಾಲದ್ದೆಂದು ಶಾಸನ ಹೇಳುತ್ತದೆ. ಗರ್ಭಗುಡಿಯ ಒಳಗಿನ ಭಾಗದಲ್ಲಿ ನೃತ್ಯ ಭಂಗಿಯ ಕೆತ್ತನೆ, ನಾಟ್ಯರಂಗ, ಸಭಾಮಂಟಪ ಮತ್ತು ನಂದಿವಿಗ್ರಹಗಳು ಇವೆ.. ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲ್ಪಟ್ಟ ದೇವಾಲಯದ ಗರ್ಭಗುಡಿಯ ಹೊರ ಪಾಶ್ರ್ವ ನಕ್ಷತ್ರಾಕಾರದಲ್ಲಿದೆ. ಶಿಖರ ಉಂಗುರಾಕೃತಿಯಲ್ಲಿ ಇದೆ. ಆವರಣದಲ್ಲಿ ವೀರಗಲ್ಲುಗಳು, ಆಯುಧಗಳನ್ನು ಹಿಡಿದ ಯೋಧರು, ಕುದುರೆ ಸವಾರರು ಮುಂತಾದ ದೃಶ್ಯಗಳಿವೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರದ ತೀರದಲ್ಲಿ ಧಾರೇಶ್ವರ ಕಡಲತೀರ ಇದೆ. ಭಕ್ತರ ಶ್ರದ್ಧಾ ಕೇಂದ್ರವೂ ಇದಾಗಿದೆ.