Kakotuparambu Kalabairaveshwara Temple

ಕಾಕೋಟು ಪರಂಬುವಿನ ಕಾಲಭೈರವೇಶ್ವರ ದೇವಾಲಯ:

                      ಕೊಡಗಿನಲ್ಲಿ ಕಂಡುಬರುವ ಬಹುತೇಕ ಎಲ್ಲಾ ಜಾತ್ರೆಗಳು ಜರುಗುವುದು ಮಾರ್ಚ್À-ಏಪ್ರಿಲ್ ತಿಂಗಳುಗಳಲ್ಲಿ ಆದರೆ ಕಾಕೋಟುಪರಂಬು ಎಂಬಲ್ಲಿನ ಜಾತ್ರೆ ಮೂರು ತಿಂಗಳ ಮೊದಲೇ ಜರುಗುವುದು. ಅದರಂತೆ ಪ್ರತಿ ವರ್ಷದ ಡಿಸೆಂಬರ್‍ನಲ್ಲಿ ಕಾಕೋಟು ಪರಂಬುವಿನಲ್ಲಿ ವಿಶಿಷ್ಟ ಜಾತ್ರೆ ಜರುಗಲಿದೆ. ಕಾಕೋಟುಪರಂಬು ಮಡಿಕೇರಿ-ವೀರಾಜಪೇಟೆ ನಡುವೆ ಸಿಗುವ ಊರು. ಮಡಿಕೇರಿಯಿಂದ ಇಪ್ಪತೆರಡು ಕಿ.ಮೀ.ಗಳ ಅಂತರ ಮಡಿಕೇರಿಯಿಂದ ಮೂರ್ನಾಡು ಮುಖಾಂತರ ವಿರಾಜಪೇಟೆಯತ್ತ ಸಾಗುವಾಗ ಒಂದೆಡೆ ವಿಶಾಲ ಮೈದಾನವೊಂದು ಕಾಣಸಿಗುತ್ತದೆ. ಅಲ್ಲೇ ಸನಿಹದಲ್ಲಿದೆ ಕಾಕೋಟು ಪರಂಬು ಕಾಲಭೈರವೇಶ್ವರ ದೇವಸ್ಥಾನ ವೀಕ್ಷಣೆಗೆ ತೀರಾ ವೈಶಿಷ್ಟ್ಯ ಪೂರ್ಣವಾದುದು ಎಂದೆನಿಸದಿದ್ದರೂ ಸಾಕಷ್ಟು ಪುರಾಣ ಐತಿಹ್ಯಗಳನ್ನು ಹೊಂದಿದೆ. ಇಲ್ಲಿ ನಡೆಯುವ ಜಾತ್ರೆ ಸಹಸ್ರಾರು ಮಂದಿಯನ್ನು ಆಕರ್ಷಿಸಿರುವುದಲ್ಲದೇ, ರಾಜ್ಯದ ವಿವಿಧ ಭಾಗಗಳ ಆಸಕ್ತರು ಇಲ್ಲಿನ ಜಾತ್ರೆಯ ವೀಕ್ಷಣೆಗೆ ಬರುತ್ತಾರೆ.

                     ಪ್ರಸಕ್ತ ದೇವಾಲಯಕ್ಕೆ ಸಾಕಷ್ಟು ದೀರ್ಘ ಇತಿಹಾಸವಿದೆ. ಒಂದು ಮಾಹಿತಿಯನುಸಾರ ಸುಮಾರು ಮುನ್ನೂರು ವರ್ಷಗಳಿಂದ ಇಲ್ಲಿ ಪೂಜೆ ನಡೆಯುತ್ತಿರಬಹುದು ಎನ್ನುತ್ತಾರೆ. ಇಲ್ಲಿನ ಅರ್ಚಕರು, ಇಲ್ಲಿ ಪ್ರಮುಖವಾಗಿ ಕಂಡು ಬರುವುದು ಕಾಲಭ್ಯೆರವನಗುಡಿ. ಸನಿಹದಲ್ಲೇ ಮುಂದಕ್ಕೆ(ಅಕ್ಕಮ್ಮ) ಎಂಬ ದೇವಿಯ ನೆಲೆಯಿದೆ. ಅನತಿ ದೂರ ಸಾಗಿದರೆ ಬಹಳ ಹಳೆಯದೆನಿಸುವ ವಿಶಾಲವಾದ ಕೆರೆಯನ್ನು ಕಾಣಬಹುದು. ದೇವಾಲಯದ ಒಂದು ಪಾಶ್ರ್ವದಲ್ಲಿ ಕಂಡುಬರುವ ವಿಶಾಲವಾದ ತಾಣ ಶ್ರೀ ಕಾಲಭೈರವೇಶ್ವರ ಗುಡಿಯಲ್ಲಿ ಪೂಜೆ ನಿತ್ಯವಿತ್ತು ಎನ್ನಲಾಗಿದೆ. ಆದರೆ ಈಗ ವಾರಕ್ಕೆ ಎರಡು ದಿನ ಮಾತ್ರ ಪೂಜೆ. ಇದಕ್ಕೆ ಊರವರು ಸಹಕಾರವನ್ನು ಕೊಡುತ್ತಾರೆ. ಶ್ರೀಕಾಲಭೈರವ ಉಗ್ರದೇವರಾದುದರಿಂದ ಆತನಿಗೆ ವಾರದಲ್ಲಿ ಎರಡು ದಿನ ಮಾತ್ರ ಪೂಜೆ(ಆದಿತ್ಯವಾರ ಮತ್ತು ಮಂಗಳವಾರ) ಸದ್ಯಜಾತ್ರೆಯ ಸಂದರ್ಭದಲ್ಲಿ ಅಂದರೆ ವೃಶ್ಚಿಕದಿಂದ ಧನುಸಂಕ್ರಮಣದವರೆಗೆ ಇಲ್ಲಿ ನಿತ್ಯಪೂಜೆ ನಡೆಯುತ್ತದೆ. ಇಂತಹ ವಿಶಿಷ್ಟ ತಾಣದಲ್ಲಿ ಜಾತ್ರೆಯ ಆರಂಭ ಹೇಗಾಯಿತೋ? ಜನರಿಗೆ ಮನೋರಂಜನೆಯನ್ನು ಒದಗಿಸುವ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ಮನೋವಿಕಾಸಕ್ಕೆ ಎಡೆ ಮಾಡಿಕೊಡುವ ಜಾತ್ರೆಗಳು ಹಿಂದೆ ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯಯತೆಯನ್ನು ಹೊಂದಿದ್ದಿರಬೇಕು. ಹಿಂದೆ ಮನೋರಂಜನೆಯ ಮಾಧ್ಯಮಗಳು ಕಡಿಮೆಯಿದ್ದುದರಿಂದ, ಸಾಮಾನ್ಯವಾಗಿ ದೇವರ ಹೆಸರಿನಲ್ಲಿ ಜಾತ್ರೆಗಳನ್ನು ನಡೆಸಿ, ಭಕ್ತ ಭಾವದೊಂದಿಗೆ ಜನಸಾಮಾನ್ಯರಿಗೆ ಮನರಂಜನೆ ಒದಗಿಸುವ ಉದ್ದೇಶ ಹೊತ್ತು ಈ ಜಾತ್ರೆಗಳ ಉಗಮವಾಗಿದ್ದಿರಬೇಕು.

                    ಪ್ರತಿ ವರ್ಷ ವೃಶ್ಚಿಕ ಸಂಕ್ರಮಣಕ್ಕಿಂತ 14ದಿನ ಮುಂಚಿತವಾಗಿ ಹೀಲಿ ತೆಗೆಯುವ ಕಾರ್ಯಕ್ರಮ ನಡೆಯುತ್ತದೆ. ದೇವರ ಕಟ್ಟುಬಿದ್ದ ಆ ದಿನದಿಂದ ಹಬ್ಬ ಕಳೆಯುವವರೆಗೆ ಇಲ್ಲಿ ಮಧುಮಂಸಾದಿಗಳನ್ನು ಉಪಯೋಗಿಸುವಂತಿಲ್ಲ. 

ಜಾತ್ರೆ ಮೂರು ದಿನಗಳ ಕಾಲ ಜರುಗುತ್ತದೆ. ಮೊದಲ ದಿನ ರಾತ್ರಿ ಊರ ಮಂದಿವಾದ್ಯ ವಾಲಗ ಸಹಿತ ಪದ್ದತಿ ಪ್ರಕಾರ ದೇವರ ಭಂಡಾರ ತಂದಿಟ್ಟು ದೇವರ ಶೃಂಗಾರ ಮಾಡುತ್ತಾರೆ. ಆ ನಂತರ ಮುಂದಕ್ಕನ ಕುರಿತು ಸ್ತುತಿಸುವ ಪರಿಪಾಠವಿದೆ. ಬೆಳಕು ಹರಿಯುವ ಮೊದಲೇ ಎರಡನೆಯ ದಿನದ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ಹೆಮ್ಮಾಡು, ಪಾಂಡಿಮಾಡು, ಮುಗೂರು, ತೋಣೂರು ಹೀಗೆ ನಾಲ್ಕು ಕೇರಿಯ ಮಂದಿ ನಸುಕು ಹರಿಯುವ ಮೊದಲೇ ನಿಶ್ಚಿತ ತಾಣದಲ್ಲಿ ಬಂದು ಸೇರುತ್ತಾರೆ. ವಾದ್ಯಗೋಷ್ಠಿಯೊಂದಿಗೆ ಬೊಳ್ಕಾಟ್ ಮಂತ್ರಿಕರ ಸಾಂಪ್ರದಾಯಕ ಕಾರ್ಯಕ್ರಮಗಳು ವಿಧಿವತ್ತಾಗಿ ಜರುಗುತ್ತದೆ. ಸರಿ ಸುಮಾರು ಐದು ಗಂಟೆಯ ವೇಳೆಗೆ ದೇವರು ಹೊರಗೆ ಬರುತ್ತಾರೆ. ಸೂರ್ಯೋದಯಕ್ಕಿಂತ ಮೊದಲೇ ಉತ್ಸವ ಪೂರೈಸಿ ಊರವರು ಹಿಂದಿರುಗುತ್ತಾರೆ. ಎರಡನೆಯ ದಿನದ ಜಾತ್ರೆ ಆರಂಭವಾಗುವುದು ನಡು ಮಧ್ಯಾಹ್ನ. ಆ ವೇಳೆಗೆ ನಾಲ್ಕು ಕೇರಿಗಳಿಂದ ಕುದುರೆ, ಕೊಯಿಮೆ, ಜಾರಿ ಮುಂತಾದವು ಆಗಮಿಸುತ್ತವೆ. ಕೆದಮುಳ್ಳೂರು ಗ್ರಾಮದ ಬಣ್ಣರು ಇಲ್ಲಿ ತೆರೆ ಕಟ್ಟಲೆಂದು ಆಗಮಿಸುತ್ತಾರೆ. ಆವರು ಕಾಕೋಟುಪರಂಬುವಿನ ವಿಶಾಲ ಮೈದಾನದಲ್ಲಿರುವ ಅಶ್ವÀತ ಮರದ ಕಟ್ಟೆಗೆ ಬರುತ್ತಾರೆ. ಅಲ್ಲಿ ನಿರ್ಮಿಸಲಾದ ಕುಟ್ಟಿಚಾತ ಮತ್ತು ಮಂದಣಮೂರ್ತಿ ತೆರೆಗಳನ್ನು ವೀಕ್ಷಿಸಲು ಸಹಸ್ರಾರು ಮಂದಿಬಂದು ನೆರೆಯುತ್ತಾರೆ. ಮುಖ್ಯ ರಸ್ತೆಯ ಮೇಲ್‍ಭಾಗದಲ್ಲಿ ತೆರೆಕಟ್ಟಿ ಅಲ್ಲಿಂದ ಆಶ್ವತ ಮರದ ಕಡೆಗೆ ಬರುವರು. ಅಲ್ಲಿ ಆ ಮರಕ್ಕೆ 10-12ಸುತ್ತು ಬರುವುದನ್ನು ವೀಕ್ಷಿಸಬಹುದು. ಇದು ತುಂಬಾ ಆಕರ್ಷಿಣಿಯವಾಗಿರುತ್ತದೆ.

                  ಮೂರನೆಯ ದಿನದ ಕಾರ್ಯಕ್ರಮ ಆರಂಭವಾಗುವುದು ಮಧ್ಯಾಹ್ನದ ನಂತರ ಸೇರಿದ ಜನಸಮೂಹ ಕುಣಿತಪದಗಳಲ್ಲಿ ತೋಡಗುತ್ತಾರೆ. ಜಿಲ್ಲೆಯು ಬೆಟ್ಟ ಕಣಿವೆಗಳಿಂದ ಕೂಡಿದ್ದೂ, ಜನರು ದೂರ ದೂರದಲ್ಲಿ ಹೆಚ್ಚು ಕಾಲ ಬೇರೆಯವರ ಸಂಪರ್ಕ ಇಲ್ಲದೇ ಕಳೆಯುವುದರಿಂದ ಇಂತಹ ಜಾತ್ರೆಗಳು ಮನರಂಜನೆಯ ಜತೆಗೆ ಸಮಾಜ ಜೀವನಕ್ಕೆ ಅವಕಾಶ ಮಾಡಿಕೊಡುತ್ತಿದ್ದವು. ಅಂತೆಯೇ ದೇವರು ಜಳಕಕ್ಕೆ ಹೋಗುವ ಮುಂಚೆ ಈಡುಗಾಯಿ ಹಾಕಿ ಎಳೆದಾಡುವಂತಹ ಮನರಂಜನಾ ಕಾರ್ಯಕ್ರಮಗಳು ಜರುಗುತ್ತದೆ.

                 ಜಾತ್ರೆಯ ಸಂದರ್ಭದಲ್ಲಿ ಆಕರ್ಷಕ ತೆರೆಗಳನ್ನು ನಡೆಸಲಾಗುತ್ತದೆ. ಮೊದಲ ದಿನ ರಾತ್ರಿ ಕುಟ್ಟಿಚಾತ ಮತ್ತು ಮಂದಣಮೂರ್ತಿ ಎಂಬ ಎರಡು ತೆರೆಗಳನ್ನು ಕಟ್ಟಲಾಗುತ್ತದೆ. ಸಾಂಪ್ರದಾಯಕ ಹಿನ್ನಲೆಯ ತೆರೆಗಳು ನೆರೆದ ಭಕ್ತವೃಂದದಲ್ಲಿ ಭಕ್ತಿ ಭಾವಗಳ ಮಹಾಪೂರವನ್ನೇ ಹರಿಸುತ್ತವೆ. ಎರಡನೆಯ ದಿನ ಚಾಮುಂಡಿ ಹಾಗೂ ಕುಟ್ಟಿಚಾತ ಎಂಬ ಎರಡು ತೆರೆಗಳು ಮತ್ತೆ ವೀಕ್ಷಣೆಗೆ ಸಿಗುತ್ತವೆ. ವಿವಿಧ ಸಂಪ್ರದಾಯಕ ಕಾರ್ಯಕ್ರಮಗಳೊಂದಿಗೆ ಆರಂಭಗೊಳ್ಳುವ ಇಲ್ಲಿನ ಜಾತ್ರೆ ಹದಿನೆಂಟು ಸುತ್ತು ಹೀಲಿ ತೆಗೆಯುವುದರೊಂದಿಗೆ ಕೊನೆಗೊಳ್ಳುತ್ತದೆ. ಎಲ್ಲಾ ಚಟುವಟಿಕೆಗಳ ನಂತರ ಮಹಾಪೂಜೆ ನಡೆಯುತ್ತದೆ. ದೇವರ ಅನುಗ್ರಹಕ್ಕೆ ಪಾತ್ರವಾದ ಭಕ್ತವೃಂದ ಜಾತ್ರೆಯ ಸವಿನೆನಪನ್ನು ಹೊತ್ತು ಹಿಂದಿರುಗುತ್ತಾರೆ. ಮೇಲ್ನೊಟಕ್ಕೆ ವಿರಳ ಜನಸಂಖ್ಯೆಯ ಊರು ಇದೆಂದೆನಿಸಿದರೂ ಆಧಿಕ ಸಂಖ್ಯೆಯ ಭಕ್ತವೃಂದ ನಾಲ್ಕು ಕೇರಿಗಳಿಂದ ಬಂದು ನೆರೆಯುತ್ತಾರೆ. ಈ ಹಿಂದೆ ಜಾತ್ರೆ ವಿಶೇಷ ಆಕರ್ಷಣೆಯನ್ನು ಹೊಂದಿತ್ತು. ಜಾತ್ರೆ ಸಂತೆಯೂ ವಿಶೇಷವಾಗಿತ್ತು ಎಂದು ನೆನಪಿಸಿಕೊಳ್ಳುವ ಹಿರಿಯ ಮಂಡೇಟಿರ ಕುಂóಞಪ್ಪನವರು ಪ್ರತಿವರ್ಷ ಇಲ್ಲಿನ ಉತ್ಸವದಲ್ಲಿ ಪಾಲ್ಗೊಳ್ಳುವ ವ್ಯಕ್ತಿ.

                 ಕಾಕೋಟುಪರಂಬುವಿನ ವಾರ್ಷಿಕ ಜಾತ್ರೆ ಇತರೆಲ್ಲೆಡೆಗಿಂತ ಮೊದಲೇ ಅರಂಭಗೊಂಡು ಸಹಸ್ರಾರು ಮಂದಿಗೆ ಮನರಂಜನೆ ಒದಗಿಸುತ್ತದೆ. ಕೊಡಗಿನ ಜನಪದ ಸಂಸ್ಕøತಿಯ ಸಂಭ್ರಮ ಸವಿಯ ಬಯಸುವವರಿಗೆ ಈ ಜಾತ್ರೆಯ ತಾಣ ಮಹತ್ವದಾಗುತ್ತದೆ. ಜಾತ್ರೆಯ ಸಂಭ್ರಮವೆಲ್ಲಿದೆ ಎಂದು ಅರಸುತ್ತಾ ಹೋಗಬೇಕಾಗಿಲ್ಲ. ಮೂರ್ನಾಡು  ವೀರಾಜಪೇಟೆ ಮುಖ್ಯರಸ್ತೆಯ ಬದಿಯಲ್ಲಿಯೇ ಕಾಣಸಿಗುವ ವಿಶಾಲ ಮೈದಾನವೇ ಈ ಜಾತ್ರೆಯ ಕೇಂದ್ರತಾಣ. ಆಸಕ್ತರು ಡಿಸೆಂಬರ್ ತಿಂಗಳಲ್ಲಿ ಅಲ್ಲಿನ ಜಾತ್ರೆಯ ಸವಿಯುಣ್ಣಬಹದು ಲೇಖಕರು: ಸಿ.ಎಸ್. ಸುರೇಶ್