Balehonnuru

ಬಾಳೆಹೊನ್ನೂರು:

                      ಬಾಳೆ ಹೊನ್ನೂರು ಎಂದರೆ ರಂಭಾಪುರ ಮಠದ ನೆನಪು. ಭದ್ರಾನದಿಯ ದಂಡೆಯ ಮೇಲೆ, ವೀರಶೈವ ಪಂಚಾಚಾರ್ಯರಲ್ಲಿ ಪ್ರಮುಖರಾದ ರೇಣುಕಾಚಾರ್ಯರು ಸ್ಥಾಪಿಸಿದ ಮಠವಿದು. ಈ ಜಗದ್ದಗುರು ಆಚಾರ್ಯರ ಪೀಠಕ್ಕೆ ವೀರ ‘ಸಿಂಹಾಸನ’ ಎಂದೆ ಹೆಸರು. ಇಕ್ಕೇರಿ ಹಾಗೂ ಮೈಸೂರು ಒಡೆಯರ ತಾಮ್ರ ಸನದುಗಳು ಇಲ್ಲಿವೆ.

             ಮಠಕ್ಕೆ ಹೊಂದಿಕೊಂಡಿದ್ದ ವೀರಭದ್ರೇಶ್ವರ ಗುರಿ ದ್ರಾವಿಡ ಶಿಖರ ಶೈಲಿಯಲ್ಲಿದೆ. ದೊಡ್ಡ ಪ್ರಾಕಾರಾ ಹೊಂದಿದ ಈ ದೇವಸ್ಥಾನ ನವರಂಗ ಮಂಟಪ ಹೊಂದಿ, ಇಕ್ಕೆಲಗಳಲ್ಲಿ ಗರ್ಭಗುಡಿ-ಎಡಭಾಗದಲ್ಲಿ ಗಣಪತಿ ಹಾಗೂ ಶೂಲಬ್ರಹ್ಮ, ಬಲಭಾಗದಲ್ಲಿ ಲಿಂಗಗಳಿವೆ. ಇವೆಲ್ಲ ನೆಲೆಗಳನ್ನು ಸುತ್ತುವರಿದ ಸಾರ್ವಜನೀಯ ಕೋಟೆಯೊಂದಿದ್ದು, ಇಕ್ಕೇರಿ ನಾಯಕರ ಕೊಡುಗೆಯಾಗಿದೆ.Related Information