Ballalarayanadurga

ಬಲ್ಲಾಳ ರಾಯನ ದುರ್ಗ:

    ಇದು ಚಿಕ್ಕಮಗಳೂರು ಜಿಲ್ಲೆಯ (ತಾ. ಚಿಕ್ಕಮಗಳೂರು) ನೆನಪಿಡುವ ಕೋಟೆ. ಬಲಯುತ+ಆಳ=ಬಲ್ಲಾಳ ವೇರ ಬಲ್ಲಾಳ ರಾಯನಿಂದ ರಚಿತವಾದ ಈ ಕೋಟೆ ಒಂದು ವನದುರ್ಗ (ಆಳ=ಭಟ=ಹೋರಾಟಗಾರ) ವಾಗಿದ್ದು, ಆಕ್ರಮಣಕ್ಕೆ ಅಷ್ಟು ಸುಲಭವಿಲ್ಲ. ಸುತ್ತಲೂ ಅರಣ್ಯ ದಟ್ಟವಾಗಿ ಹಬ್ಬಿದ್ದು, ಅಲ್ಲಲ್ಲಿ ಎತ್ತರದ ಗಿರಿ ಗಿರಿಗಳು ಎದ್ದು ನಿಂತು, ಸ್ವಾಭಾವಿಕವಾದ ಸಂರಕ್ಷಣೆ ನೀಡಿವೆ. ಈ ದುರ್ಗದಲ್ಲಿ, ನವಾಬ ಹೈದರನು ಕೆಳದಿಯ ವೀರಮ್ಮಾಜಿ ರಾಣಿಯನ್ನು ಕೈದಿಯನ್ನಾಗಿ ಇಟ್ಟಾಗ ತಪ್ಪಿಸಿಕೊಂಡು ಹೋದದ್ದನ್ನು ಇತಿಹಾಸವು ದಾಖಲಿಸುತ್ತದೆ. (ಶ್ರೀ ಕೆಳದಿ ಗುಂಡಾಜೋಯಿಸರು) ಈಗಲೂ, ಇಲ್ಲಿ ‘ಬಲ್ಲಾಳ’ ಎಂಬ ಶಿರಿವಂತರ ಮನೆತನಗಳು ಹೊಯ್ಸಳ ಹಾಗೂ ವಿಜಯನಗರ ಕಾಲದ ವೈಭವದ ದ್ಯೋತಕವಾಗಿವೆ. ಡಾ||. ಎಸ್. ಕೆ. ಜೋಶಿRelated Information