Hulithala Rock Temple

ಹುಲಿತಾಳದ ಹೆಬ್ಬಂಡೆ ದೇವಾಲಯ:

               ಮಡಿಕೇರಿ ತಾಲೂಕಿನ ಪಟ್ಟ ಗ್ರಾಮವಾದ ಹುಲಿತಾಳ ತುಂಬು ಚೆಲುವಿನ ನಾಡು. ಹುಲಿತಾಳದ ಬೆಟ್ಟದ ತುತ್ತತುದಿಯಲ್ಲಿರುವ ಹುಲಿತಾಳ ತುಂಬು ಚೆಲುವಿನ ನಾಡು. ಹುಲಿತಾಳದ ಬೆಟ್ಟದ ತುತ್ತತುದಿಯಲ್ಲಿರುವ ಅದ್ಬುತ ನಿಸರ್ಗ ನಿರ್ಮಿತ ದೇವಾಲಯ ಅಲ್ಲಿನ ಒಂದು ಪ್ರಶಾಂತ ತಾಣ. ಮೂರು ಬೃಹತ್ ಹೆಬ್ಬಂಡೆಗಳೇ ದೈವಸಾನ್ನಿಧ್ಯದ ತಾಣವಾಗಿ ಇಲ್ಲಿ ವಿಜೃಂಭಿಸಿದೆ. ಪ್ರಕೃತಿಯ ಹಚ್ಚ ಹಸಿರಿನ ಮಧ್ಯೆ ‘ಹುಲಿತಾಳ’ ಹುದುಗಿದ್ದು ಅಲ್ಲಿನ ಬೆಟ್ಟಗಳು ಬೃಹತ್ ಬಂಡೆಗಳು ದೇವಾಲಯವಾಗಿ ಸೌಂದರ್ಯ ಮೈತಾಳೆ ನಿಂತಿದೆ.

              ಬೆಟ್ಟಪ್ಪ ದೇವಸ್ಥಾನವೆಂದೇ ಸ್ಥಳಿಯರಿಂದ ಕರೆಯಲ್ಪಡುವ ಹುಲಿತಾಳದ ಈ ವಿಶಾಲ ಬಂಡೆಗಳ ನಡುವೆ ಶಿವ ಪಾರ್ವತಿಯರ ಮೂರ್ತಿಯಿದೆ. ಕೊಡಗನಾಳಿದ ರಾಜರ ಕಾಲದಿಂದಲೂ ಇಲ್ಲಿ ನಿತ್ಯವೂ ಪೂಜಿಸಲಾಗುತ್ತಿದೆ. ದೇವಸ್ಥಾನವೆಂದ ಮಾತ್ರಕ್ಕೆ ಇಲ್ಲಿ ಯಾವುದೇ ಗುಡಿಗೋಪುರ ಇಲ್ಲ. ಕಾಣಿಕೆಯ ಡಬ್ಬಗಳಿಲ್ಲ. ಕಾಡುವ ಅರ್ಚಕರಿಲ್ಲ. ವಿಶಾಲ ಹೆಬ್ಬಂಡೆಯೇ ನಿಸರ್ಗ ನಿರ್ಮಿತ ದೇವಾಲಯ. ಮುಂಭಾಗದಲ್ಲಿ ಜುಳುಜುಳು ಹರಿವ ಪುಟ್ಟ ತೊರೆ, ಅದನ್ನು ಕ್ರಮಿಸಿ ಹೆಜ್ಜೆ ಹಾಕಿದಾಗ ಸಿಗುವುದೊಂದು ಹಾಸುಗಲ್ಲು. ಕನಿಷ್ಟ ಇಪ್ಪತೈದು ಮಂದಿ ಈ ಹಾಸುಗಲ್ಲಿನ ಮೇಲೆ ಕುಳಿತು ನಿಸರ್ಗ ಸೌಂದರ್ಯ ಸವಿಯಬಹುದು. ಅಲ್ಲಿಯೇ ಇನ್ನೊಂದು ವಿಶಾಲ ಬಂಡೆಯ ಹಾಸು ಕಾಣಸಿಗುತ್ತದೆ. ನೆಲದಿಂದ ಭಾನಿಗೆ ನೆಗೆಯಲೆತ್ನಿಸುವಂತೆ ತೋರುವ ಈ ವಿಶಾಲ ಬಂಡೆಯ ಹಾಸು ನಿಸರ್ಗದ ಒಂದು ವಿಸ್ಮಯ ನೋಡುವಾಗಲೇ ನಿಮ್ಮನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ. ಒಳಗಡೆ ಹೋಗಲು ತಕ್ಕಷ್ಟು ಸ್ಥಳಾವಕಾಶ ಉಂಟು. ಗುಡಿಯೊಳಗೆ ಹೋಗುವವರು. ಕುತೂಹಲದಿಂದಲೇ ನುಸುಳಿಕೊಂಡು ಹೋಗಬೇಕು.

               ಎದುರು ಚೌಕಾಕಾರದ ಗರ್ಭಗುಡಿ. ತಣ್ಣನೆ ಬೀಸುವ ಗಾಳಿ. ಬಂಡೆಗಳ ಸೆರೆಯಿಂದ ಇಣುಕುವ ಬೆಳಕು. ನಿತ್ಯದ ಅಭಿಷೇಕಕ್ಕೆ ಜುಳುಜುಳು ನಿನಾದದಿಂದ ಹರಿದುಬರುವ ನೀರು, ದಟ್ಟನೆಯ ಕಾನನದಲ್ಲಿ ವಿಶಾಲ ಬಂಡೆಗಳ ನಡುವೆ ನಿಸರ್ಗ ನಿರ್ಮಿತ ಗುಡಿಯನ್ನು ನೋಡಿದಾಗ ನಿತ್ಯ ಬದುಕಿನ ಸಿಹಿಕಹಿಗಳಲ್ಲಿ ನಿಮ್ಮಿಯ ದುರವಾಗಿ ಧನ್ಯತಾಭಾವ ಆವರಿಸಿಕೊಳ್ಳುವುದು. ಪಕ್ಕನೆ ಹೋದ ನೋಟಕ್ಕೆ ದೇಗುಲದ ಕಲ್ಲು ಹಾಸಿನ ನೈಜ ವಿಶಾಲತೆಯ ಅರಿವಾಗದು. ಒಳಹೊಕ್ಕು ತಲೆ ಎತ್ತಿ ನೋಡಿದರೆ ನಿಮ್ಮ ಕಲ್ಪನೆಯನ್ನೂ ಮೀರಿ ತನ್ನ ದೈತ್ಯರೂಪದ ದರ್ಶನವೀಯುವುದು ನೋಡಿ ನಿಬ್ಬೆರಗಾಗುತ್ತೀರಿ! 

               ಇತ್ತ ಹೊರಭಾಗದಲ್ಲಿ ನಿಂತರೆ ಪ್ರಕೃತಿ ಮಾತೆಯ ಆಹ್ಲಾದಕರ ವಾತಾವರಣ ಮುದ ನೀಡುವುದು. ಅಲ್ಲೇ ಬೃಹತ್ ಬಂಡೆಯೊಂದರ ತಳ ಭಾಗ ಹುಲಿಯ ವಾಸಸ್ಥಾನ ಹಿಂದೆ ನಿಯವೂ ಹುಲಿಯೊಂದು ಅಗಮಿಸಿ ದೇಗುಲದೆದುರು ತಲೆಬಾಗಿನಮಿಸಿ ಈ ವಾಸಸ್ಥಾನದಲ್ಲಿ ವಿಶ್ರ್ರಾಂತಿ ನಡೆಯುತ್ತಿತ್ತಂತೆ.ಹುಲಿಯ ತಾಣವಾದ ಈ ಸ್ಥಳ ಮುಂದೆ ಕ್ರಮೇಣ ಹುಲಿತಾಳವಾಗಿ ಮಾರ್ಪಟ್ಟಿರಬಹುದು. ಹುಲಿತಾಳ ಒಂದು ಸುಗ್ರಾಮ ಇಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ಧಾರಾಳ ಪ್ರಕೃತಿ ಸೌಂದರ್ಯ.ವಾಹನ ಸÀಂಪರ್ಕವೇ ಇಲ್ಲದ ಈ ಊರಿನಲ್ಲಿ ಬಹಳ ಹಿಂದಿನಿಂದಲೇ ವಾಸವಾಗಿದ್ದುಕೊಂಡು ವಿಶಾಲ ಹೆಬ್ಬಂಡೆಗಳ ನಡುವೆ ಅರ್ಚನೆ ಸಲ್ಲಿಸುತ್ತಿರುವ ಹುಲಿತಾಳ ರಂಗನಾಥ ಮತ್ತು ಗೋವಿಂದಯ್ಯನವರದು ರೋಚಕ ಬದುಕು. ಇಲ್ಲಿ1 ವರ್ಷದ ಆರು ತಿಂಗಳು ಮಳೆ ಜೆರ್ರೆಂದು ಸುರಿಯುತ್ತಲೇ ಇರುತ್ತದೆ. ಆಗೆಲ್ಲ ಉದಾಸೀನ ಭಾವ ತಾಳದೆ ಬೆಟ್ಟವೇರಿ ನಿತ್ಯ ಅರ್ಚನೆಸಲ್ಲಿಸಿದ ಹೆಮ್ಮೆ ಅವರದು.ಹುಲಿತಾಳ ರಂಗನಾಥ ಮತ್ತು ಸಹೋದರರು ವರ್ಷದ ಎಂಟು ತಿಂಗಳು ಹನ್ನೆರಡು ದಿನ ಆರ್ಚನೆ ಸಲ್ಲಿಸಿದ ಹೆಮ್ಮೆ ಅವರದು.ಹುಲಿತಾಳ ರಂಗನಾಥ ಮತ್ತು ಸಹೋದರರು ವರ್ಷದ ಎಂಟು ತಿಂಗಳು ಹನ್ನೆರಡು ದಿನ ಅರ್ಚನೆ ಮಾಡಿದರೆ ಉಳಿದ ದಿನ ಹುಲಿತಾಳ ಗೋವಿಂದಯ್ಯನವರು ಮಾಡುತ್ತಾರೆ.

                 ಹುಲಿತಾಳದ ಈ ನಯನ ಮನೋಹರವಾದ ತಾಣವನ್ನು ವೀಕ್ಷಿಸಬೇಕಾದರೆ ನಾವು ಮಡಿಕೇರಿ-ವೀರಾಜಪೇಟೆಯ ನಡುವೆ ಇರುವ ಕಗ್ಗೋಡ್ಲಿನ(ಮಡಿಕೇರಿಯಿಂದ ಸುಮಾರು ಎಂಟು ಕಿ.ಮೀ ಕೊನೆಯ ತಂಗುದಾಣದಲ್ಲಿಳಿದು ಎಡಭಾಗದ ಕವಲುದಾರಿಲ್ಲಿ ಸಾಗಬೇಕು. ಸುಮಾರು ಮೂರು ಕಿ.ಮೀ.ಗಳಷ್ಟು ದೂರ ಮಣ್ಣಿನ ದಾರಿಯಲ್ಲಿ ಸಾಗುವಾಗ ಇಕ್ಕೆಲಗಳಲ್ಲೂ ಕಾಫಿಯ ತೋಟಗಳು ಮನತಣಿಸುತ್ತವೆ. ದೂರದ ಬೆಟ್ಟಗಳ ರಮಣಿಯತೆ ಆಯಾಸವನ್ನು ಪರಿಹರಿಸಲು ನೆರವಾಗುತ್ತವೆ.

               ಅರ್ಚಕರ ಮನೆಯಿಂದ ಬೆಟ್ಟಕ್ಕೇರುವ ಕಾಡುದಾರಿಯಂತೂ ಸಾಹಸಪ್ರಿಯರಿಗೆ ಸಂತಸವನ್ನಿsಸುವ ದಾರಿ. ಗಾಢ ಮೌನದಲ್ಲಿ ಎತ್ತರೆತ್ತರಕ್ಕೆÀ ಏರುವಾಗ ಎಚ್ಚರವಾಗಿರಬೇಕು. ಅಭ್ಯಾಸವಿಲ್ಲದವರು ಕೊಂಚ, ಎಚ್ಚರ ತಪ್ಪಿದರೂ ಕೆಳಗಡೆ ಬಿದ್ದರು,  ಸರಸರ ಸದ್ದಿನೊಡನೆ ಸರಿದು ಹೋಗುವ ಉರಗದರ್ಶನದಿಂದ ಬೆಚ್ಚಿ ಬೀಳುತ್ತಿದ್ದರು.

               ಹುಲಿತಾಳದ ವೀಕ್ಷಣೆಗೆ ಬೇಸಿಗೆಯೇ ಅರ್ಹಕಾಲ. ಮಳೆಗಾಲದಲ್ಲಿ ಬೆಟ್ಟವನ್ನೇರುವುದು ಸಾಹಸದ ಮಾತೇ ಸರಿ. ಮಳೆಗಾಲದ ಪ್ರಾರಂಭದಲ್ಲಂತೂ ಭಕ್ಷ ಹೀರುವ ಜಿಗಣಿಗಳ ಉಪಟಳ ಹೇಳತೀರದು. ನಿಮ್ಮ ರಕ್ತದ ರಾಜ ನೋಡಲೇನೂ ಎಂಬಂತೆ ಸಾಲುಸಾಲಾಗಿ ಕಾದು ನಿಂತಿರುತ್ತವೆ.!

                ಹುಲಿತಾಳದ ಇತಿಹಾಸವೂ ತಾಣದಷ್ಟೇ ರಮ್ಯ, ರೋಚಕ. ಮೂರು ಶತಮಾನಗಳ ಹಿಂದೆ ಕೊಡಗು ರಾಜ್ಯವನ್ನಾಳುತ್ತಿದ್ದ ದೊರೆ ಲಿಂಗರಾಜಬೇಟೆಂiÀiನ್ನಾಡುತ್ತಾ ಹೊರಟಿದ್ದ. ಕಾಡಿನಲ್ಲೆಲ್ಲಾ ಸಂಚರಿಸಿ ಇಲ್ಲಿನ ವಿಶಾಲ ಹೆಬ್ಬಂಡೆಯ ಬಳಿ ಬಂದು ಅರೆಕ್ಷಣ ನಿಂತ. ದಟ್ಟಕಾಡು, ನೀರವ ನಿಶಬ್ದತೆ ಬೃಹದಾಕಾರದ ಬಂಡೆ ಹಾಸು. ಮಂಜುಳ ನಿನಾದದಿಂದ ಸಾಗುವ ತೊರೆ. ನೋಡುತ್ತಾ ನಿಬ್ಬೆರಗಾದ ಲಿಂಗರಾಜ. ಕುತೂಹಲದಿಂದ ಸ್ಥಳ ವೀಕ್ಷಣೆ ಮಾಡುತ್ತಿದ್ದಾಗ ಹುಲಿಯೊಂದು ಗರ್ಜಿಸುತ್ತಾ ಅತ್ತಲೇ ಬಂತು. ನೀರವತೆಯ ಗರ್ಭವನ್ನು ಸೀಳುತ್ತಾ ಬಂದು ದೇಗುಲದೆದುರು ಮಂಡಿಯೂರಿ ನಮಿಸಿತು. ಲಿಂಗರಾಜನಿಗೆ ಅಚ್ಚರಿಯ ಮೇಲೆ ಅಚ್ಚರಿ. ಶಾಂತಿಯ ಬೀಡು ಪಾವನ ಪರಿಸರ ವಿಶೇಷ ಮಹತ್ವದ ಸ್ಥಳ. ಮಾರುಹೋದ ಲಿಂಗರಾಜ. ಮಡಿಕೇರಿಯ ಅರಮನೆ ತಲುಪಿದೊಡನೆ ಈ ಅದ್ಬುತ ನಿಸರ್ಗ ನಿರ್ಮಿತ ದೇವಾಲಯಕ್ಕೆ ಪೂಜೆಯ ಏರ್ಪಾಡು ಮಾಡಿದ. ಹೀಗೆನ್ನುತ್ತದೆ ಪ್ರಚಲಿತವಾಗಿರುವ ಕತೆ.

                 ಮಳೆಗಾಲದಲ್ಲಿ ಚಳಿಯಿರಲಿ, ಬೆಟ್ಟದ ಹಾದಿ ಜಾರುತಿರಲಿ ಜಿಗಣೆಗಳ ಉಪಟಳವಿರಲಿ ಇಂದಿಗೂ ಈ ನಿಸರ್ಗ ದೇಗುಲದಲ್ಲಿ ನಿತ್ಯಪೂಜೆ ಸಲ್ಲಿಸಲಾಗುತ್ತಿದೆ. ಮಹಾ ಶಿವರಾತ್ರಿಯಂದು ರುದ್ರಾಭಿಷೇಕ ಉಂಟು. ಆಗ ಒಂದಷ್ಟು ಜನಸ್ತೋಮ ನೆರೆಯುವುದನ್ನು ಬಿಟ್ಟರೆ ಉಳಿದ ಕಾಲದಲ್ಲಿ ಇದು ಗಾಢ ಮೌನ ತಾಣ. ಪ್ರಕೃತಿಯು ತನ್ನ ಚೆಲುವನ್ನು ಧಾರೆಯೆರೆದು ಪುರಸ್ಕರಿಸಿದ ರಮ್ಯತಾಣ. ಲೇಖಕರು: ಸಿ.ಎಸ್. ಸುರೇಶ್