Devanuru

ದೇವನೂರು 

            ಇದೊಂದು ಅಗ್ರಹಾರದ ಊರು. ಇಲ್ಲಿಯ ಶ್ರೀ ವೇಣುಗೋಪಾಲ ಇತ್ಯಾದಿ ನಾಲ್ಕು ದೇವಸ್ಥಾನಗಳು 12 ನೇಯ ಶತಮಾನದ ಹೊಯ್ಸಳದ ವಾಸ್ತು ದರ್ಶನೀಯ ಗುಡಿಗಳಿಂದ ‘ದೇವರೇ ವಸತಿ ಮಾಡಿದ ‘ದೇವನೂರು ಇದಾಗಿದೆ. ಬ್ರಾಹ್ಮಣ್ಯ, (ಃಡಿಚಿhmಚಿಟಿiಛಿಚಿಟ moಟಿumeಟಿಣs), ದೇವಾಗಾರಾಗಳು, ವೈಷ್ಣವ ಚಿಂತನೆಯ ಅಗ್ರಹಾರ, ಊರ ಪರಿಸರದ ವಿಶಾಲ ಕೆರೆ, ಈ ಊರ ಹೊರಭಾಗದಲ್ಲಿ ನೆಲೆಯನ್ನು ಸುತ್ತಿಕೊಂಡಿರುವ ಅಳಿದುಳಿದ ಕೋಟೆ, ಎತ್ತರವಾದ ಬುರುಜು, ಫಿರಂಗಿ ಇತ್ಯಾದಿಗಳು. ಈ ತಾಣವು ಹೊಯ್ಸಳರ ಕಾಲದಲ್ಲಿ ಮಹತ್ವದ ನೆಲೆಯಾಗಿತ್ತೆಂದು ಅಥೈಸುತ್ತವೆ. ಜೈಮಿನಿ ಭಾರತ ರಚನಾಕಾರ ಕವಿ ಲಕ್ಮೀಶ ಹಾಗೂ ‘ಜಗನ್ನಾಥ ವಿಜಯ’ ಬರೆದ ರುದ್ರಭಟ್ಟನ ಊರು ಇದು.ಡಾ||. ಎಸ್. ಕೆ. ಜೋಶಿ