Vegetables in Gokarna

ಗೋಕರ್ಣ ತರಕಾರಿ:

                       ಗೋಕರ್ಣ ವೈವಿಧ್ಯಮಯ ತರಕಾರಿಗೆ ಪ್ರಸಿದ್ಧ. ಬೇಲೆಹಿತ್ಲು, ರುದ್ರಪಾದ, ಬಿಜ್ಜೂರ ಸುತ್ತಲಿನ ಸುಮಾರು 1200 ಎಕರೆ ಪ್ರದೇಶದಲ್ಲಿ ಹಾಲಕ್ಕಿ ಸಮುದಾಯದವರು ಪಾರಂಪರಿಕವಾಗಿ ಈ ವೃತ್ತಿಯನ್ನು ಮಾಡುತ್ತಿದ್ದಾರೆ. ಇಲ್ಲಿಯ ಉಪ್ಪು ಮಿಶ್ರಿತ ಹವಾಮಾನಕ್ಕೆ ಇವರು ಬೆಳೆಯುವ ತರಕಾರಿಯಲ್ಲಿ ವಿಶಿಷ್ಟವಾದ ರುಚಿ ಇದೆ ಎಂಬುದು ಗ್ರಾಹಕರ ಅನಿಸಿಕೆ. ಸುಮಾರು 25ಕ್ಕೂ  ಹೆಚ್ಚು ವಿಧದ ತರಕಾರಿಯ ಬೇಸಾಯ ಮಾಡುವ ಹಾಲಕ್ಕಿ ಸಮುದಾಯದವರು ಅದಕ್ಕೆ ಮಾರುಕಟ್ಟಯನ್ನು ತಾವೇ ಸೃಷ್ಟಿಸಿಕೊಂಡಿರುವುದನ್ನು ವಿಶೇಷ. 
                       ಗೋಕರ್ಣದ ತರಕಾರಿ ಎಂದೇ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಇದಕ್ಕೆ ಎಲ್ಲೆಡೆಯಿಂದ ಅಪಾರ ಬೇಡಿಕೆ. ಒಂದು ಸಮುದಾಯ, ತರಕಾರಿಯನ್ನು ಅವಲಂಬಿಸಿ ಬದುಕುವುದು, ಅದನ್ನು ವಾಣಿಜ್ಯೀಕರಣಗೊಳಿಸಿಕೊಂಡಿರುವುದು ಹಾಗೂ ಅದರಲ್ಲಿ ಪಾರಂಪರಿಕತೆಯನ್ನು ಉಳಿಸಿಕೊಂಡು ಬಂದಿರುವುದು ಹೀಗೆ ಎಲ್ಲ ಸಂಗತಿಗಳು ವಿಶೇಷವೆ. ಇಲ್ಲಿನ ತರಕಾರಿ, ಕೃಷಿ ಅಧ್ಯಯನಕ್ಕೆ ಹಾಗೂ ವೀಕ್ಷಣೆಗೆ ಸೂಕ್ತ ಸ್ಥಳ.