Nanjarayapatna Nanjundeshwara temple

                 ಸೋಮವಾರಪೇಟೆ ತಾಲೂಕಿನ ಕುಶಾಲನಗರದಿಂದ 17ಕಿ.ಮೀ ದೂರದಲ್ಲಿರುವ ಪುಟ್ಟ ಊರು ನಂಜರಾಯಪಟ್ಟಣ. ಈ ಊರನ್ನು ಪ್ರವೇಶಿಸುವುದಕ್ಕೆ ಮೊದಲು ಎಡಕ್ಕೆ ತಿರುಗಿ ದುಬಾರೆ ರಸ್ತೆಯಲ್ಲಿ (ಕಾವೇರಿ ಕವಲೊಡೆದು ದ್ವೀಪವಾಗಿರುವ ರಮ್ಯತಾಣ ದುಬಾರೆ) ಒಂದು ಕಿ.ಮೀ.ನಷ್ಟು ದೂರಸಾಗಿ ಬಲಕ್ಕೆ ದೃಷ್ಟಿ ಕರಿಸಿದರೆ ಅತಿ ಆಕರ್ಷಿಸುತ್ತದೆ. ಇದೇ ನಂಜುಂಡರಾಯನ ಕಾಲದಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಲಾದ ಶ್ರೀ ನಂಜುಂಡೇಶ್ವರ ದೇವಾಲಯ.

                    ಕಾವೇರಿ ನದಿ ದಡದ ಮೇಲಿರುವ ನಂಜರಾಯಪಟ್ಟಣ ಮೊದಲು ‘ಹೊಳೆಸಾಲಳ್ಳಿ’ ಎಂದು ಕರೆಯಲ್ಪಡುತ್ತಿತ್ತಂತೆ. ಹಿಂದೆ ಕೊಡಗಿನ ಈ ಭಗವನ್ನು ಚೆಂಗಾಳ್ಯ. ವಂಶದ ನಂಜುಂಡರಾಯನು ಆಳುತ್ತಿದ್ದ. ಆತ ಈ ಊರಿಗೆ ನಂಜರಾಯ ಪಟ್ಟಣವೆಂದು ಹೆಸರಿಸಿದೆ ಎಂದು ಇತಿಹಾಸ ಹೇಳುತ್ತದೆ. ಕೊಡಗಿನ ಮಡಿಕೇರಿ ಮೊದಲ ತಾಲೂಕು ಕೇಂದ್ರವಾಗಿದ್ದರೆ, ಆ ನಂತರದ ಸ್ಥಾನ ನಂಜರಾಯಪಟ್ಟಣಕ್ಕೆ ಸಲ್ಲುತ್ತದೆ. ಹದಿನಾರನೆಯ ಶತಮಾನದಲ್ಲಿ ಇಲ್ಲಿ ಅರಮನೆಯನ್ನು ನಿರ್ಮಿಸಿದ ನಂಜುಂಡರಾಜ ತನ್ನ ಆಳ್ವಿಕೆಯ ಪಟ್ಟಣಕ್ಕೆ ತನ್ನ ಹೆಸರನ್ನೇ ನಾಮಕರಣ ಮಾಡಿ ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸಿಕೊಂಡಿದ್ದರಂತೆ. ಅರಸರ ಅಳ್ವಿಕೆಯ ನಂತರ ತಾಲೂಕು ಕೇಂದ್ರವನ್ನು ಸೋಮವಾರಪೇಟೆಗೆ ವರ್ಗಾಯಿತೆಂದು ತಿಳಿದುಬರುತ್ತದೆ.

                     ಹೀಗೆ ಪ್ರಾಚೀನತೆಯ ಸೊಬಗನ್ನು ಹೊತ್ತ ನಂಜರಾಯಪಟ್ಟಣದಲ್ಲಿ ಈಗ ನವೀಕರಿಸಲ್ಪಟ್ಟ ನಂಜುಂಡೇಶ್ವರ ದೇವಾಲಯ ಭಕ್ತಾದಿಗಳನ್ನು ತನ್ನೆಡೆಗೆ ಸೆಳೆಯುತ್ತದೆ. ನಾಲ್ಕು ವರ್ಷಗಳ ಹಿಂದೆ ಭಗ್ನಾವಸ್ಥೆಯಲ್ಲಿ ಇದ್ದ ದೇವಾಲಯಕ್ಕೆ ಊರಿನ ಮಂದಿ ಶ್ರೀ ಕ್ಷೇತ್ರ ಧರ್ಮಸ್ಥÀಳದ ಶ್ರೀ ಮಂಜುನಾಥೇಶ್ವರ ಧರ್ಮೋತ್ಸಾವ ಟ್ರಸ್ಟ್ ಸಹಯೋಗದೊಂದಿಗೆ ಕಾಯಕಲ್ಪ ನೀಡಿ ನವೀಕರಿಸಿದ್ದಾರೆ.

                      ನಂಜರಾಯಪಟ್ಟಣದ ನಂಜುಂಡೇಶ್ವರ ದೇವಾಲಯದ ಗರ್ಭಗ್ರಹವು ಚೌಕಾಕಾರದಲ್ಲಿದ್ದು ಗರ್ಭಗುಡಿಯೊಳಗೆ ಮಧ್ಯಮ ಗಾತ್ರದ ಶಿವಲಿಂಗವಿದೆ. ಅದರ ಎದುರಿನಲ್ಲಿ ನಂದಿಯ ಸಣ್ಣ ವಿಗ್ರಹವಿದ್ದರೆ ಗರ್ಭಗುಡಿಯ ಬಲಭಾಗದಲ್ಲಿ ಸುಬ್ರಹ್ಮಣ್ಣನ ಗುಡಿಯಿದೆ. ಈ ಗುಡಿಯೊಳಗೆ ವಿಗ್ರಹ ಮಾತ್ರ ಇಲ್ಲ. ಎಡಭಾಗದಲ್ಲಿ ಗಣಪತಿಯ ಗುಡಿಯಿದ್ದು ಇದರೊಳಗಿನ ಗಣಪತಿಯ ವಿಗ್ರಹವು ವಿಶೀಷ್ಠ ಶೈಲಿಯದ್ದಾಗಿದೆ. ಸುಬ್ರಹ್ಮಣ್ಯನ ಗುಡಿಯ ಪಕ್ಕದಲ್ಲಿಯೇ ಇರುವ ಸಣ್ಣ ಕೊಠಡಿಯಲ್ಲಿ ವಿಗ್ರಹವೊಂದಿದ್ದು ಆಕರ್ಷಕವಾಗಿದೆ.

                       ದೇವಾಲಯದ ಗರ್ಭಗುಡಿಯ ಮೇಲ್ಬಾಗದಲ್ಲಿ ಎತ್ರವಾದ ಶಿಖರವಿದ್ದು. ಇದರ ನಾಲ್ಕು ಮೂಲೆಗಳಲ್ಲಿ ನಂದಿಯ ವಿಗ್ರಗಗಳಿವೆ. ಮುಂಭಾಗದಲ್ಲಿ ಶಿವಪಾರ್ವತಿ, ನಟರಾಜರ ಶಿಲ್ಪಾಕೃತಿಗಳಿವೆ. ದೇವಾಲಯದ ಮುಂಭಾಗದಲ್ಲಿರುವ ಮಂಟಪದಲ್ಲಿ ನಂದಿಯ ವಿಗ್ರಹವಿದ್ದು. ಇದರ ಎದುರಿಗೆ ಸುಮಾರು ಒಂಬತ್ತು ಮೀಟರ್ ಎತ್ತರದ ಧ್ವಜಸ್ಥಂಭವಿದೆ.

                       ಕಾವೇರಿ ನದಿಯ ನಿಸರ್ಗ ರಮಣೀಯ ಪ್ರದೇಶದಲ್ಲಿ ನೆಲೆಸಿರುವ ನಂಜುಡೇಶ್ವರನ ಜಾತ್ರೆ ಪ್ರತಿವರ್ಷ ಯುಗಾದಿಯ ನಂತರದ ಹದಿನೈದನೆಯ ದಿನ ವೈಭವದಿಂದ ಜರುಗುತ್ತದೆ. ರಾಜರ ಕಾಲದಿಂದಲೂ ದೇವಾಲಯಗಳ ಬೀಡಾಗಿ ಮೆರೆದಿರುವ ನಂಜರಾಯಪಟ್ಟಣದಲ್ಲಿ ಶ್ರೀ ನಂಜುಡೇಶ್ವರನ ಜಾತ್ರೆಯೂ ಸೇರಿದಂತೆ ಶ್ರೀ ವೀರಭದ್ರ, ಶ್ರೀ ಹನುಮಂತ, ಶ್ರೀ ಬಸವೇಶ್ವರ ಮುಂತಾದ ಉತ್ಸವಗಳು ಜರುಗುತ್ತಿದ್ದವಂತೆ. ನಂಜರಾಯಪಟ್ಟಣದ ಪುರಾತನ ದೇವಾಲಯಗಳ ಪೈಕಿ ಶ್ರೀ ವೀರಭದ್ರ, ಆಂಜನೆಯ ಹಾಗೂ ಪಟ್ಟಮ್ಮನ ಗುಡಿಗಳ ಪಳೆಯುಳಿಕೆಗಳು ಮಾತ್ರ ಉಳಿದುಕೊಂಡಿವೆ.

                       ನಂಜರಾಯಪಟ್ಟಣ ಪ್ರವಾಸಿಗರಿಗೂ ಅತ್ಯಂತ ಆಕರ್ಷಣೆಯ ತಾಣ. ಕಾವೇರಿ ನದಿಯ ತೀರದಲ್ಲಿದ್ದು. ತನ್ನ ಬೆಡಗಿನಿಂದ ಪ್ರವಾಸಿಗರಿಗೆ ಮುದ ನೀಡುತ್ತದೆ. ಇದೀಗ ನವೀಕರಣಗೊಂಡಿರುವ ದೇವಾಲಯ ತನ್ನ ಪ್ರಾಚೀನತೆಯ ಸೊಬಗನಿಂದ ಕಂಗೊಳಿಸಿದರೆ, ದೇವಾಲಯದ ಸನಿಹದಲ್ಲೇ ನದಿಯ ನಡುವೆ ಪುಟ್ಟ ದ್ವೀಪವೊಂದಿದ್ದು, ಇದು ರಾಜರ ಕಾಲದಲ್ಲಿ ಜಲಕ್ರೀಡೆಯ ತಾಣವಾಗಿತ್ತು ಎಂದು ಹೇಳಲಾಗುತ್ತದೆ. ಅನತಿ ದೂರದಲ್ಲಿರುವ ದುಬಾರೆ ಅರಣ್ಯ ಪ್ರದೇಶ ಬೇಸಿಗೆಯ ದಿನಗಳಲ್ಲಿ ಹಲವು ಪ್ರವಾಸಿಗಳನ್ನು ಆಕರ್ಷಿಸುತ್ತದೆ.ನಂಜರಾಯಪಟ್ಟಣಕ್ಕೊಂದು ದಿನ ನೀವು ಭೇಟಿ ನೀಡಿದ್ದೇ ಆದರೆ ಪ್ರಾಚೀನತೆಯ ಸೊಬಗಿನಿಂದ ಕಂಗೊಳಿಸುವ ನಂಜುಂಡೇಶ್ವರ ಲೇಖಕರು : ಸಿ.ಎಸ್. ಸುರೇಶ್

ad12
ad5
ad11
ad8
ad6
ad4
ad14
ad2
ad9
ad7
ad10
ad12
ad8
ad1
ad3