Thilamaathi Beach

ತೀಳಮಾತಿ ಕಡಲತೀರ 

                     ಉತ್ತರ ಕನ್ನಡ ಜಿಲ್ಲೆಯ ಗಡಿಯ ಕೊನೆಯ ಕಡಲ ತೀರ ಇದು. ಇಲ್ಲಿಯ ಮರಳಿನ ಬಣ್ಣ ಕಪ್ಪು. ಅದಕ್ಕೆ ಇದನ್ನು ‘ತೀಳಮಾತಿ’ ಎಂದು ಕರೆಯಲಾಗುತ್ತದೆ. ಕೊಂಕಣಿ ಭಾಷೆಯಲ್ಲಿ ತೀಳ್ ಎಂದರೆ ಎಳ್ಳು ಎಂದು ಅರ್ಥ. ಭಾರತದ ಕಡಲ ತೀರಗಳಲ್ಲಿ ಕಪ್ಪು ಉಸುಕಿನ ಕಡಲ ತೀರಗಳು 2 ಮಾತ್ರ ಇವೆ. ಅದರಲ್ಲಿ ಇದೂ ಕೂಡಾ ಒಂದು. ಇದನ್ನು ನೋಡಬೇಕಾದರೆ ಮಾಝಾಳಿಯಿಂದ ಚಿಕ್ಕ ಚಾರಣ ಅನಿವಾರ್ಯ. ಸೂರ್ಯಾಸ್ತದ ದೃಶ್ಯ ಅದ್ಭುತ. ಆ ಸಮಯದಲ್ಲಿ ಸಮುದ್ರದ ನೀರು ಕೆಂಪಾಗಿ ಕಂಗೊಳಿಸುತ್ತದೆ. ಇಲ್ಲಿ ಮೀನುಗಾರಿಕೆ  ವಿಶೇಷ.  ವಿಕ್ಷಣೆಗೆ ಸೂಕ್ತ ಸಮಯ ಅಕ್ಟೋಬರ್‍ನಿಂದ ಮಾರ್ಚ.