Aasandhi

ಆಸಂದಿ:

           ಐತಿಹಾಸಿಕ ಖ್ಯಾತಿಯ ತಾಣವಿದು. ಗಂಗರು ಹಾಗೂ ಹೊಯ್ಸಳರು ಆಲೀದ ಪ್ರದೇಶ. ‘ಆಸಂದಿ ನಾಡು’ ಎಂಬ ಆಗಿನ ದಾಖಲಿತ ಹೆಸರು; (ಕ್ರಿ.ಶ 1191) ಶಿವಾಲಯ, ಗಂಗೇಶ್ವರ, ಬ್ರಹ್ಮೇಶ್ವರ ದೇವಾಲಯಗಳು ಹೊಯ್ಸಳರ ‘ವಾಸ್ತು-ಶಿಲ್ಪಗಳ ನಿರ್ಮಿತವಾಗಿದ್ದು, ಶಾಸನಗಳಲ್ಲಿ ಇದಕ್ಕೆ ‘ಮಲ್ಲೇಶ್ವರ ಎಂಬ ಹೆಸರಿದೆ. ತ್ರಿಕೂಟಾಚಲ ಗುಡಿ ಇದು. ಇವುಗಳ ಸುತ್ತ ಶಿಥಿಲವಾದ ಹೊಯ್ಸಳರ ಕಾಲದ ರಕ್ಷಣಾಗೋಡೆ ಅಲ್ಲಲ್ಲಿ ಅಳಿದುಳಿದಿದೆ.