Marle

ಮರ್ಲೆ:

                  ಚಿಕ್ಕಮಗಳೂರಿನಿಂದ ಬೆಳವಾಡಿಗೆ ಹೋಗುವ ಮಾರ್ಗದಲ್ಲಿ ಇರುವ ಸ್ಥಳ. ಹೊಯ್ಸಳ ಕಾಲದ ಚೆನ್ನಕೇಶವ ಸಿದ್ಧೇಶ್ವರ ದೇಗುಲಗಳು ಇವೆ. ವಿಷ್ಣುವರ್ಧನ ಅರಸನ ಸೇನಾಧಿಪತಿ ರಾಯಣ ದಂಡನಾಯಕ ಈ ದೇವಾಲಯಗಳನ್ನು ನಿರ್ಮಿಸಿದನು. ಅಳೆತ್ತರದ ಶಿಲಾಶಾಸನವು ಇದನ್ನು ದಾಖಲಿಸುತ್ತದೆ. ಈ ಎಲ್ಲ ಹೊಯ್ಸಳ ಕಾಲೀನ ಗುಡಿಗಳು, ಶಿಲಾಶಾಸನ ಹಾಗೂ ಕೆರೆ ಇದಲ್ಲದೆ ವಾಸಸ್ಥಳವನ್ನು ಸುತ್ತುವರಿದು, 12 ನೇಯ ಶತಮಾನದ ರಕ್ಷಣಾ ಗೋಡೆ ಹರಡಿಕೊಂಡಿದೆ ಇದು ಬಹಳಷ್ಟು ಶಿಥಿಲಾವಸ್ಥೆಯಲ್ಲಿ ಇದೆ. 

                    ಅಂತಹ ಚಿಕ್ಕಮಗಳೂರು ಜಿಲ್ಲೆಯ ಪ್ರದೇಶವು ನಿಬಿಡಾರಣ್ಯ, ಹಳ್ಳ, ಕೊಳ್ಳ, ನೆರೆ, ತೊರೆ, ಜಲಪಾತಗಳಿಂದ, ಹಸಿರು ಹೊದಿಕೆಯ ಬೆಟ್ಟ ಕಣಿವೆಗಳಿಂದ ಕುಡಿ, ನಿಸರ್ಗದ ಆಡುಂಬೊಲವಾಗಿದೆ. ಪ್ರಶಾಂತವಾಗಿ ಹರಡಿದ ಪ್ರಾಕೃತಿಗೆ ಸಗ್ಗ ಸಿರಿಯಲ್ಲಿ, ಬಹು ವಿಶೇಷವಾಗಿ ಆಧ್ಯಾತ್ಮ ಚಿಂತನದ ಮಠ ಮಾನ್ಯಗಳನ್ನು ಗುರುಕುಲಗಳನ್ನು ಬ್ರಹ್ಮ ಪುರಿಗಳನ್ನು ದೈವಾಗಾರಗಳನ್ನು, ಗೋಪುರಗಳನ್ನು ಪುಷ್ಕರಣೆಗಳನ್ನು ನೀಡಿತೇ ಹೊರತು, ತನ್ನ ನಾಡಿನ ರಕ್ಷಣಾ ವ್ಯವಸ್ಥೆಯಲ್ಲಿ, ಕೋಟೆ-ಕೊತ್ತಲಗಳ ನಿರ್ಮಾಣದಲ್ಲಿ ಅಷ್ಟು ಪ್ರಾಧಾನ್ಯತೆ ನಿಡಲಿಲ್ಲ, ಗಮನಕೊಡಲಿಲ್ಲ, ಹಾಗೂ ಅದರ ಅವಶ್ಯಕತೆಯೂ ಅಷ್ಟು ಇರಲಿಲ್ಲ. 

                      ಮೇಲೆ ಸಮೀಕ್ಷೆಗೊಳಗಾದ ಸುಮಾರು 30-35 ಕೋಟೆಗಳಲ್ಲಿ, ವನದುರ್ಗ’ ಗಿರಿದುರ್ಗ’ ಗಳೇ ಹೆಚ್ಚು. ಈ ಸಂಶೋಧಕನಿಗೆ ಲಭ್ಯವಾದ ಕೋಟೆ-ಕೊತ್ತಳಗಳ ಬಗ್ಗೆ ಸಂಕ್ಷೇಪದಲ್ಲಿ ವರ್ಣಿಸಲಾಗಿದೆ ಅವಶ್ಯವೆನಿಸಿದ ಚಿತ್ರಗಳನ್ನೂ, ನಕ್ಷೆಗಳನ್ನು ಅಳವಡಿಸಲಾಗಿದೆ. ಇದೊಂದು ನನ್ನಿಂದ ಚಿಕ್ಕ ಸಾಹಸ ಮಾತ್ರ, ಯಾರಾದರೂ ಸಂಶೋಧಕ ವಿದ್ಯಾರ್ಥಿಯು ಇದರ ಬಗ್ಗೆ ಪಿ.ಎಚ್.ಡಿ. ಮಹಾಪ್ರಬಂಧವನ್ನು ಯಾವುದಾದರೊಬ್ಬ, ಗೈಡ್ ಪ್ರೊಫೆಸರ್‍ನ ಮಾರ್ಗದರ್ಶನದಲ್ಲಿ ಸಾರಸ್ವತ ಲೋಕಕ್ಕೆ ನೀಡಿದರೆ, ನನಗೆ ನೆಮ್ಮದಿ. ಡಾ||. ಎಸ್. ಕೆ. ಜೋಶಿ