Shravana Belagula

                       ಜೈನ ಸಂಪ್ರದಾಯದ ಪ್ರಕಾರ, ಸಂಸಾರವನ್ನು ಬಿಟ್ಟು ಸನ್ಯಾಸಾಶ್ರಮ ಸ್ವೀಕರಿಸಿದವರಲ್ಲಿ ಅತ್ಯಂತ ಪುಣ್ಯ ಪುರುಷರನ್ನು ‘ಶ್ರವಣರು’ ಎನ್ನುತ್ತಾರೆ. ಈ ಊರಿನ ಹೆಸರು “ಶ್ರವಣಬೆಳಗೊಳ” ಕಾಲಕ್ರಮೇಣ ಶ್ರಾವಣ, ‘ಶ್ರವಣಬೆಳಗೊಳ’ ಎಂದು ಬದಲಾಯ್ತು. ಇಲ್ಲಿಯ ಜನ ಬೆಳಗೋಳೆ ಎನ್ನುತ್ತಾರೆ. ಜೈನ ಪಂಥದವರು ರಾಜಸ್ಥಾನ್, ಗುಜರಾತ್ ಪ್ರಾಂತ್ಯಗಳಿಂದಲೂ ಇಲ್ಲಿಗೆ ತೀರ್ಥಯಾತ್ರೆಗೆ ಬರುತ್ತಾರೆ. ನಮ್ಮ ದೇಶದ ಜೈನರ ಐದು ಪವಿತ್ರ ಕ್ಷೇತ್ರಗಳಲ್ಲಿ ಈ ಶ್ರವಣಬೆಳಗೊಳವೂ ಒಂದಾಗಿದೆ.

                ಜೈನಮತದ ಮೂಲಪುರಷರನ್ನು ತೀರ್ಥಂಕರು ಎನ್ನುತ್ತಾರೆ. ಈ ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಒಬ್ಬ. ತೀರ್ಥಂಕರರಲ್ಲಿ ಕೊನೆಯವನು ವರ್ಧಮಾನ ಮಹಾವೀರ. ಈ ವರ್ಧಮಾನ ಮಹಾವೀರನ ಮೂಲಕವೇ ಜೈನ ಸಿದ್ಧಾಂತ ಒಂದು ಮತವಾಗಿ ಬೆಳೆಯಿತು.

               ಬಾಹುಬಲಿ ಋಷಭನಾಥನ ಮಗ. ಆದರೆ ರಾಮಾಯಣದಲ್ಲಿ ಶ್ರೀರಾಮನ ವಂಶದ ಮೂಲಪುರುಷ ಋಷಭ ಎಂದು ಹೇಳಲ್ಪಟ್ಟಿದೆ. ಈ ಋಷಭನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ನೂರು ಜನ ಮಕ್ಕಳು. ಅವರಲ್ಲಿ ದೊಡ್ಡವನ ಹೆಸರು ಭರತ. ಎರಡನೆಯ ಹೆಂಡತಿಯ ಮಗ ಬಾಹುಬಲಿ. ಮಕ್ಕಳು ದೊಡ್ಡವರಾದ ನಂತರ, ಋಷಭನಾಥನು ತನ್ನ ಸಾಮ್ರಾಜ್ಯವನ್ನು ಎಲ್ಲಾ ಮಕ್ಕಳಿಗೂ ಸಮನಾಗಿ ಹಂಚಿ ತಾನು ತಪಸ್ಸು ಆಚರಿಸಲು ಅರಣ್ಯಕ್ಕೆ ಹೊರಟುಹೋದ. ಆದರೆ ರಾಜಧಾನಿಯಾದ ಕೋಸಲ ಪಟ್ಟಣವನ್ನು, ಎಲ್ಲರಿಗಿಂತಲೂ ಹಿರಿಯನಾದ ಭರತನಿಗೆ ನೀಡಿ ಎಲ್ಲರಿಗೂ ಅವನನ್ನು ಪ್ರಧಾನ ವ್ಯಕ್ತಿಯಾಗಿ ನಿಯಮಿಸಿದ. ತನ್ನ ರಾಜ್ಯವನ್ನು ಮತ್ತಷ್ಟು ವಿಸ್ತರಿಸಬೇಕೆಂದು ಭರತನಿಗೆ ಆಸೆಯಾಗಿ, ದಂಡಯಾತ್ರೆ ಪ್ರಾರಂಭಿಸಿದ. ಆತನ ತಮ್ಮಂದಿರೂ ತಮ್ಮ ತಮ್ಮ ರಾಜ್ಯ ಭಾಗಗಳನ್ನು ಅವನಿಗೆ ಕೊಟ್ಟು, ತಪ್ಪಸ್ಸಿಗಾಗಿ ತಂದೆಯ ಬಳಿ ಹೊರಟುಹೋದರು. ಆದರೆ ಮಹಾಪರಾಕ್ರಮನಾದ ಬಾಹುಬಲಿ, ಅಣ್ಣನ ದುರಾಸೆ ನೋಡಿ ಸಹಿಸಲಾರದೇ, ಭರತನೊಂದಿಗೆ ಯುದ್ಧ ಪ್ರಾರಂಭಿಸಿದ. ಅನಗತ್ಯವಾದ ಜನ ನಷ್ಟವುಂಟಾಗದಂತೆ ಅಣ್ಣ ತಮ್ಮ ಇಬ್ಬರೂ ದ್ವಂದ್ವ ಯುದ್ಧ ಮಾಡಲಾರಂಭಿಸಿದರು. ಅಮಿತ ಶಕ್ತಿವಂತನಾದ ಬಾಹುಬಲಿ, ಭರತನ ಎರಡೂ ಕೈಗಳನ್ನು ಮೇಲೆತ್ತಿ ನೆಲಕ್ಕೆ ಬಡಿದು ಸಾಯಿಸಲು ಉದ್ಯುಕ್ತನಾದ. ಆದರೆ “ಅಶಾಶ್ವತವಾದ ಈ ಇಹಲೋಕ ಸುಖಗಳಿಗೆ ಆಸೆಪಟ್ಟು ಪಾಪಕಾರ್ಯಗಳನ್ನೇಕೆ ಮಾಡಬೇಕು?” ಎಂಬ ಯೋಚನೆ ಬಂದು, ಭರತನನ್ನು ಬಿಡುವುದೇ ಅಲ್ಲದೇ, ತನ್ನ ರಾಜ್ಯಭಾಗವನ್ನೂ ಭರತನಿಗೆ ನೀಡಿ ತಾನು ತಪಸ್ಸು ಮಾಡಲು ಪ್ರಾರಂಭಿಸಿದರು.

                 ಬಾಹುಬಲಿ ಹಾಗೆ ಎಷ್ಟು ವರ್ಷ ತಪಸ್ಸು ಮಾಡಿದರೂ ಮೋಕ್ಷ ಹೊಂದುವುದಕ್ಕೆ ಬೇಕಾದ ಆತ್ಮಜ್ಞಾನ ಲಭಿಸಲಿಲ್ಲ. ಆಗ ಜೈನರ ಆದಿದೈವನಾದ ಆದಿನಾಥನು ಬಂದು ಈ ಇಹಲೋಕ ಸಂಬಂಧವಾದ ಯೋಚನೆಗಳು ಬಿಡಲಿಲ್ಲವೆಂದರೆ ಆತ್ಮಕ್ಕೆ ಮೋಕ್ಷ ಸಿದ್ಧಿಸುವುದಿಲ್ಲವೆಂದು ಹೇಳಿದ. ನಿಜವಾದ ‘ಸರ್ವಸಂಗ ಪರಿತ್ಯಾಗ’ವೆಂದರೇನೆಂದು ಅರ್ಥ ಮಾಡಿಕೊಂಡು ಬಾಹುಬಲಿ ಪುನಃ ತಪಸ್ಸು ಮಾಡಿ ಕೊನೆಗೆ ಮೋಕ್ಷವನ್ನು ಪಡೆದ.

                ಬಾಹುಬಲಿ ತಪಸ್ಸು ಮಾಡಿದ ಈ ಪ್ರದೇಶ ಸುಮಾರು ಎರಡು ಸಾವಿರ ವರ್ಷಗಳಿಂದ ಜೈನರಿಗೆ ಪವಿತ್ರ ಕ್ಷೇತ್ರವಾಗಿದೆ. ಮೈಸೂರು ಪ್ರಾಂತ್ಯವನ್ನು ಪರಿಪಾಲಿಸಿದವರಲ್ಲಿ ಗಂಗ ವಂಶದ ರಾಜರು ಅತ್ಯಂತ ಸುಪ್ರಸಿದ್ಧರು. ಈ ಗಂಗ ವಂಶದ ರಾಜರು ಜೈನ ಮತವನ್ನು ಪಾಲಿಸುತ್ತಿದ್ದರು. ಅವರಲ್ಲಿ ಎರಡನೆಯ ರಾಜಮಲ್ಲ ಎಂಬ ರಾಜರ ಕಾಲದಲ್ಲಿ, ಆತನ ಬಳಿ ಮಂತ್ರಿಯಾಗಿದ್ದ ಚಾವುಂಡರಾಯನು ಈ ಊರಿನಲ್ಲಿ ಬಾಹುಬಲಿಯ ವಿಗ್ರಹ ನಿರ್ಮಿಸಿದ. 

                 ಈ ಬಾಹುಬಲಿಯ ವಿಗ್ರಹವನ್ನು ಮತ್ತೊಂದೆಡೆ ಕೆತ್ತಿದ ನಂತರ ಇಲ್ಲಿಗೆ ತಂದು ಪ್ರತಿಷ್ಠಾಪಿಸಲಿಲ್ಲ. ಬೆಟ್ಟದ ಕೊನೆಯ ಭಾಗದ ಮೇಲಿನಿಂದ ಕೆಳಗಿನವರೆಗೂ ಕತ್ತರಿಸುತ್ತಾ ಕೆತ್ತಲ್ಪಟ್ಟಿದೆ. ಎರಡು ಕಾಲುಗಳ ಮೇಲೆ ನಿಂತು ತಪಸ್ಸು ಮಾಡುತ್ತಿರುವ ಈ ವಿಗ್ರಹದ ಎತ್ತರ 57 ಅಡಿಗಳು, ಈ ವಿಗ್ರಹದ ಶರೀರಾಕೃತಿ ಅಂದವಾಗಿ, ಆಕರ್ಷಣೀಯವಾಗಿದೆ. ಮುಖ್ಯವಾಗಿ ಶರೀರದ ವಿವಿಧ ಭಾಗಗಳನ್ನು ಆಕೃತಿಗೆ ತಕ್ಕಂತೆ ಕೆತ್ತಿರುವುದರಲ್ಲೂ, ಮುಖದಲ್ಲಿನ ಒಂದು ವಿಧವಾದ ನಿರ್ಮ¯ತೆ, ಶಾಂತ ಸ್ವಭಾವ ಎದ್ದುಕಾಣುವಂತೆ ಶಿಲ್ಪೀಕರಿಸಿದ್ದಾರೆ. ಅತ್ಯಂತ ನಿರಾಡಂಬರವಾಗಿರುವ ಈ ವಿಗ್ರಹ, ಅನೇಕ, ನೂರಾರು ವರ್ಷಗಳಿಂದ ಅನೇಕ ಜನರನ್ನು ತನ್ನತ್ತ ಸೆಳೆಯುತ್ತಿದೆ.


01
crp1
02
crp2
crp3
crp4
crp5
crp6
crp7
crp8
crp9
crp10
crp11
crp12
crp13
crp14
crp15
crp16
crp17
crp18
crp19
crp20
crp21
crp22
crp23
crp24
crp25
crp26
crp27
ad28