Kalikamba Temple Barkuru

ಬಾರಕೂರಿನ ಶ್ರೀ ಕಾಳೀಕಾಂಬಾ ದೇವಸ್ಥಾನ :

                 ಐತಿಹಾಸಿಕ ಪ್ರಸಿದ್ಧ ಬಾರಕೂರಿನಲ್ಲಿ 365 ದೇವಾಲಯಗಳು ಇವೆ ಎಂದು ಪ್ರತೀತಿ ಇದೆ. ಈ ದೇವಾಲಯವು ವಿಶ್ವಕರ್ಮರ ಅತೀ ಪ್ರಚೀನ ದೇವಸ್ಥಾನವೆಂದು ಪರಿಗಣೀಸಲ್ಪಟ್ಟಿದೆ. ಕಾಳಿಕಾಂಬೆ ವಿಶ್ವಕರ್ಮದ ಜಾಗೃತ ದೇವತೆಯೆಂದು ಭಾವಿಸಲಾಗುತ್ತದೆ. ವಿಶಿಷ್ಟ ವಾಸ್ತು ಶಾಸ್ತ್ರದ ಹಿನ್ನೆಲೆಯಲ್ಲಿ ನವೀಕರಣಗೊಂಡ  ದೇವಾಲಯದಲ್ಲಿ ದೀಪೋತ್ಸವವು ಊರ ಪರವೂರಿನ ಜನರನ್ನು  ಆಕರ್ಷಿಸುವುದಲ್ಲದೆ ಊರನ್ನು ಬಿಟ್ಟು ಪರವೂರಿನಲ್ಲಿ ನೆಲೆಸಿರುವ ವಿಶ್ವಕರ್ಮರು ವಿಶೇಷವಾಗಿ ಆಗಮಿಸಿ ದೇವಿ ಪ್ರಸಾದ ಸ್ವೀಕರಿಸಲು ಉತ್ಸುಕರಾಗುತ್ತಾರೆ. ಬಾರಕೂರು ಐತಿಹಾಸಿಕ ಮಹತ್ವದ ಸ್ಥಳವಾಗಿದ್ದು ಇಲ್ಲಿ ನಿರ್ಮಿಸಿದ ವಾಸ್ತುಶಿಲ್ಪಗಳ ರಚನೆಯಲ್ಲಿ ವಿಶ್ವಕವರ್i ಶಿಲ್ಪಗಳ ಪಾತ್ರವೂ ಮಹತ್ವದ್ದಾಗಿರಬೇಕೆಂದು ಊಹಿಸಲಾಗುತ್ತದೆ.