Katapaadi Shri Vishwakarameshwara Kalikamba Temple

ಕಟಪಾಡಿ ಶ್ರೀ ವಿಶ್ವಕರ್ಮೇಶ್ವರ ಕಾಳೀಕಾಂಬಾ ದೇವಸ್ಥಾನ  :

           ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಸಿಗುವ ಕಟಪಾಡಿಯ ತೆಂಕಾರು ಮಾಗಣೆಯ ಶ್ರೀ ಕ್ಷೇತ್ರ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವೆ ದೇವಸ್ಥಾನವು ಪುರಾತನ ಕಾಲದಿಂದಲೂ ಐತಿಹಾಸಿಕ ಮಹತ್ವದ ಸ್ಥಳ. ಉಡುಪಿ ಭಾಗದ ಖಾನ್ ಬಹುದ್ದೂರ್ ಅಬ್ದಲ್ ಸಾಹೇಬರಿಂದ ಸಹಾಯ ಪಡೆದು ನೀರೆಬೈಲೂರಿನ ಪ್ರಸಿದ್ದ ಜ್ಯೋತಿಷಿ ಬ್ರಹ್ಮಶ್ರೀ ವೇದಾಚಾರ್ಯರ ಅಂದಿನ ಸಲಹೆಯಂತೆ ಕಟಪಾಡಿಯಲ್ಲಿ ಧರ್ಮದರ್ಶಿ ಶ್ರೀ ವೇಣುಗಿರಿ ಅನಂತಚಾರ್ಯರು ದೇವಾಲಯದ ನಿರ್ಮಾಣಕ್ಕೆ ಕಾರಣರಾದರು. ಮೈಸೂರಿನ ಶಿಲ್ಪ ಸಿದ್ಧಾಂತಿ ಶ್ರೀ ಸಿದ್ಧಲಿಂಗ ಸ್ವಾಮಿಗಳವರ ಅಮೃತ ಹಸ್ತದಿಂದ ಒಂದೇ ಗರ್ಭಗುಡಿಯಲ್ಲಿ ವೇದಿಕೆಯ ಮೇಲ್ಗಡೆ ವಿಶ್ವಕರ್ಮನನ್ನು ಕೆಳಗಡೆ ಕಾಳಿಕಾಂಬೆಯನ್ನು ಪ್ರತಿಷ್ಠಾಪಿಸಲಾಗಿದೆ. ಇದೇ ಕ್ಷೇತ್ರದಲ್ಲಿ ಈಶಾನ್ಯ ಭಾಗದಲ್ಲಿ ಮದಾನೆಗುಂದಿ ಶ್ರೀ ನಾಗ ಧರ್ಮೇಂದ್ರ ಸ್ವಾಮೀಜಿಯವರು ಮಹಾಸಮಾಧಿ ಹೊಂದಿರುವುದರಿಂದ ಚಿಕ್ಕ ಮಠವನ್ನು ಸ್ಥಾಪಿಸಲಾಗಿದೆ.