Belavaadi

ಬೆಳವಾಡಿ (ತಾ: ಚಿಕ್ಕಮಗಳೂರು):

                   ಬೆಳಗಳಿಂ+ಮೆಳಗಳಿಂ ಇರುವ ವಾಡಿ, ಇದು. ಇದೊಂದು ಪ್ರಾಚೀನ ಕರ್ನಾಟಕದ ಪ್ರಸಿದ್ಧ ತಾಣ. ಹೊಯ್ಸಳ ಆಡಳಿತದ ಒಂದು ಕೇಂದ್ರ, ಅಗ್ರಹಾರ. ಕ್ರಿ.ಶ. 1206 ರ ಒಂದು ಶಿಲಾಲೇಖವು, ಇಲ್ಲಿಯ ತ್ರಿಕೂಟ ದೇವಸ್ಥಾನದ, ಹೊಯ್ಸಳರ ವಾಸ್ತು ಕೊಡುಗೆ. ಶ್ರೀ ವೀರನಾರಾಯಣ ಮೂರ್ತಿ, ಶ್ರೀ ವೇಣುಗೋಪಾಲನ ಪ್ರತಿಮೆ, ಶ್ರೀಯೋಗನರಸಿಂಹನ ಮೂರ್ತಿಗಳು ಪ್ರಮಾಣಬದ್ಧ, ಸೌಂದರ್ಯ ಹಾಗೂ ಮೃದುಲಗಳನ್ನು ಎತ್ತಿ ತೋರಿಸಿ, ಆ ಕರ್ತೃಗಳ ನೈಪುಣ್ಯಗುಣವನ್ನು ಪ್ರದರ್ಶಿಸಿವೆ. ಇದು ಚಿಕ್ಕಮಗಳೂರು-ಜಾವಗಲ್ ಮಧ್ಯದಲ್ಲಿದೆ.

                   ಈ ಶ್ರೀ ವೀರನಾರಾಯಣ ದೇವಸ್ಥಾನವೆಂದೇ ಪ್ರತೀತಿಯಾದ ಗುಡಿಯು ಬ್ರಾಹ್ಮಣ್ಯ ವಸತಿ, ಅಗ್ರಹಾರ, ಆಗಿನ ಇನ್ನಿತರ ಪ್ರತಿಷ್ಠಿತರ ಗೃಹಗಳು ಒಂದೇ ತಾಣದಲ್ಲಿ ಹಮ್ಮಿಕೊಂಡಿದ್ದು, ಇವುಗಳ ಸುತ್ತ ಲೆಟರೈಟ್ ಕಲ್ಲುಗಳಿಂದ ನಿರ್ಮಿತ ಕೋಟೆ ಇದ್ದ ಬಗೆ, ಈಗ ಅಲ್ಲಲ್ಲಿ ಮಾತ್ರ ನಿಂತ ಕೋಟೆಗಳ ಭದ್ರತಾ ಗೋಡೆಯ ತುಣುಕುಗಳು (ಛಿhuಟಿಞs) ಸ್ಪಷ್ಟಿಕರಿಸುತ್ತವೆ. ಖಚಿತಗೊಳಿಸುತ್ತವೆ.

                    ಈ ಕೋಟೆಯು ಯಾವುದೇ ವಿಶಿಷ್ಟ ಭೂಮಿತಿ ಆಕೃತಿ ಹೊಂದಿರದೆ, ಕಂಟೂರ್ (ಛಿoಟಿಣouಡಿ) ರೇಖೆಗುಂಟ ಕಟ್ಟಲಾಗಿದೆ. ಈ ಮುಖ್ಯ ಕೋಟೆಯ ಉತ್ತರ ಕಡೆಗೆ, ಅನತಿ ದೂರದಲ್ಲಿ ‘ಹುತ್ತ ಗಣಪತಿ’ ಎಂಬ ದೇವಸ್ಥಾನ ಪುಟ್ಟ ಸ್ಥಿತಿ ಹಾಗೂ ವಿನ್ಯಾಸದಲ್ಲಿ ನಿಂತಿದೆ. ಇದರಾಚೆ ಒಂದು ಆಗಿನ ಕಾಲದ ಕೆರೆ ಇದೆ. ಈ ಹುತ್ತ ಗುಣಪತಿ ಹಾಗೂ ಕೆರೆಗಳನ್ನು ಒಳಗೊಂಡ ಮತ್ತೊಂದು ತಟಕೋಟೆಯು ಚಂದ್ರಾರ್ಕ ವಿನ್ಯಾಸದಲ್ಲಿದ್ದು, ಮುಖ್ಯ ಕೋಟೆಯನ್ನು ಎರಡು ಗೊನೆಗಳಲ್ಲಿ (exಣeಟಿಜeಜ eಟಿಜs oಜಿ ಜಿoಡಿಣತಿಚಿಟಟ) ಕೈಚಾಚಿದಂತೆ ಅಪ್ಪಿಕೊಂಡಿದೆ. ಇದೊಂದು ಹೊಯ್ಸಳ ಕಾಲೀನ ನಾಮವಂತ ರಕ್ಷಣಾಗೋಡೆಗಳ ವನದುರ್ಗ ಹಾಗೂ ಸ್ಥಳ ದುರ್ಗಗಳ ‘ಸಂಯುಕ್ತ ದುರ್ಗ (ಖಿಡಿಚಿಜiಣioಟಿ ಜಿeeಜs hisಣoಡಿಥಿ): ವೆಂದು ಹೇಳಬಹುದು. 

                    ಈ ಬೆಳವಾಡಿಯು ಬಹಳಷ್ಟು ಪ್ರಾಚೀನ ಪರಂಪರೆ ಹೊಂದಿದ ಬಗ್ಗೆ ಒಂದು ಜನಪದ ನುಡಿಯು, ಇದನ್ನು ‘ಏಕಚಕ್ರಪುರ’ ವೆಂದು ಹೇಳಿ, ಮಹಾಭಾರತದ ಪಾಂಡವರ ವನವಾಸದ ಕಾಲವನ್ನು ಸೂಚಿಸುತ್ತದೆ. ಬಕಾಸುರನ ವಧೆಯು ಭೀಮನಿಂದ ಇಲ್ಲಿ ಆದ ಬಗ್ಗೆ ಅದು ಹೀಗೆ ಹೇಳುತ್ತದೆ. ಅದು ಹೀಗೆ

‘ಏಕ ಚಕ್ರಪುರದಲ್ಲಿದ್ದ ನೇಕ-ವಿಪ್ರಸಮೂಹಕ್ಕೆ ಭೀತಕರಾಗಿದ್ದ ಬಾಕನ್ನ ನೀಕಿ ಹಾಕಿದಲೋಕಕ್ಕೆ ಕಂಟಕನಾದ ಕಾಕು ದುರ್ಯೋಧನನ ಕೊಂದ ಶ್ರೀಕೃಷ್ಣನ ಪರಮಭಕ್ತ ದೇಕವೀರಗೆ ಆಲಧಿ ಲಂಘಿಸಿದಗೆ ಜಯ ಮಂಗಳಂಸುಲಲಿತ ಮುಖ್ಯ ಪ್ರಾಣಗೆ ಶುಭ ಮಂಗಳಂ’          ಡಾ||. ಎಸ್. ಕೆ. ಜೋಶಿ