Sri Jagadguru Karasthala Nagalinga Swamy Temple

ಶ್ರೀ ಜಗದ್ಗುರು ಕರಸ್ಥಲ ನಾಗಲಿಂಗ ಸ್ವಾಮಿ ದೇವಸ್ಥಾನ ಉಪ್ರಳ್ಳೀ 

                     ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ಸೇರಿದ ಪುಟ್ಟ ಹಳ್ಳಿ ಉಪ್ರಳ್ಳಿ. ಇಲ್ಲಿಯ ನಾಗಲಿಂಗ ಸ್ವಾಮಿ ಹಾಗೂ ಕಾಳಿಕಾಂಬಾ ದೇವಸ್ಥಾನ ಐತಿಹಾಸಿಕ ಮಹತ್ವ ಪಡೆದಿದೆ. ಮೂಡುಬಿದಿರೆಯ ದೇವಿಯ ಮನೆಯಲ್ಲಿ ವಾಸವಾಗಿದ್ದ ಶ್ರೀ ಅಯ್ಯ ಜಗದ್ಗುರುಗಳು ಉಪ್ರಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಭೂತಿ ಉಂಡೆಗಳನ್ನು ಬಿಟ್ಟು ಹೋಗಿರುವ ಪವಾಡಸದೃಶ ದೃಷ್ಟಾಂತಗಳಿವೆ. ಇಲ್ಲಿ ಉಂಡೆಗಳನ್ನು ವಿಶ್ವಕರ್ಮ ಹಾಗೂ ನಾಗಲಿಂಗ ಸ್ವಾಮಿ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಈ ಕ್ಷೇತ್ರದ ಆ ವಿಭೂತಿ ಪವಾಡ ರೂಪದಲ್ಲಿ ವರ್ಷ ವರ್ಷವೂ ಬೆಳೆಯುತ್ತಿದೆ. ಭಾವುಕ ಹಾಗೂ ಆಸ್ತಿಕ ಜನರಿಗೆ ಇದೊಂದು ಪುಣ್ಯ ಕ್ಷೇತ್ರವಾಗಿದೆ.