Amruthapura

ಅಮೃತಾಪುರ:

ತಾಲೂಕು ತರಿಕೆರೆಯಿಂದ 11 ಕಿ.ಮೀ. ಈಶಾನ್ಯದಲ್ಲಿ, ಹೊಯ್ಸಳರ ವಾಸ್ತುಶಿಲ್ಪವನ್ನು ವೈಭವೋಪೇತವಾಗಿ ದರ್ಶಿಸುವ ಅಮೃತೇಶ್ವರ ದೇವಾಲಯ ಹೊಂದಿದೆ. ಕ್ರಿ.ಶ. 1196 ರಲ್ಲಿ ಎರಡನೆಯ ವೀರಬಲ್ಲಾಳನ ಸೇನಾಪತಿ ಅಮೃತೇಶ್ವರ ನಾಯಕನು ಇದನ್ನು ಕಟ್ಟಿದ್ದಾನೆ. ಈ ದೇವಾಲಯದ ಹೊರಬದಿಗೆ ನೂರಾರು ಗೋಪುರಗಳು, ಮಹಿಷಮರ್ದಿನಿ, ಗಣೇಶ, ಗಜಾಪುರ ಸಂಹಾರ, ದರ್ಪಣ ಸುಂದರಿ, ಕಪಚೇಷ್ಟೆಗೊಳಗಾದ ಇನ್ನೋರ್ವ ಸುಂದರಿ, ನವಿರಾದ ಕಂಬಳಗಳು, ಈ ದೇವಾಲಯದ ಸುತ್ತ ಹಾಗೂ ಅದರಾಚೆ ಬ್ರಹ್ಮಪುರಿಗಳನ್ನೂಳಗೊಂಡ, ಗ್ರಾನೈಟ್ ಕಲ್ಲಿನಲ್ಲಿ ಅಳಿದುಳಿದ ಕೋಟೆ. ಇದರ ವಿನ್ಯಾಸ ನಿರ್ದಿಷ್ಟ ಭೂಮಿತಿ ಆಕೃತಿಯಲ್ಲಿ ಇರದೇ, ಪ್ರಾಕೃತಿಕವಾಗಿ, ಕಂಟೂರ್ ರೇಖೆಗಳನ್ನವಲಂಬಿಸಿದೆ. ಡಾ||. ಎಸ್. ಕೆ. ಜೋಶಿ