Mass Marriage

ಸಾಮೂಹಿಕ ವಿವಾಹ:

                ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀ ವರ್ಷ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನೂರಾರು ಜೋಡಿ ಹಸೆಮಣೆಗೆ ಏರಿ ದಂಪತಿಯಾಗುತ್ತಾರೆ. ಬಡತನದ ಬೇಗೆಯಲ್ಲಿ ಬೇಯುವ ಕುಟುಂಬಗಳಿಗೆ ವಿನೂತನ ವರದಾನವಾಗಿ ಮೂಡಿ ಬಂದ ಇಂತಹ ಕಲ್ಪನೆ ಇಂದು ಎಲ್ಲೆಡೆ ಅನುಸರಣೆಯಾಗಲು ಧರ್ಮಸ್ಥಳ ತಳಗಟ್ಟು ನಿರ್ಮಿಸಿದೆ.

               ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದಂತೆ ಆದರೆ ಈ ಸ್ವರ್ಗದಲ್ಲಿ ಮದುವೆಗಳೇ ನಡೆಯುತ್ತದೆ. ಹೌದು ಧರ್ಮಸ್ಥಳದ ಸಾಮೂಹಿಕ ಮದುವೆಗಳು ಒಂದರ್ಥದಲ್ಲಿ ಶಿವಸನ್ನಿಧಿಯಿರುವ ಭೂಕೈಲಾಸದಲ್ಲಿ ನಡೆದಂತೆ. ಯಾವಾಗ ‘ಧರ್ಮ ಅರ್ಥ ಕಾಮ ಮೋಕ್ಷದಲ್ಲಿ ನಿನ್ನನ್ನು ಮೀರಿ ನಡೆಯುವುದಿಲ್ಲ’ ಎಂದು ಪ್ರಮಾಣವಚನ ಸ್ವೀಕರಿಸಿ ನಡೆಯುವ ಮದುವೆಗಳು ‘ಕೊಡು ಕೊಳ್ಳುವ’ ವ್ಯವಹಾರವಾಗಿ ಪರಿವರ್ತನೆಯಾಯಿತೋ ಆಗಲೇ ಸಾಮೂಹಿಕ ವಿವಾಹದ ಕಲ್ಪನೆಗಳು ಚಿಗುರತೊಡಗಿದವು. ಧರ್ಮಸ್ಥಳದಲ್ಲಿ ಕಳೆದ 45 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಯುತ್ತಿದೆ. ಇದುವರೆಗೆ 11,927ಕ್ಕೂ ಅಧಿಕ ಜೋಡಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯ ಆಶೀರ್ವಾದದಿಂದ ಹೊಸ ಬಾಳಿಗೆ ಜತೆಯಾಗಿದ್ದಾರೆ.

             ಧರ್ಮಾಧಿಕಾರಿಗಳು ತಮ್ಮ ಬಳಿ ಬರುವ ನಾನಾ ಜನರ ವಿಧ ವಿಧ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಿದಾಗ ಹೊಳೆದ ಉತ್ತರವೇ ಒಂದೊಂದು ಕಾರ್ಯಕ್ರಮಗಳ ಉಗಮಕ್ಕೆ ನಾಂದಿಯಾಗಿದೆ. ಮಗಳಿಗೆ ಮದುವೆ ಮಾಡಿಸಲು ಸಾಲ ಕೇಳಲು ಬರುವ ಜನ, ವರದಕ್ಷಿಣೆ ನೋವು, ಅದಕ್ಕಾಗಿ ಉಂಟಾಗುವ ಸಾವು, ಅತಿ ವೆಚ್ಚದಿಂದ ಮುಂದಿನ ಬಾಳಿನಲ್ಲಿ ಗೋಳು ಇದನ್ನು ಕಂಡಾಗ ನಾವೇ ಯಾಕೆ ಸರಳ ಸಾಮೂಹಿಕ ವಿವಾಹಗಳನ್ನು ಸಂಪ್ರದಾಯಗಳಿಗೆ ಕುಂದು ಬರದಂತೆ ನೆರವೇರಿಸಬಾರದು ಎಂಬ ಗಾಢ ಚಿಂತನೆಯ ಪ್ರತಿಫಲವೇ ಉಚಿತ ಸಾಮೂಹಿಕ ವಿವಾಹ.

           ವರದಕ್ಷಿಣೆ ಪಿಡುಗಿಗೆ ಸವಾಲಾಗಿ ಇಂತಹ ಸಾಮೂಹಿಕ ವಿವಾಹ ಕಲ್ಪನೆ ಆರಂಭಗೊಂಡು ಇಂದಿಗೆ ಹಳ್ಳಿ ಹಳ್ಳಿಯಲ್ಲಿ ಅನುಸರಿಸುವಷ್ಟು ಪರಿಣಾಮಕಾರಿಯಾಗಿದೆ. ಇದರಲ್ಲಿ ಧರ್ಮಸ್ಥಳದ ಪ್ರೇರಣೆ, ಪ್ರಭಾವ ಅಲ್ಲಗಳೆಯುವಂತಿಲ್ಲ. 

ಬಾಳೊಂದು ಭಾವಗೀತೆ :

ಕನಸು ಕಂಗಳ ಕೋಮಲ ಮನಸಿನ ಹೆಗ್ಗಡೆಯವರಿಗೆ ಯುವ ಹುರುಪು. ಸಮಾಜದ ಒಳಿತಿಗಾಗಿ ಅದಮ್ಯವಾದುದನ್ನು ಮಾಡಬೇಕೆಂಬ ಉತ್ಸಾಹ. ಚಾವಡಿಯಲ್ಲಿ ಇದ್ದಾಗ ಅನೇಕ ಮಂದಿ ಸಹಾಯ ಅಪೇಕ್ಷಿಸಿ ಬರುತ್ತಾರೆ. ಕ್ಷೇತ್ರದಲ್ಲಿ ಸಹಯ ಮಾಡಲಾಗುತ್ತದೆ, ಹೊರತು ಸಾಲ ಕೊಡುವುದಿಲ್ಲ. ಹಾಗಂತ ಹಸಿದು ಬಂದವರನ್ನು, ದೇಹಿ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸುವ ಸಂಪ್ರದಾಯ ಇಂದಿಗೂ ಇಲ್ಲ. ನಡು ರಾತ್ರಿ ಶಾಲಾ ಮಕ್ಕಳು, ಪ್ರವಾಸಿಗರು ಹಸಿದು ಬಂದರೂ ಅಡುಗೆ ಮಾಡಿಸಿ ಬಡಿಸಿ ಉಣಿಸಿದ ಉದಾಹರಣೆಗಳಿವೆ. ಪೀಠದಲ್ಲಿ ಕುಳಿತಾಗ ಕಷ್ಟಗಳನ್ನು ಹೇಳಿಕೊಂಡು ಮದುವೆಗೆ ಸಹಾಯ ಕೇಳುವವರ ಕಣ್ಣೀರ ಕಥೆಗಳನ್ನ ಕೇಳಿದಾಗ ಹೆಗ್ಗಡೆಯವರ ಮನತುಂಬಿ ಬಂದ ಪರಿಣಾಮವೇ ಈ ವಿವಾಹೋತ್ಸವದ ಸೃಷ್ಟಿಗೆ ಮೂಲ.

ಸರಳ ವಿವಾಹ :

ದುಬಾರಿ ಮದುವೆಗೆ ಕಡಿವಾಣ ಹಾಕಲು, ಧಾರ್ಮಿಕ ಕಾರ್ಯಗಳಿಗೆ ಚ್ಯುತಿಯಾಗದಂತೆ, ಸಾಂಸ್ಕøತಿಕ ಪಾವಿತ್ಯ್ರಕ್ಕೆ ಧಕ್ಕೆ ಆಗದಂತೆ ಡಾ| ಹೆಗ್ಗಡೆಯವರು 1972ರಲ್ಲಿ ಆರಂಭಿಸಿದ ಸಾಮೂಹಿಕ ವಿವಾಹ ಇಂದು ಎಲ್ಲೆಡೆ ಮಾದರಿ, ಆದರ್ಶ, ಅನುಸರಣ ಯೋಗ್ಯ. ಡಾ| ಹೆಗ್ಗಡೆಯವರೇ ಹೇಳುವಂತೆ, ಮಾನಸಿಕವಾಗಿ ಪರಿಶುದ್ದವಾಗಿ ಹಿರಿಯರ ಶುಭ ಹಾರೈಕೆ ಮೇರೆಗೆ ಎಲ್ಲರಿಗೂ ಒಪ್ಪುವಂತೆ ವಿವಾಹ ವಿಧಿ ನೆರವೇರಬೇಕು ಎನ್ನುವುದು ಆಶಯ. ದುಂದುಗಾರಿಕೆ ತೊಡೆಯುವಲ್ಲಿ ಸಾಕಷ್ಟು ಪ್ರಯತ್ನಿಸಲಾಗಿದೆ. ಕ್ಷೇತ್ರದಲ್ಲಿ ನಡೆಸಲ್ಪಡುವ ವಿವಾಹವಾದ ಕಾರಣ ದಂಪತಿಯಲ್ಲಿ ಪುನೀತ ಭಾವ ಧಾರ್ಮಿಕ ಜಾಗೃತಿ ಪಡಿಮೂಡುತ್ತದೆ. ಎಲ್ಲರೂ ಒಟ್ಟಾಗಿ ಯಾವುದೇ ಜಾತಿಯ ಭೇದವಿಲ್ಲದೇ ಮಾಂಗಲ್ಯ ಧಾರಣೆ ಮಾಡುವುದು ಪರಸ್ಪರ ಸಹಿಷ್ಣುತಾ ಭಾವ. ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಸತಿ ಪತಿಗಳೊಂದಾಗಿ ಬಾಳುವ, ಭವಿಷ್ಯತ್ತಿನ ಬಗ್ಗೆ ಸುಮಧುರ ಕಲ್ಪನೆಗಳನ್ನು ಸಾಕಾರಗೊಳಿಸುವ ದೃಢ ನಿರ್ಧಾರದೊಂದಿಗೆ ಗೃಹಸ್ಥಾಶ್ರಮ ಪ್ರವಶ ಮಾಡುವಾಗ ಭಗವಂತನ ವಿಶೇಷ ಅನುಗ್ರಹ ತಮ್ಮ ಪವಿತ್ರ ವಿವಾಹ ಬಂಧನಕ್ಕೆ ಒದಗಿ ಬರುತ್ತದೆ ಎಂಬ ಭಕ್ತಿ ವಿಶ್ವಾಸಗಳಿಂದ ಜನರು ಪುನೀತರಾಗುತ್ತಾರೆ. ಇಂತಹ ಭಾವನಾತ್ಮಕ ಸ್ಥಿತ್ಯಂತರವೇ ಇಲ್ಲಿನ ಹಿರಿಮೆಯಾಗಿದೆ ಎನ್ನುತ್ತಾರೆ ಡಾ| ಹೆಗ್ಗಡೆಯವರು. ಆರ್ಥಿಕ ಸಂಕಷ್ಟ, ಅನಕ್ಷರತೆ, ಬೇರೆ ಬೇರೆ ರೀತಿಯ ಸಾಮಾಜಿಕ ಸಮಸ್ಯೆಗಳಿಂದಾಗಿ ಸಾಮಾನ್ಯ ಜನರಿಗೆ ವಿವಾಹದ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ನೆರವೇರಿಸುವುದು ಕಷ್ಟವಾಗಿರುವಾಗ ವಿವಾಹದ ಜತೆ ಅಂಟಿಕೊಂಡಿರುವ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ದೀನರು, ದಲಿತರು, ಹಿಂದುಳಿದ ವರ್ಗಗಳು, ಆರ್ಥಿಕ ಅಸಮಾನರನ್ನು ಚಿಂತೆಯಿಂದ ಪಾರು ಮಾಡಲು ಅಭಯ ಹಸ್ತವಾಗಿರುವ ಈ ಸಾಮೂಹಿಕ ವಿವಾಹ ನಿಶ್ಚಿಂತೆಯ ದಾಂಪತ್ಯದ ಸುಂದರ ಭಾವಗೀತೆಯಾಗಿದೆ. 

²æà PÉëÃvÀæ zsÀªÀÄð¸ÀܼÀzÀ°è £ÀqÉzÀ ¸ÁªÀÄÆ»PÀ «ªÁºÀzÀ «ªÀgÀ.

List of Mass Marriage during 1972 to 2016.

 

«ªÁºÀzÀ ¢£ÁAPÀ

Marriage Date

MlÄÖ «ªÁºÀzÀ ¸ÀASÉå

Number of Marriages

29-03-1972

88

05-05-1973

291

13-03-1974

231

29-04-1975

484

07-04-1976

426

28-04-1977

482

27-04-1978

440

03-05-1979

385

08-05-1980

379

19-05-1981

420

05-05-1982

322

04-05-1983

338

03-05-1984

336

10-05-1985

424

03-05-1986

257

07-05-1987

302

08-04-1988

210

29-04-1989

361

27-05-1990

320

17-05-1991

414

26-04-1992

410

05-05-1993

375

29-04-1994

295

10-05-1995

285

02-05-1996

338

02-05-1997

212

02-05-1998

169

28-04-1999

245

28-04-2000

186

28-04-2001

158

28-04-2002

143

25-04-2003

127

02-04-2004

102

28-04-2005

133

03-05-2006

125

04-05-2007

171

30-04-2008

207

06-05-2009

157

30-04-2010

238

27-04-2011

192

26-04-2012

157

02-05-2013

180

02-05-2014

142

30-04-2015

143

29-04-2016

127

MlÄÖ / Total

11,927