Chandra shila Hills

ಚಂದ್ರಶಿಲಾ ಪರ್ವತ:

                     ಹೇಮೆಯು ತನ್ನ ಉದ್ದೇಶವನ್ನು ಜ್ಞಾಪಿಸಿಕೊಂಡು ತಪೋಯೋಗ್ಯವಾದ ಸ್ಥಳವನ್ನು ಆರಿಸುತ್ತಾ ಪೂರ್ವದಲ್ಲಿ ಗುರುಶಾಪಗ್ರಸ್ತನಾದ ಚಂದ್ರನು ತಪಸ್ಸು ಮಾಡಿ ಶಾಪ ವಿಮೋಚನೆ ಪಡೆದ ಸ್ಥಳಕ್ಕೆ ಹೋಗಬೇಕೆಂದು ಹೊರಟಳು. ಚಂದ್ರನು ತಪಸ್ಸು ಮಾಡಿದ್ದರಿಂದ ಚಂದ್ರಶಿಲಾ ಪರ್ವತವೆಂದು ಹೆಸರಾಯಿತು. ಇದಕ್ಕೆ ಪೂರ್ವದಲ್ಲಿ ‘ರಂಭಾವತಿ’ ಎಂದು ಹೆಸರಿತ್ತು. ಈ ಸ್ಥಳದಲ್ಲಿ ಜಾಬಾಲಿ ಋಷ್ಯಾಶ್ರಮವಿತ್ತು. ಈ ಜಾಬಾಲಿ ಋಷಿಗಳು, ತುಂಗಾ ಪೂರ್ವವಾಹಿನಿಯೂ, ಭದ್ರಾ ಪಶ್ಚಿಮವಾಹಿನಿಯಾಗಿಯೂ ಸಂಗಮವೆನಿಸಿಕೊಂಡ (ಕುಡಲಿ) ಅಗ್ನಿ ತೀರ್ಥದಲ್ಲಿ ತಪಸ್ಸು ಮಾಡಿ ಶ್ರೀಮನ್ನಾರಾಯಣನ ಮೆಚ್ಚುಗೆಗೆ ಪಾತ್ರರಾದವರು. ಹೇಮೆಯು ರಂಭಾವನಕ್ಕೆ ಬಂದಳು. [ಅದು ಈಗ ಜಾಬಾಲಿ ಆಶ್ರಮಕ್ಕೆ ಬದಲಾಗಿ ‘ಬಾಳೂರು ಜಾವಳಿ’ ಎಂದು ಕರೆಯುತ್ತಾರೆ.] ಜಾಬಾಲಿ ಋಷಿಗಳು ಹೇಮೆಯು ದಾಕ್ಷಾಯಿಣೀ ದೇಹಧಾರಿಣಿ ಯೋಗಿನಿಯೆಂದು ತಿಳಿದು ಮಗಳಂತೆ ಪ್ರೀತಿ ವಾತ್ಸಲ್ಯವನ್ನು ತೋರಿಸಿ ಪೂರ್ವ ಸಂಕಲ್ಪದಂತೆ ಫಲ ಸಿದ್ಧಿಗಾಗಿ ತಪಸ್ಸನ್ನಾಚರಿಸಿದಳು. ತಪಸ್ಸಿಗೆ ಮೆಚ್ಚಿದ ಶಿವನು ಬೇಕಾದ ವರವನ್ನು ಕೇಳೆಂದು ಹೇಳಲಾಗಿದೆ. ‘ದೇವಾ. ಲೋಕೋಪಕಾರಕ್ಕಾಗಿ ಈ ದೇಹವು ಪೂಜ್ಯವಾಗಲು ನದಿಯಾಗಿ ಹರಿಯುವಂತೆ ಪ್ರಸಿದ್ಧಳಾಗು ಎಂದು ಹರಸಿದನು.

                  “ನೀನು ಹರಿಯುವ ಚಂದ್ರಶಿಲೆ, ಪಲ್ಗುಣ ಸರೋವರ, ಚಂಪಕಾವನ ಬ್ರಹ್ಮಶಿಲಾ ಅರ್ಕಕುಂಡ, ಕಾವೇರಿ ಸಂಗಮ ಈ ಆರು ಅತಿ ಮುಖ್ಯ ಕ್ಷೇತ್ರಗಳಾಗಿವೆ. ಈ ನಿನ್ನ ಆದಿಯಾಗಿ ಚಂದ್ರಕಲಾ ಸ್ಥಾನವು ನಿರ್ವಿಘ್ನದಾಯಕ ಸುಸ್ಥಾನವಾಗಿರಲಿ. ನೀನು ಹರಿಯುವ ಉಭಯ ತಟಗಳೂ ನನ್ನ ಸಾನಿಧ್ಯದಿಂದ ಒಪ್ಪಿಸುತ್ತೇನೆ. ನಿನ್ನ ಪ್ರವಾಹದಲ್ಲಿ ಕಾರ್ತಿಕ, ಮಾಘ, ವ್ಯಶಾಖ ಸ್ನಾನಗಳು ಪ್ರಖ್ಯಾತವಾಗಲಿ” ಎಂದು ಅನುಗ್ರಹ ಮಾಡಿದನು. [ಅದಕ್ಕಾಗಿಯೇ ಪ್ರಸಿದ್ಧ ತೀರ್ಥ ಸ್ನಾನಗಳಲ್ಲಿ ಮೊದಲನೆಯದು ‘ಚಂದ್ರಶಿಲಾ ತೀರ್ಥವೆಂದು ಪ್ರಸಿದ್ಧಿಯಾಗಿದೆಯೆಂದು ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ವಿವರಿಸಲಾಗಿದೆ]