Tagore Beach

ಟಾಗೋರ್ ಕಡಲತೀರ

                      ‘ಕರ್ನಾಟಕದ ಕಾಶ್ಮೀರ’ ಎಂದೇ ಕರೆಸಿಕೊಂಡಿದೆ ಕಾರವಾರ. ಇದು ಖ್ಯಾತ ಬಂದರು ಕೂಡಾ. ಇಲ್ಲಿಯ ಕಡಲ ತೀರದಲ್ಲಿ ಜನರು ತಂಡ ತಂಡವಾಗಿ ಕಾಣುತ್ತಲೇ ಇರುತ್ತಾರೆ. ದೃಷ್ಟಿ ಹಾಯಿಸಿದಷ್ಟೂ ಸಮುದ್ರ. ಆಕಾಶ ನೀರು ಒಟ್ಟಾಗಿಯೇ ಇವೆಯೇನೋ ಎಂದು ಅನ್ನಿಸದೇ ಇರದು ಇದನ್ನು ಕಂಡಾಗ ಒಂದು ತುದಿಯಲ್ಲಿ ಕಾಳಿ ನದಿ ಸಮುದ್ರವನ್ನು ಸೇರುವ  ದೃಶ್ಯ ಇದರ ಸೌಂದರ್ಯವನ್ನು ಇನ್ನಷ್ಟು ವೃದ್ಧಿಸಲು ಕಾರಣವಾಗಿದೆ. ಸೂರ್ಯಾಸ್ತದ  ಸಮಯದಲ್ಲಿ ಆಗಸದಲ್ಲಿ ಹೊಸ ಹೊಸ ಚಿತ್ತಾರಗಳು ಪ್ರವಾಸಿಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯಲು ಸಹಾಯ ಮಾಡುತ್ತವೆ. ವಿಶ್ವಕವಿ ರವಿಂದ್ರನಾಥ ಟಾಗೋರರು ಇಲ್ಲಿನ ಸೌಂದರ್ಯವನ್ನು ಕುರಿತು “ಕಾರವಾರದ ಚೆಲುವು ಸೌಂದರ್ಯದ ಕುರುಹು” ಎಂದು ಉದ್ಘಾರ ತೆಗೆದಿದ್ದಾರೆ . ಅವರು ತಮ್ಮ ‘ಗೀತಾಂಜಲಿ’ ಕೃತಿ ರಚಿಸಲು ಕಾರವಾರ ಸ್ಫೂರ್ತಿಯಾಯಿತೆಂದು  ಉಲ್ಲೇಖವಿದೆ. ವೀಕ್ಷಣೆಗೆ ಸೂಕ್ತ ಸಮಯ: ಆಗಸ್ಟ್ ದಿಂದ ಮಾರ್ಚ್