Kalasapura

ಕಳಸಪುರ:

  ಚಿಕ್ಕಮಗಳೂರು ಪಶ್ಚಿಮ-ಉತ್ತರ ದಿಕ್ಕಿನಲ್ಲಿ ಸುಮಾರು 25 ಕಿ. ಮೀ. ದೂರದಲ್ಲಿ, ಶೃಂಗೇರಿ ಹೋಗುವ ದಾರಿಯಲ್ಲಿ ಇದು ಇದೆ. ಕಳಸ+ಪುರ ಹೀಗೆರಡು ಶಬ್ಧ ಜೋಡಣೆಯೊಂದಿಗೆ, ‘ಕಳಸಪುರ’ ಎಂದು ಪ್ರತೀತಿ, ಹೊಯ್ಸಳ ಕಾಲದಿಂದಲೇ ಪಡೆದಿದೆ. ಸುತ್ತಲಿನ ಸಮೃದ್ಧ ಪ್ರದೇಶ ತೋಟ- ಪಟ್ಟಿಗಳಿಂದ ಭತ್ತ ತೆಂಗು, ಅಡಿಕೆ, ಏಲಕ್ಕಿ, ಕವಳ, ಜೇನುರಸ, ಕಾಯಿಪಲ್ಯಗಳಿಂದ ಸದಾ ಹಚ್ಚ ಹಸಿರು. ಅಲ್ಲಲ್ಲಿ ಕೆರೆಗಳು, ನೀರ್‍ಝರಿಗಳು, ತನ್ನ ಈ ನಿಸರ್ಗದ ಸಂಪತ್ತಿನಿಂದ ಆಗಿನ ಪುರಗಳಲ್ಲಿ ಕಳಸವಾಗಿತ್ತು. ಈಗ ಇದ್ದುದು 4-5 ಸಾವಿರ ಜನವಸತಿಯ ಹಳ್ಳಿ ಮಾತ್ರ, ಊರ ಪಶ್ಚಿಮ ತಾಣದಲ್ಲಿ ಹೊಯ್ಸಳ-ಕಾಲೀನ ದೇವಸ್ಥಾನವೊಂದು ಶಿಥಿಲಾವ್ಯವಸ್ಥೆಯಲ್ಲಿದ್ದು ಅದರಾಚೆ ಅರ್ಧಚಂದ್ರಾಕೃತಿಯಲ್ಲಿ ಕೋಟೆಯ ಭಾಗವೊಂದು ಮಾತ್ರ ಉಳಿದಿದೆ. ಈ ಕೋಟೆಯ ವಿನ್ಯಾಸದ ಒಲವನ್ನು ನೋಡಿದರೆ, ಇದು ಆದಿಯಲ್ಲಿ ವರ್ತುಲಾಕಾರವಾಗಿರಲು ಸಾಕು. ಲೆಟರೈಟ್ ಕಲ್ಲುಗಳು ಕಟ್ಟುವ ಸಾಮಾಗ್ರಿಗಳಲ್ಲಿ ಪ್ರಮುಖ ಪಾತ್ರ ವಹಿಸಿವೆ.ಡಾ||. ಎಸ್. ಕೆ. ಜೋಶಿ