Kudure Mukha

ಕುದುರೆಮುಖ: 

             ಪಶ್ಚಿಮ ಘಟ್ಟ ಬಹಳಷ್ಟು ಎತ್ತರದ ಪ್ರದೇಶ. ಬೆಟ್ಟ ಶ್ರೇಣಿ ಇಲ್ಲಿ ಸಾಗರದಂಚಿನಲ್ಲಿ ನಿಂತು ನೋಡಿದರೆ ಕುದುರೆಮುಖದಂತೆ ಕಾಣುವುದರಿಂದ ‘ಕುದುರೆಮುಖ’ ಎಂಬ ಹೆಸರು. ಅತ್ಯಮೂಲ್ಯ ಅರಣ್ಯ ಸಂಪತ್ತು, ವನ್ಯಜೀವಿಗಳ ವಾಸ್ತವ್ಯ, ಕಬ್ಬಿಣದ ಅದಿರಿನ ರಾಶಿ ರಾಶಿ ಗುಡ್ಡಗಳು, ಗಣಿಗಾರಿಕೆ-ಅದಿರು ಸಂಸ್ಕರಣ ಮಂಗಳೂರಿನವರೆಗೆ ಪೈಪ್‍ಲೈನ್ ಮಾರ್ಗವಾಗಿ, ಗುರುತ್ವಾಕರ್ಷಣೆ ವಿಧಾನ ಬಳಸಿ, ಅದಿರು, ಸಾಗಾಟ ಕಡಂಬಿ ಜಲಧಾರೆ. ತುಂಗಭದ್ರಾ, ನೇತ್ರಾವತಿಗಳ ಉಗಮ ಈ ಬೆಟ್ಟ ಶ್ರೇಣಿಯಿಂದಲೇ. ಭಗವತೀ ಕಾಡಿನಲ್ಲಿ ಭಗವತಿ ದೇವಾಲಯ ಗುಹೆ ಇದೆ. ಅಲ್ಲಿ ವರಾಹ ಮೂರ್ತಿ ಇದೆ. ಈ ದೇವಾಲಯದ ಪರಿಸರದಲ್ಲಿ ರಕ್ಷಣಾ ಗೋಡೆಯ ಕುರುಹುಗಳು ಮಾತ್ರ ಇವೆ. 



Related Information