Ambale

ಅಂಬಳೆ :

     ಇದು ಮಧ್ಯಯುಗೀನ ನಾಮವೆತ್ತ ಊರು, ಕೋಟೆಯಿಂದ ಆವೃತ ಹೊಯ್ಸಳರ ಶ್ರೀ ವೇಣುಗೋಪಾಲನ ಮಂದಿರವು ಅವರ ವೈಶಿಷ್ಟ ಶಿಲಾ ಕುಸುರಿನ ಶಿಲ್ಪಕಲೆಯನ್ನು ನೆನಪಿಗೆ ತರುತ್ತದೆ. ಇದು ಚಿಕ್ಕಮಗಳೂರು ಹಾಗೂ ಕಳಸಾಪುರ ಜೋಡಿಸುವ ಜಿಲ್ಲಾ ಮಾರ್ಗದ ಪಕ್ಕದಲ್ಲಿದ್ದು, 20 ನೇಯ ಶತಮಾನದ ಕನ್ನಡ ಸಾಹಿತಿ (ಕನ್ನಡದ ಅಶ್ವಿನಿ ದೇವತೆ) ಸಂಶೋಧಕರು ಆದ ಡಾ.ಎ.ಆರ್. ಕೃಷ್ಣಶಾಸ್ತ್ರಿ ಅವರ ಹುಟ್ಟೂರು, ಅವರ ಮನೆ (ಈ ಲೇಖಕರು ಕಂಡಂತೆ) ಬಹಳ ಶಿಥಿಲಾವ್ಯವಸ್ಥೆಯಲ್ಲಿ ನಿಂತಿದೆ; ನಾಡಿನ ಆ ಮಹಾವಿದ್ವಾಂಸರು ಅಂಬೆಗಾಲಿಟ್ಟು ನಡೆದ, ಪ್ರವೇಶದ್ವಾರ ಹಳೆಯ ಅವರ ಮನೆ ‘ರಾಜ್ಯಸ್ಮಾರಕ’ ವಾದರೆ ನಾಡಿಗೆ ಇತಿಹಾಸದ ಪುಳಕ. ಈ ಊರಿನ ಸುತ್ತ ಕೋಟೆಯ ಗೋಡೆ, ಪ್ರವೇಶಾದ್ವಾರ, ಇನ್ನೂ ಶಿಥಿಲವಾಗಿ ಉಳಿದಿದ್ದು, ಹೊಯ್ಸಳರ ಕಾಲದ ನೆನಪನ್ನು ತರುತ್ತಿದೆ. ಇದು ಸರಳವಾಗಿ ಹೋಗುವ ದಿಮ್ಮೆಯ ಮೇಲಿನ ನಿರ್ದಿಷ್ಟ ಜಾಮಿತಿ ಇಲ್ಲದ ಕೋಟೆ. ಲೆಟರೈಟ್ ಕಲ್ಲುಗಳಿಂದ ನಿರ್ಮಾಣಗೊಂಡಿದೆ; ಅಲ್ಲಲ್ಲಿ ಗೋಡೆಯ ತುಣುಕುಗಳು ಮಾತ್ರ ಕಾಣಸಿಗುತ್ತವೆ. ಡಾ||. ಎಸ್. ಕೆ. ಜೋಶಿ