Chickmagalur and Hiremagaluru

ಚಿಕ್ಕಮಗಳೂರು ಹಾಗೂ ಹಿರೇಮಗಳೂರು :

          ಇದು ಈ ನಮ್ಮ ಸಮಕಾಲೀನ ಜಿಲ್ಲಾ ಹೆಡ್ ಕ್ವಾರ್ಟರ್ಸ್ ‘ಕಿರಿಯ ಮುಗಳಿ’ ‘ಪಿರಿಯ ಮುಗಳಿ’ ಎಂದು ಶಿಲಾಶಾಸನಗಳಲ್ಲಿ ಈ ಸ್ಥಳಗಳ ಉಲ್ಲೇಖ. ‘ಮುಗಳಿ’ ಒಂದು ವೃಕ್ಷ ಜಾತಿ. ‘ಚಿಕ್ಕ+ಮುಗಳಿ+ಊರು’ ಹಾಗೂ ‘ಹಿರಿಯ+ಮಗಳ+ಊರು’ ಎಂತಲೂ ಕೆಲ ವೈಯಾತರಣಿಕರ ಇತ್ಯರ್ಥ. ಶ್ರೀ ಕೋದಂಡರಾಮನ ದೇವಸ್ಥಾನ ಹಾಗೂ ಅದರ ಪರಿಸರದ ಗಣೇಶಗುಡಿ ಹೊಯ್ಸಳರ (12 ಶತಮಾನ ಕ್ರಿ.ಶ) ವಾಸ್ತು ಶೈಲಿಯಲ್ಲಿವೆ. ಇದು ಚಿಕ್ಕಮಗಳೂರಿನ (2 ಕಿ.ಲೋ ಮೀಟರ್) ಹೊರವಲಯದಲ್ಲಿದೆ. ಇದೊಂದು ಅಗ್ರಹಾರವಾಗಿದ್ದು, ಕೋಟೆಯ ಒಳಗಿದೆ. 

                    ಈ ಎರಡು ತಾಣಗಳನ್ನು ರಕ್ಷಿಸುತ್ತಿದ್ದ ರಕ್ಷಣಾ ಕೋಟೆಯು ಹೊಯ್ಸಳ ಕಾಲದಲ್ಲಿ ನಿರ್ಮಾಣವಾಗಿರಲು ಸಾಕು. ತದನಂತರ, ಸರಿದ ಕಾಲದಲ್ಲಿ ವಿಜಯನಗರ, ಮೈಸೂರು ಒಡೆಯರ್, ಟಿಪ್ಪು ಸುಲ್ತಾನರು ಇದನ್ನು ಹೆಚ್ಚು ಬಲಯುತ ಹಾಗೂ ವಿಸ್ತಾರಗೋಳಿಸಿದ್ದಾರೆ. ವಿಶೇಷ ಗಮನ ಸೆಳೆಯುವ ಬುರುಜುಗಳು (ಃಚಿsಣoiಟಿs) ಪ್ರವೇಶದ್ವಾರಗಳು ಹಾಗೂ ಸೈನಿಕ ಪಥ (ಖಚಿmಠಿಚಿಡಿಣs), ಈ ಗಿರಿದುರ್ಗ +ಮಸ್‍ಜಿದ್‍ಗಳು (19ನೇ ಶತಮಾನ), ತತ್‍ಪೂರ್ವದ ಶತಮಾನದ ಸೇಂಟ್ ಜೋಸೆಫ್ ಕಥೆಡ್ರಲ್ ಹಾಗೂ ಸೇಂಟ್ ಎಂಡ್ರೂಜ್ ವನದುರ್ಗದ ವಿಶೇಷತೆಗಳಾಗಿವೆ. ಸಂಗೀತ ಮಸಜಿದ್ ಹಾಗೂ ಜಾಮೀಯಾ ಚರ್ಚ್‍ಗಳು ಈ ತಾಣದ ಧಾರ್ಮಿಕ ಸಹನೆಯ ದ್ಯೋತಕಗಳಾಗಿವೆ. ಕಟ್ಟಿರಮ್ಮಾ ದೇವಸ್ಥಾನ ಪೂರಾರಿ ದಲಿತ ವರ್ಗದವನಿದ್ದು, ಇದು ಪರಂಪರಗತವಾಗಿದೆ. ಎಂದು ಸ್ಥಾನಿಕರ ಅಭಿಮಾನ. ಡಾ||. ಎಸ್. ಕೆ. ಜೋಶಿ