Byrambada Subramnaya Temple

ಬೈರಂಬಾಡದ ಶ್ರೀ ಸುಬ್ರಮಣ್ಯ ದೇವಾಲಯ:

                  ಕೊಡಗು ಜಿಲ್ಲೆಯ ಬೈರಂಬಾಡ ಗ್ರಾಮ ಶ್ರೀ ಸುಬ್ರಮಣ್ಯ ದೇಗುಲವನ್ನು ಹೊಂದಿ ಸ್ಕಂದಕ್ಷೇತ್ರ ಎಂಬ ಹೆಸರು ಪಡೆದಿದೆ. ಸುಬ್ರಮಣ್ಯ ಷಷ್ಟಿಯ ದಿನದಂದು ಕೊಡಗಿನ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಹಬ್ಬದ ದಿನದಂದು ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಅಪರಾಹ್ನ ಕಾರ್ಯಕ್ರಮವಿದೆ.

                  ಮಡಿಕೇರಿಯಿಂದ ಸುಮಾರು 25ಕಿ.ಮೀ ದೂರದಲ್ಲಿರುವ ಬೈರಂಬಾಡದ ಸುಬ್ರಮಣ್ಯ ದೇವಾಲಯ ಅಕರ್ಷಣಿಯವಾಗಿದ್ದು ಬಹು ಪ್ರಖ್ಯಾತಿಯನ್ನು ಹೊಂದಿದೆ. ಕೊಡಗು ಜಿಲ್ಲೆಯಲ್ಲಿ ಎರಡು ಪ್ರಖ್ಯಾತ ಸುಬ್ರಮಣ್ಯ ದೇವಾಲಗಳಿದ್ದು, ಅವುಗಳಲ್ಲೊಂದು ಬೈರಂಬಾಡದ ದೇವಾಲಯವಾಗಿದೆ. ಕೂಡಿಗೆಯ ಶ್ರೀ ಉದ್ಬವ ಸುಬ್ರಮಣ್ಯ ಸ್ವಾಮಿ ದೇವಾಲಯ ಮತ್ತೊಂದು ಪ್ರಖ್ಯಾತ ಸುಬ್ರಮಣ್ಯ ದೇವಾಲಯವಾಗಿದೆ.

                 ಬೈರಂಬಾಡದ ದೇವಾಲಯ ನಿಸರ್ಗ ಸಿರಿಯ ನಡುವೆ ಹುದುಗಿದೆ. ಸುತ್ತಲಿನ ಕಾಫಿಯ ತೋಟಗಳ ನಡುವೆ ಈ ಪುಟ್ಟ ದೇವಾಲಯ ಕಂಗೊಳಿಸುತ್ತದೆ. ದೇವಾಲಯದಲ್ಲಿ ನಿತ್ಯಪೂಜೆ ಇದೆ. ಸುಬ್ರಮಣ್ಯ ಷಷ್ಠಿ ಹಾಗೂ ಕಿರುಷಷ್ಠಿಗಳಂದು ಈ ದೇವಾಲಯದಲ್ಲಿ ಭಕ್ತವೃಂದ ದೇವರ ಕೃಪೆಗೆ ಪಾತ್ರರಾಗಲು ನೆರೆದಿರುತ್ತಾರೆ.

                 ಬೈರಂಬಾಡದ ಮತ್ತೊಂದು ವಿಶೇಷತೆ-ಇಲ್ಲಿನ ಬಾವಲಿ ಸಾಮ್ರಾಜ್ಯ ಬೈರಂಬಾಡದ ದೇಗುಲದ ಸುತ್ತಲಿನ ನೂರಾರು ಮರಗಳಿಗೆ ಜೋತು ಬಿದ್ದಿರುವ ಅಸಂಖ್ಯ ಬಾವಲಿಗಳು ಕಳೆದ ಹಲವಾರು ದಶಕಗಳಿಂದ ಇಲ್ಲಿ ಆಶ್ರಯ ಪಡೆದಿರುವುದು ದೇವಾಲಯದ ಒಂದು ಪ್ರಮುಖ ಆಕರ್ಷಣೆಯಾಗಿದೆ. ಬೈರಂಬಾಡದಲ್ಲಿ ಕಂಡು ಬರುವಷ್ಟು ಬಾವಲಿಗಳು ದಕ್ಷಿಣ ಭಾರತದ ಯಾವುದೇ ಭಾಗದಲ್ಲಿ ಒಂದೇ ಕಡೆ ಕಂಡು ಬರುವುದಿಲ್ಲ ಎನ್ನಲಾಗಿದೆ. ಹೀಗಾಗಿಯೇ ಬೈರಂಬಾಡಕ್ಕೆ ಬಾವಲಿಗಳ ತವರೂರು ಎಂಬ ಹೆಸರೂ ಬಂದಿವೆ.

5/5000

ಕೃಪೆ