Horanaadu

ಹೊರನಾಡು:

             ಕಳಸದಿಂದ 5 ಕಿ.ಮೀ. ದೂರ ಇದೆ. ಆದಿಶಕ್ತ್ಯಾತ್ಮಕ ಶ್ರೀ ಸನ್ನ ಪೂಣೇಶ್ವರಿ ದೇವಾಲಯ ಪ್ರಕೃತಿ ಮಡಿಲಲ್ಲಿ ನೆಲೆಗೊಂಡಿದ್ದು, ಹಲವು ಐತಿಹ್ಯಗಳ ಹೇಳಿಕೆಯೊಂದಿಗೆ, ಅನ್ನಪೂರ್ಣೆಯ ಪ್ರತಿಮೆಯು ಅಗಸ್ತ್ಯ ಮಹಾಮುನಿಯಿಂದ ಸಂಸ್ಥಾಪಿತಗೊಂಡಿದೆ. ಮೂಲದೇವಿಯ ‘ಶ್ರೀಯಂತ್ರ’ ರೇಖಿಸಲಾಗಿದೆ. ಇಲ್ಲಿ ಪ್ರಾಮುಖ್ಯವಾಗಿ ಸಮಸ್ತ ಜೀವಿಗಳಿಗೆ, ಪ್ರಾಣಿಗಳಿಗೆ, ಪ್ರಾಣಿಗಳಿಗೆ, ‘ಪ್ರಾಣಶಕ್ತಿ’ ನೀಡುವ ಅನ್ನದ ಅರ್ಚನೆ; ಭೌಗೋಳಿಕವಾಗಿ ಅತ್ಯಂತ ಹೊರಗಿನ, ದೂರದ, ಸರಳವಲ್ಲದ ದಾರಿಯ, ನಾಡಾಗಿರುವುದರಿಂದ ಇದಕ್ಕೆ ಹೊರನಾಡು ಎಂಬ ಸ್ತುತ್ಯ ನಾಮಕರಣ ಪ್ರಾಚೀನರಿಂದ. ಅಮ್ಮನನ್ನು ನಂಬಿ ಕೆಟ್ಟವರಿಲ್ಲ, ಕೆರಳಿಸಿ ಉಳಿದವರಿಲ್ಲ. ಇದೊಂದು ಅಗ್ರಹಾರವಾಗಿತ್ತು ಹಾಗೂ ಇದರ ಸುತ್ತುವರಿದ ಸಾರ್ವಜನೀಯ ರಕ್ಷಣಾ ಗೋಡೆ ಇದೆ. ಇದರ ಉಸ್ತುವಾರಿಯನ್ನು ಧರ್ಮದರ್ಶಿ ಭೀಮೇಶ್ವರ ಜೋಶಿ ನೋಡಿಕೊಳ್ಳುತ್ತಾರೆ.